ಮುಂಬೈ:ಶಾಸಕರು, ಸಂಸದರು ಮತ್ತು ಗಣ್ಯ ವ್ಯಕ್ತಿಗಳನ್ನೇ ಗುರಿ ಮಾಡಿಕೊಂಡು ಸೆಕ್ಸ್​ ರಾಕೆಟ್​ ನಡೆಸುತ್ತಿದ್ದ ತಂಡವೊಂದನ್ನು ಗ್ಯಾಂಗ್​ ಒಂದನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್​ ವಾಟ್ಸ್​ಆ್ಯಪ್​ ಮೂಲಕವೇ ಪೋರ್ನ್​ ವಿಡಿಯೋ ತೋರಿಸಿ, ದುಡ್ಡು ಕೀಳುತ್ತಿತ್ತು ಎಂದು ಹೇಳಲಾಗಿದೆ.
ಮಹಾರಾಷ್ಟ್ರದ ಮುಂಬೈ ಪೊಲೀಸರು ಈ ಗ್ಯಾಂಗ್​ನ್ನು ಬಂಧಿಸಿದ್ದಾರೆ. ಯುವಕರೇ ತುಂಬಿರುವ ಈ ಗ್ಯಾಂಗ್​ ಹೆಣ್ಣು ಮಕ್ಕಳ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆಯನ್ನು ತೆರೆಯುತ್ತಿತ್ತು. ಅದರಲ್ಲಿ ಗಣ್ಯರಿಗೆ ರಿಕ್ವೆಸ್ಟ್​ ಕಳುಹಿಸಿ ಅವರ ಸ್ನೇಹ ಬೆಳೆಸಿಕೊಳ್ಳುತ್ತಿತ್ತು. ಅದಾದ ನಂತರ ಅವರ ಕಾಂಟ್ಯಾಕ್ಟ್​ ನಂಬರನ್ನೂ ಪಡೆದುಕೊಳ್ಳುತ್ತಿತ್ತು. ವೀಕೆಂಡ್​ಗಳಲ್ಲಿ ಅವರ ನಂಬರ್​ಗೆ ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ ಮಾಡಿ, ಒಂದಿಷ್ಟು ಪೋರ್ನ್​ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು. ಆ ವಿಡಿಯೋಗಳನ್ನು ಗಣ್ಯರು ಕಣ್ಣು ಬಾಯಿ ಬಿಟ್ಟಿಕೊಂಡು ನೋಡಿ, ಜೊಲ್ಲು ಸುರಿಸುವ ವಿಡಿಯೋವನ್ನು ರೆಕಾರ್ಡ್​ ಮಾಡಿಕೊಳ್ಳಲಾಗುತ್ತಿತ್ತು. ಅದಾದ ನಂತರ ಪೋರ್ನ್​ ವಿಡಿಯೋಗೆ ಅವರ ವಿಡಿಯೋವನ್ನು ಸೇರಿಸಿ, ಎಡಿಟ್​ ಮಾಡಿ ಅವರಿಗೆ ಕಳುಹಿಸಲಾಗುತ್ತಿತ್ತು. ಒಂದು ವೇಳೆ ನೀವು ನಾವು ಕೇಳಿದಷ್ಟು ಹಣ ಕೊಡದಿದ್ದಾರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಬಿಡುತ್ತೇವೆ ಎಂದು ಬ್ಲ್ಯಾಕ್​ಮೇಲ್​ ಮಾಡಲಾಗುತ್ತಿತ್ತು. ಮೊದಮೊದಲು ಕಡಿಮೆ ಹಣ ಬೇಡಿಕೆ ಇಡಲಾಗುತ್ತಿತ್ತು. ಒಮ್ಮೆ ಅವರ ಪ್ಲ್ಯಾನ್​ ವರ್ಕ್​ಔಟ್​ ಆದ ನಂತರ ಹೆಚ್ಚಿನ ಹಣವನ್ನು ಬೇಡಿಕೆ ಇಡಲಾಗುತ್ತಿತ್ತು.
ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಮೂಲದ ಮೂವರು ವ್ಯಕ್ತಿಗಳು ಗ್ಯಾಂಗ್​ನಲ್ಲಿ ಕೆಲಸ ಮಾಡಿದ್ದು, ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್​ ಫೇಸ್​ಬುಕ್​ನಲ್ಲಿ 171 ಫೇಕ್​ ಖಾತೆ ಮತ್ತು ಟೆಲಿಗ್ರಾಂನಲ್ಲಿ 4 ಚಾನೆಲ್​ ಹೊಂದಿತ್ತು. ಬ್ಲ್ಯಾಕ್​ಮೇಲ್​ ಮಾಡಲು 54 ಮೊಬೈಲ್​ಗಳನ್ನು ಬಳಸಿಕೊಳ್ಳಲಾಗಿದೆ. ಗ್ಯಾಂಗ್​ಗೆ 58 ಬ್ಯಾಂಕ್​ ಖಾತೆಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. (ಏಜೆನ್ಸೀಸ್​)
ಡಿ ಬಾಸ್​ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ್ರಾ ಜಗ್ಗೇಶ್​? ಸಿನಿಮಾ ಸೆಟ್​ನಲ್ಲೇ ನವರಸ ನಾಯಕನ ಬೆವರಿಳಿಸಿದ ದರ್ಶನ್​ ಅಭಿಮಾನಿಗಳು

ಆತ್ಮಹತ್ಯೆ ಮಾಡಿಕೊಂಡ ದಾದರ್ ಸಂಸದ ಮೋಹನ್ ದೇಲ್ಕರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − two =
Remember me
