ಮುಂಬೈ:ಮದುವೆಯಾದವರು ವಿವಾಹ ವಾರ್ಷಿಕೋತ್ಸವ ದಿನಾಂಕ ಮರೆತು ಪತ್ನಿಗೆ ವಿಶ್ ಮಾಡಲು ಮರೆತಿದ್ದೀರಾ? ಹಾಗಿದ್ದರೆ ಇನ್ಮುಂದೆ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ. ವಿವಾಹ ವಾರ್ಷಿಕೋತ್ಸವಕ್ಕೆ ವಿಶ್ ಮಾಡಲು ಮರೆತ ಪತಿಗೆ ಮಹಿಳೆ ಹಿಗ್ಗಾಮುಗ್ಗಾ ಹೊಡೆದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾಳೆ.
ಇದನ್ನೂ ಓದಿ:7.9ಲಕ್ಷ ರೂ. ಖರ್ಚು ಮಾಡಿ ವಿಶ್ವದಲ್ಲೇ ಅತಿ ದೊಡ್ಡ ತುಟಿ ಪಡೆದ ಯುವತಿ!
ವಿಶಾಲ್ ನಂಗ್ರೆ ಪೂರ್ವ ಮುಂಬೈನ ಗೋವಂಡಿಯ ನಿವಾಸಿ. ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದ. ವಿಶಾಲ್ 2018ರಲ್ಲಿ ಮದುವೆಯಾಗಿದ್ದಾನೆ. ಯಾವುದೇ ಸಮಸ್ಯೆಗಳಿಲ್ಲದೆ ಜೀವನ ಸಾಗುತ್ತಿತ್ತು. ಆದರೆ ವಿಶಾಲ್ ನಂಗ್ರೆ ತನ್ನ ವಿವಾಹ ವಾರ್ಷಿಕೋತ್ಸವ ದಿನಾಂಕ ಮರೆತು ಎಂದಿನಂತೆ ಬೆಳಗ್ಗೆ ಎದ್ದು, ಆಟೋ ಸ್ವಚ್ಚಗೊಳಿಸಿ ಆಹಾರ ಸೇವಿಸಿ ಕೆಲಸಕ್ಕೆ ಹೊರಟಿದ್ದಾನೆ. ಪತಿ ಸಂಜೆಯೂ ವಿಶ್​​ ಮಾಡದೆ ಇದ್ದಾಗ ದಂಪತಿ ಮಧ್ಯೆ ಜಗಳವಾಗಿದೆ. ಮದುವೆ ವಾರ್ಷಿಕೋತ್ಸವ ನೆನಪಾಗಿ ಪತ್ನಿಯ ಬಳಿ ಕ್ಷಮೆ ಕೇಳಿದ್ದಾನೆ. ಆದರೆ ಪತ್ನಿಯ ಕೋಪ ಮಾತ್ರ ಕಡಿಮೆ ಆಗಿಲ್ಲ.
ಇದನ್ನೂ ಓದಿ:ಮರ್ಯಾದೆಗೆ ಅಂಜಿ ಮಗಳ ರುಂಡ-ಮುಂಡ ಬೇರ್ಪಡಿಸಿದ ತಂದೆ!
ಮಹಿಳೆ ತನ್ನ ಸಹೋದರ ಹಾಗೂ ಕುಟುಂಬಸ್ಥರಿಗೆ ಕರೆ ಮಾಡಿ ತಕ್ಷಣ ಗಂಡನ ಮನೆಗೆ ಕರೆಸಿಕೊಂಡು ಜಗಳ ಮಾಡಿದ್ದಾಳೆ. ಪತ್ನಿಯ ಸಹೋದರ ಆಟೋ ರಿಕ್ಷಾವನ್ನು ಜಖಂ ಗೊಳಿಸಿದ್ದಾನೆ. ಆಗ ವಿಶಾಲ್​ ಕೆನ್ನೆಗೆ ಹೊಡೆದು ಮನೆಯ ಕಿಟಕಿ ಗಾಜು ಪುಡಿ ಮಾಡಿದ್ದಾರೆ. ಇಷ್ಟಕ್ಕೆ ಆಕೆ ಕೋಪ ತಣ್ಣಗಾಗಿಲ್ಲ. ಗಂಡನ ಪೋಷಕರ ಮನಗೆ ಹೋಗಿ ಮತ್ತೆ ಜಗಳ ಮಾಡಿದ್ದಾಳೆ. ಈ ವೇಳೆ ಅತ್ತೆಯ ಮೇಲೂ ಪತ್ನಿ ಕೈಮಾಡಿದ್ದಾಳೆ. ಇದು ಗಂಡನ ಆಕ್ರೋಶಕ್ಕೆ ಕಾರಣವಾಗಿದೆ. ತಾಯಿಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ತೆರಳಿ ಪತ್ನಿ ವಿರುದ್ಧವೇ ದೂರು ದಾಖಲಿಸಿದ್ದಾನೆ.
ಆಸ್ತಿಗಾಗಿ ಗಲಾಟೆ: ಸೋದರಳಿಯನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಮಾವ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × 3 =
Remember me
