ಮುಂಬೈ:ಎತ್ತರದ ಕಟ್ಟಡವೊಂದರ ಇಕ್ಕಟ್ಟಾದ ಸ್ಥಳದಲ್ಲಿ ಯುವಕನೊಬ್ಬ ಅಪಾಯಕಾರಿ ಸಾಹಸ ಪ್ರದರ್ಶನ ಮಾಡಿದ್ದ ವಿಡಿಯೋ ಇತ್ತೀಚೆಗಷ್ಟೇ ವೈರಲ್​ ಆಗಿತ್ತು.
ಇದೀಗ ವಿಡಿಯೋ ಮುಂಬೈ ಪೊಲೀಸರ ಗಮನಕ್ಕೆ ಬಂದಿದ್ದು, ಸಾಹಸ ಪ್ರದರ್ಶಿಸಿದ ಯುವಕ ಮತ್ತು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿದ ಇಬ್ಬರು ಸ್ನೇಹಿತರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಯುವಕನೊಬ್ಬ ಎನರ್ಜಿ ಡ್ರಿಂಕ್​ ಕುಡಿಯುತ್ತಾ 22 ಅಂತಸ್ತಿನ ಕಟ್ಟಡದಲ್ಲಿನ ಇಕ್ಕಟ್ಟಿನ ಜಾಗದಲ್ಲಿ ಕೈಯನ್ನು ನೆಲಕ್ಕೂರಿ ತನ್ನೆರಡು ಕಾಲ್ಗಳನ್ನು ಆಕಾಶಕ್ಕೆ ಚಾಚಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ್ದ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಸ್ವಲ್ಪ ಮಿಸ್​ ಆಗಿದ್ದರೂ ಯುವಕನ ಪ್ರಾಣ ಉಳಿಯುತ್ತಿರಲಿಲ್ಲ.
ಇದನ್ನೂ ಓದಿ:ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಪ್ರಶಸ್ತಿ ಗೆದ್ದ ಬೆಂಗಳೂರು ಬಾಲಕ..!
ವಿಡಿಯೋ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಎಚ್ಚರಿಕೆ ವಹಿಸಿರುವ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾಹಸ ಪ್ರದರ್ಶನ ಮಾಡಿದ ಕಟ್ಟಡವನ್ನು ಗುರುತಿಸಲಾಗಿದೆ. ಅದರ ಹೆಸರು ಜೈ ಭರತ್​ ಕಟ್ಟಡವಾಗಿದೆ. ಮೂವರು ಯುವಕರನ್ನು ಪತ್ತೆ ಹಚ್ಚಲಾಗಿದೆ. ಸದ್ಯ ಅವರು ನಾಪತ್ತೆಯಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ವಿಆರ್‌ಎಲ್ ಮೀಡಿಯಾಕ್ಕೆ ಪ್ರಶಸ್ತಿಗಳ ಗರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
