ಮಹಾರಾಷ್ಟ್ರ:ಯುವಕನೊಬ್ಬ ಇಬ್ಬರು ಯುವತಿಯರನ್ನು ತನ್ನ ಬೈಕ್​ನಲ್ಲಿ ಕೂರಿಸಿಕೊಂಡು ವೀಲ್ಹಿಂಗ್ ಮಾಡಿದ್ದಾನೆ. ಅಪಾಯಕಾರಿಯಾಗಿ ಸ್ಟಂಟ್ ಮಾಡುತ್ತಾ ಸಾಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಈತನ ವಿರುದ್ದು ಮುಂಬೈ ಪೊಲೀಸರು ಕ್ರಮ ಜರುಗಿಸಿದ್ದು, ಎಫ್​ಐಆರ್ ದಾಖಲಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ಒಬ್ಬಳು ಯುವತಿಯನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಮತ್ತು ಇನ್ನೊಬ್ಬಳನ್ನು ಹಿಂಬದಿ ಸೀಟಿನಲ್ಲಿ ಕೂರಿಸಿಕೊಂಡಿದ್ದಾನೆ. ಬಳಿಕ ಅಪಾಯಕಾರಿಯಾಗಿ ವೀಲ್ಹಿಂಗ್ ಮಾಡುತ್ತಾ ಮುಂದೆ ಸಾಗಿದ್ದಾನೆ. ಈ ವೇಳೆ ಬೈಕ್​ನಲ್ಲಿ ಮುಂದೆ ಕುಳಿತಿರುವ ಯುವತಿ ಜೋಶ್​ನಲ್ಲಿ ಕೈಬೀಸಿದ್ದಾಳೆ.
ಇದನ್ನೂ ಓದಿ:ಈ ಚಿತ್ರದಲ್ಲಿರೋದು ಒಂದೇ ಪಾತ್ರ; ‘ರಾಘು’ ಬಿಡುಗಡೆ ದಿನಾಂಕ ಫಿಕ್ಸ್​
dangerous Stunt with 2 pillion rider one in front & one at rear,no helmet & doing whilly !they know that Mumbai roads hv became#PotholesFreenow…!pls catch him@MTPHereToHelpbike reg no. is Mh01DH5987pic.twitter.com/tvYeRMDR39— @PotholeWarriors Foundation💙 #RoadSafety🇮🇳🛵🛣 (@PotholeWarriors)March 30, 2023
dangerous Stunt with 2 pillion rider one in front & one at rear,no helmet & doing whilly !they know that Mumbai roads hv became#PotholesFreenow…!pls catch him@MTPHereToHelpbike reg no. is Mh01DH5987pic.twitter.com/tvYeRMDR39
ಕಾನೂನು ಸುರಕ್ಷತಾ ನಿಯಮಗಳನ್ನು ಮೀರಿ ಮೂವರು ಬೈಕ್ ಸ್ಟಂಟ್​ನಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ ಮೂವರು ಹೆಲ್ಮೆಟ್ ಕೂಡ ಧರಿಸಿಲ್ಲ. ಅಪಾಯಕಾರಿಯಾಗಿ ವೀಲ್ಹಿಂಗ್ ಸ್ಟಂಟ್ಸ್ ಮಾಡುವಾಗ ಸ್ವಲ್ಪ ಎಡವಿದರೂ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ಈ ಮೂವರು ಸೇರಿಕೊಂಡ ಪ್ರಾಣವನ್ನೂ ಲೆಕ್ಕಿಸದೆ ಸ್ಟಂಟ್ಸ್​ನಲ್ಲಿ ಪಾಲ್ಗೊಂಡಿದ್ದಾರೆ.
PotholeWarriors ಎಂಬ ಟ್ವಿಟರ್ ಪೇಜ್​ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು, 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ವೇಳೆ ಮುಂಬೈ ಸಂಚಾರಿ ಪೊಲೀಸರನ್ನು ಟ್ಯಾಗ್ ಮಾಡಿ ಮೂವರು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.ಇದನ್ನೂ ಓದಿ:ಸಿನಿಮಾದಲ್ಲಿ ಚಾನ್ಸ್ ಕೊಡಿಸ್ತೀನಿ ಎಂದು ನಂಬಿಸಿ ಪಂಗನಾಮ ಹಾಕಿದ ಆರೋಪಿ ಅಂದರ್
ಮುಂಬೈ ಸಂಚಾರಿ ಪೊಲೀಸರು ವಿಡಿಯೋಗೆ ಪ್ರತಿಕ್ರಿಯಿಸಿ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಈ ವಿಡಿಯೋದಲ್ಲಿರುವ ವ್ಯಕ್ತಿಗಳ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ, ನೀವು ಮೆಸೇಜ್ ಮಾಡಿ ತಿಳಿಸಬಹುದು. ಪೊಲೀಸರು ಮೂವರ ವಿರುದ್ಧ ಐಪಿಸಿಯ ಸೆಕ್ಷನ್ 279 ಮತ್ತು 336 ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
