ಮುಂಬೈ:ನಗರದಲ್ಲಿ ನಡೆಯುತ್ತಿದ್ದ ಪ್ರಮುಖ ಸೆಕ್ಸ್ ರಾಕೆಟ್ ಅನ್ನು ಮುಂಬೈ ಪೊಲೀಸರು ಭೇದಿಸಿದ್ದಾರೆ ಮತ್ತು ದಂಧೆಯ ಮಾಸ್ಟರ್ ಮೈಂಡ್ ಎಂದೇ ಹೇಳಲಾದ ನಟಿ ಹಾಗೂ ಕಾಸ್ಟಿಂಗ್ ನಿರ್ದೇಶಕರನ್ನು ಬಂಧಿಸಲಾಗಿದೆ.
ವೇಶ್ಯಾವಾಟಿಕೆ ದಂಧೆಬಂಧಿತ ಆರೋಪಿಯನ್ನು 27 ವರ್ಷದ ಆರತಿ ಮಿತ್ತಲ್ ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಈಕೆ ನಾ ಉಮ್ರಾ ಕಿ ಸೀಮಾ ಹೋ ಶೋನಲ್ಲಿ ಕಾಣಿಸಿಕೊಂಡಿದ್ದಳು. ತಾನು ಕಾಸ್ಟಿಂಗ್​ ನಿರ್ದೇಶಕಿ ಅಂತಲೂ ಹೇಳಿಕೊಂಡಿದ್ದಾಳೆ. ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಆಕೆಯನ್ನು ದಿಂಡೋಶಿ ಪೊಲೀಸರು ಬಂಧಿಸಿದ್ದಾರೆ.
A post shared by Artist Aarti🧿 (@aartimittalofficial)

ಪ್ರಕರಣದಲ್ಲಿ ಇಬ್ಬರು ಮಾಡೆಲ್‌ಗಳನ್ನು ಪೊಲೀಸರು ರಕ್ಷಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಆರತಿಸ್ಥಳೀಯ ಮಾಧ್ಯಮ ವರದಿಯ ಪ್ರಕಾರ ಪೊಲೀಸರು ಗ್ರಾಹಕರ ಸೋಗಿನಲ್ಲಿ ಆರತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದರು. ಪೋಲೀಸ್ ಪೇದೆಯೊಬ್ಬರು ಗ್ರಾಹಕರಂತೆ ಆರತಿ ಬಳಿ ತೆರಳಿ ತನ್ನ ಇಬ್ಬರು ಸ್ನೇಹಿತರಿಗಾಗಿ ಇಬ್ಬರು ಹುಡುಗಿಯರನ್ನು ಕೇಳಿದರು0. ಅದಕ್ಕೆ ಆರತಿ ಸಮ್ಮತಿಸಿ 60,000 ರೂ. ಬೇಡಿಕೆ ಇಟ್ಟಿದ್ದಳು. ಅಷ್ಟೇ ಅಲ್ಲದೆ, ಪೇದೆಯ ಫೋನ್​ಗೆ ಇಬ್ಬರು ಮಹಿಳೆಯರ ಫೋಟೋಗಳನ್ನು ಆರತಿ ಕಳುಹಿಸಿದಳು ಮತ್ತು ಇಬ್ಬರು ಮಾಡೆಲ್‌ಗಳನ್ನು ಜುಹು ಅಥವಾ ಗೋರೆಗಾಂವ್ ಮೂಲದ ಹೋಟೆಲ್‌ಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದಳು. ಇದಾದ ಬಳಿಕ ಪೊಲೀಸರು ಗೋರೆಗಾಂವ್‌ನ ಹೋಟೆಲ್‌ನಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಿಸಿದರು ಮತ್ತು ಆರತಿ ಮಾಡೆಲ್‌ಗಳೊಂದಿಗೆ ಬಂದಾಗ, ಅವಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದರು.
ಒಳ್ಳೆಯ ಕೆಲಸ ಮತ್ತು ಹಣದ ಭರವಸೆ ನೀಡುವುದಾಗಿ ನಮ್ಮ ಮನವೊಲಿಸಿ ನಮ್ಮನ್ನು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿವಂತೆ ಮಾಡಿದರು ಎಂದು ಮಾಡೆಲ್​ಗಳಿಬ್ಬರು ಆರತಿ ವಿರುದ್ಧ ಆರೋಪ ಮಾಡಿದ್ದಾರೆ. ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
A post shared by Artist Aarti🧿 (@aartimittalofficial)

ಆರತಿ ಅವರು ನಟಿ ರಾಜಶ್ರೀ ಠಾಕೂರ್ ಅವರೊಂದಿಗೆ ‘ಅಪ್ನಾಪನ್’ ಶೋನಲ್ಲಿ ಕೆಲಸ ಮಾಡಿದ್ದಾರೆ. ಅವರು ಇತ್ತೀಚೆಗೆ ‘ನಾ ಉಮ್ರಾ ಕಿ ಸೀಮಾ ಹೋ’ ಸೆಟ್‌ನಿಂದ ವೀಡಿಯೊವನ್ನು ಹಂಚಿಕೊಂಡಿದ್ದರು. ಇದಲ್ಲದೆ, ಕೆಲವು ದಿನಗಳ ಹಿಂದೆ ಅವರು ನಟ ಆರ್ ಮಾಧವನ್ ಅವರೊಂದಿಗೆ ಚಿತ್ರದ ಚಿತ್ರೀಕರಣದಲ್ಲಿರುವುದಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದರು.(ಏಜೆನ್ಸೀಸ್​)
ಲಕ್ಕಿ ಡ್ರಾನಲ್ಲಿ ಒಲಿದ ಅದೃಷ್ಟ; 2 ಕೋಟಿ ರೂಪಾಯಿ ಹಣ ಗೆದ್ದ ಮಹಿಳೆ

ನಾಮಪತ್ರ ಸಲ್ಲಿಕೆಗೂ ಮುನ್ನ ಅಭ್ಯರ್ಥಿಗಳ ಟೆಂಪಲ್​ ರನ್​

ಇತರ ಪಕ್ಷದವರು ಕಾಂಗ್ರೆಸ್​​ಗೆ ಬರುತ್ತಿದ್ದಂತೆ ಕನ್ವರ್ಟ್ ಆಗುತ್ತಾರೆ; ಜಿ.ಪರಮೇಶ್ವರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + six =
Remember me
