ಮುಂಬೈ:ಏಳಕ್ಕಿ ಮತ್ತು ಮಸಾಲೆ ಪದಾರ್ಥಗಳನ್ನು ಕಳ್ಳತನ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಶೂ ನೆಕ್ಕುವಂತೆ ಒತ್ತಾಯಿಸಿದ ಆರೋಪದ ಮೇಲೆ ಆರು ಮಂದಿಯನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬುಧವಾರ ಸಂಜೆ ಈ ಘಟನೆ ನಡೆದಿದೆ ಎಂದು ಎಪಿಎಂಸಿ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಮೊದಲ ಋತುಸ್ರಾವ ನೋವಿಗೆ ಹೆದರಿ ಬಾಲಕಿ ಆತ್ಮಹತ್ಯೆ
ನವಿ ಮುಂಬೈ ಎಪಿಎಂಸಿಯಲ್ಲಿರುವ ಅಂಗಡಿ ಮಾಲೀಕ ರೌನಕ್ ದಯಾಳ್‌ ಜಿಭಾಯಿ ಭಾನುಶಾಲಿ ಮತ್ತು ಇವರ ಅಂಗಡಿಯಲ್ಲಿ ಕೆಲಸ ಮಾಡುವ ಸಂಜಯ್ ಚೌಧರಿ, ಲಾಲಾಜಿ ಬಾಬುಬಾಯಿ ಪಾಗಿ, ವೀರೇಂದ್ರ ಕುಮಾರ್ ಲಕ್ಷ್ಮಣ ಗೌತಮ್, ಯೋಗೇಶ್ ಮತ್ತು ಕರಣ್ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ.
ನವಿ ಮುಂಬೈಯ ಎಪಿಎಂಸಿಯ ಅಂಗಡಿಯೊಂದರಲ್ಲಿ ವ್ಯಕ್ತಿಯು ಏಲಕ್ಕಿ ಹಾಗೂ ಮಸಾಲೆ ಪದಾರ್ಥಗಳನ್ನು ಕಳ್ಳತನ ಮಾಡಿದ್ದಾನೆಂದು ಮಾಲೀಕ ಸೇರಿ ಇತರೆ ಸಿಬ್ಬಂದಿ ಆರೋಪ ಮಾಡಿದ್ದಾರೆ.
ಆ ವ್ಯಕ್ತಿಯನ್ನು ಹಿಡಿದುಕೊಂಡು ಏಲಕ್ಕಿ ಮತ್ತು ಮಸಲಾ ಪದಾರ್ಥಗಳನ್ನು ಕದ್ದಿದ್ದಿಯಾ ಎಂದು ಆರೋಪಿಸಿ ಥಳಿಸಿ ತೀವ್ರ ಹಲ್ಲೆ ವ್ಯಸಗಿದ್ದಾರೆ. ನಂತರ ಮಾಲೀಕ ರೌನಕ್ ದಯಾಳ್‌ ಜಿಭಾಯಿ ಶೂ ನೆಕ್ಕುವಂತೆ ಬಲವಂತ ಮಾಡಿದ್ದಾನೆ. ಇದನ್ನು ವಿಡಿಯೋ ಮಾಡಿದ್ದರಿಂದ ಪ್ರಕರಣ ಹೊರ ಬಂದಿದೆ. ಪ್ರಕರಣ ಪೊಲೀಸ್ ಠಾಣೆ ಮಟ್ಟಿಲೇರಿದ್ದು ತನಿಖೆ ಕೈಗೊಂಡಿರುವ ಪೊಲೀಸರು ಆರು ಜನರನ್ನ ಬಂಧಿಸಿದ್ದಾರೆ.
ನೋವು ನಿವಾರಕ ಮಾತ್ರೆ ಸೇವಿಸುತ್ತಾ ಹಾಸಿಗೆಯಲ್ಲಿದ್ದೆ: ಕಣ್ಣೀರಿಟ್ಟ ರಿಯಾನ್ ಪರಾಗ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 1 =
Remember me
