ಮುಂಬೈ:ಈ ಯುವತಿಯ ಜನ್ಮದಿನಾಚರಣೆಗೆ ಈ ಸಲ ಖಾಕಿ ಖದರ್​ ಬಂದಿತ್ತು. ಕಾರಣ, ಈಕೆಯ ಬರ್ತ್​ಡೇಯನ್ನು ಪೊಲೀಸರೂ ಸೆಲೆಬ್ರೇಟ್​ ಮಾಡಿದ್ದಾರೆ. ಅಲ್ಲದೆ ಇವರ ಮನೆಗೇ ಕೇಕ್​ ಕೂಡ ಕಳುಹಿಸಿಕೊಟ್ಟಿರುವ ಪೊಲೀಸರು ಜನ್ಮದಿನದ ಶುಭಾಶಯ ಕೋರಿದ್ದಾರೆ. ಮಾತ್ರವಲ್ಲ ಈಕೆಗೆ ‘ಜವಾಬ್ದಾರಿಯುತ ನಾಗರಿಕ’ ಎಂಬ ಬಿರುದನ್ನೂ ನೀಡಿದ್ದಾರೆ.
ಹೀಗೆ ಪೊಲೀಸರಿಂದಲೂ ಬರ್ತ್​ಡೇ ಶುಭಾಶಯ ಪಡೆದುಕೊಂಡು ಕೇಕ್​ ಕೂಡ ಪಡೆದ ಯುವತಿಯ ಹೆಸರು ಸಮತಾ ಪಾಟೀಲ್​. ಈಕೆಯನ್ನು ಟ್ವಿಟರ್​​ನಲ್ಲಿ ಡಿಎಂ ಮಾಡಿ ಸಂಪರ್ಕಿಸಿದ ಪೊಲೀಸರು, ಮೊಬೈಲ್​ಫೋನ್​ ನಂಬರ್ ಪಡೆದು, ಅದನ್ನು ಸ್ಥಳೀಯ ಪೊಲೀಸರಿಗೆ ರವಾನಿಸಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸ್ಥಳೀಯ ಪೊಲೀಸರು ಈಕೆಯ ಮನೆಗೆ ಕೇಕ್​ ತಲುಪಿಸಿ, ಜನ್ಮದಿನದ ಶುಭಾಶಯ ಕೋರಿದ್ದಾರೆ.
ಅಷ್ಟಕ್ಕೂ ಈಕೆ ಗೆಳೆಯರಿಗೆ ಬರ್ತ್​ಡೇ ಟ್ರೀಟ್​ ನೀಡಲು ನಿರಾಕರಿಸಿದ್ದಕ್ಕೆ ಈಕೆಗೆ ಪೊಲೀಸರಿಂದ ಟ್ರೀಟ್​ ಸಿಕ್ಕಿದೆ. ಹೊರಗೆ ಬಾ, ಬರ್ತ್​ಡೇ ಟ್ರೀಟ್​ ಕೊಡು ಎಂದು ಫ್ರೆಂಡ್ಸ್​ ಕೇಳಿದ್ದಕ್ಕೆ, ಈಕೆ ಲಾಕ್​ಡೌನ್​ ಇದೆ, ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಪ್ರತಿಕ್ರಿಯಿಸಿದ್ದಾರೆ. ‘ಯಾರು ತಮ್ಮ ಸ್ನೇಹಿತರನ್ನು ಮನೆಯಲ್ಲೇ ಇರಲು ಬಯಸಿದ್ದೀರಿ’ ಎಂದು ಟ್ವೀಟ್​ ಮಾಡಿ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಮತಾ, ಗೆಳೆಯರು ಟ್ರೀಟ್​ ಕೇಳಿದರೂ ನಾನು ಮನೆಯಿಂದ ಹೊರಗೆ ಹೋಗಿಲ್ಲ. ಅವರನ್ನು ಮನೆಯಲ್ಲೇ ಸುರಕ್ಷಿತವಾಗಿ ಇರಲು ಹೇಳಿದ್ದೆ ಎಂದಿದ್ದರು. ಈ ಮೂಲಕ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಿದಕ್ಕೆ ಖುಷಿಯಾದ ಮುಂಬೈ ಪೊಲೀಸರು, ‘ರೆಸ್ಪಾನ್ಸಿಬಲ್​ ಸಿಟಿಜನ್’ ಎಂದು ಬರೆಸಿದ್ದ ಕೇಕ್​ ಸಮತಾಗೆ ಕಳುಹಿಸಿ ಜನ್ಮದಿನದ ಶುಭಾಶಯ ಕೋರಿದ್ದಾರೆ. (ಏಜೆನ್ಸೀಸ್​)
https://twitter.com/samysays/status/1385181587122180097?s=20
https://twitter.com/samysays/status/1385134372848693248?s=20
ಇಲ್ಲಿ ಸೋಂಕಿತರಿಗೆ ನೀಡುತ್ತಿದ್ದಾರೆ ಅವಧಿ ಮುಗಿದ ಔಷಧ!; ಶಾಸಕರಿಂದ ತೀವ್ರ ಆಕ್ಷೇಪ
ಕಸ ಹಾಕುವ ಜಾಗವೇ ಮಸಣ; ಹೆಣ ಸುಡಲು ಸ್ಥಳವಿಲ್ಲದೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ!




ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 17 =
Remember me
