ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಕೆಲವೊಂದು ಬಾರಿ ಊಟ ಸರಬರಾಜಿನಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಸಾಮಾನ್ಯವಾಗಿ ಕೇಳಿದ ಆಹಾರಕ್ಕಿಂತ ಯಾವುದಾರು ಬೇರೆ ಡಿಶ್​​ ಕೊಟ್ಟಿರ್ತಾರೆ. ಆಹಾರದಲ್ಲಿ ಹುಳ ಹುಪ್ಪಟೆ ಅಥವಾ ಬೇರೆ ಏನಾದ್ರು ಸಿಕ್ಕಿರುವಂತಹ ಘಟನೆಗಳೂ ಇವೆ.
ಸಾಮಾನ್ಯವಾಗಿ ಚಿಕನ್​ ಅಥವಾ ಮಟನ್​​ನಿಂದ ತಯಾರಿಸಿದ ಊಟದಲ್ಲಿ ಬೇರೆ ಮಾಂಸವನ್ನ ಉಪಯೋಗಿಸಿ ಮಾಡಲಾಗುತ್ತೆ ಎಂಬ ಸಾಕಷ್ಟು ಆರೋಪಗಳು ಆಗಾಗ ಕೇಳಿ ಬರುತ್ತೆ. ಹಾಗೆಯೇ ಆಗಿರುವ ಸಾಕಷ್ಟು ಉದಾಹರಣೆಗಳು ಸಹ ಇದೆ. ವಿಚಿತ್ರ ಅಂದ್ರೆ ಇವೆಲ್ಲವನ್ನ ಹೊರತುಪಡಿಸಿ ಚಿಕನ್​ ಆರ್ಡರ್‌ ಮಾಡಿದ ಗ್ರಾಹಕನಿಗೆ ಇಲಿ ಮಾಂಸವನ್ನು ರೆಸ್ಟೋರೆಂಟ್​​ ಒಂದರಲ್ಲಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ
ಚಿಕನ್​ ಬದಲು ಇಲಿಯ ಮಾಂಸ!ಮುಂಬೈನ ಪ್ರತಿಷ್ಠಿತ ರೆಸ್ಟೋರೆಂಟ್‌ನಲ್ಲಿ ಚಿಕನ್‌ ಆರ್ಡರ್‌ ಮಾಡಿದ ಗ್ರಾಹಕನಿಗೆ ಇಲಿಯ ಮಾಂಸವನ್ನು ಸರಬರಾಜು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮುಂಬೈನ ಬಾಂದ್ರಾ ಪ್ರದೇಶದ ಪಾಲಿ ಹಿಲ್‌ನಲ್ಲಿರುವ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಘಟನೆ ನಡೆದಿದೆ. ಅನುರಾಗ್ ಸಿಂಗ್ ಎಂಬುವರಿಂದ ಪೊಲೀಸ್ ಗೆ ದೂರು ನೀಡಲಾಗಿದೆ. ಬ್ರೆಡ್‌ನೊಂದಿಗೆ ಚಿಕನ್ ಮತ್ತು ಮಟನ್ ಥಾಲಿ ಪ್ಲ್ಯಾಟರ್ ಆರ್ಡರ್ ಮಾಡಿದ್ದರು. ಈ ವೇಳೆ ಚಿಕನ್ ಜೊತೆಗೆ ಅನುಮಾನಸ್ಪದ ಮಾಂಸದ ತುಂಡು ಪತ್ತೆಯಾಗಿದೆ. ಈತ ಇದು ಇಲಿಯ ಮಾಂಸವೆಂದು ಪೊಲೀಸರಿಗೆ ದೂರು ನೀಡಿದ್ದಾನೆ.
ಈ ಬಗ್ಗೆ ಅನುರಾಗ್‌ ಸಿಂಗ್ ರೆಸ್ಟೋರೆಂಟ್ ಮ್ಯಾನೇಜರ್ ಅವರನ್ನು ಕೇಳಿದಾಗ ಅವರು ನಿರ್ಲಕ್ಷ್ಯತನದ ಉತ್ತರವನ್ನು ನೀಡಿದ್ದಾರೆ. ಇದರಿಂದ ಕೋಪಗೊಂಡ ಗ್ರಾಹಕ ಅನುರಾಗ್ ಸಿಂಗ್ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ರೆಸ್ಟೋರೆಂಟ್ ಮ್ಯಾನೇಜರ್ ವಿವಿಯನ್ ಆಲ್ಬರ್ಟ್ ಶಿಕಾವರ್ ಹಾಗೂ ಆ ಸಮಯದಲ್ಲಿ ಹೋಟೆಲ್‌ನಲ್ಲಿದ್ದ ಬಾಣಸಿಗ ಮತ್ತು ಚಿಕನ್ ಸರಬರಾಜುದಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ರುದಾರರಾದ ಅನುರಾಗ್ ಸಿಂಗ್ ಹೇಳುವ ಪ್ರಕಾರ, ಅವರು ಬಾಂದ್ರಾ ಪಶ್ಚಿಮದ ಪಾಲಿ ಹಿಲ್‌ನಲ್ಲಿರುವ ರೆಸ್ಟೋರೆಂಟ್‌ಗೆ ತಮ್ಮ ಸ್ನೇಹಿತನೊಂದಿಗೆ ಊಟ ಮಾಡಲು ಹೋಗಿದ್ದರು. ಅವರು ಬ್ರೆಡ್ನೊಂದಿಗೆ ಚಿಕನ್ ಮತ್ತು ಮಟನ್ ಥಾಲಿ ಆರ್ಡರ್ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
