ಮುಂಬೈ:ಟೆಲಿವಿಷನ್ ರೇಟಿಂಗ್ ಪಾಯಿಂಟ್​ (ಟಿಆರ್​ಪಿ) ತಿದ್ದುಪಡಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಹಗರಣಕ್ಕೆ ಸಂಬಂಧಿಸಿ ಚಾರ್ಜ್​ಶೀಟನ್ನು ಮುಂಬೈ ಪೊಲೀಸರು ಮಂಗಳವಾರ ಕೋರ್ಟ್​ಗೆ ಸಲ್ಲಿಸಿದ್ದಾರೆ. ಕ್ರೈಂ ಇಂಟೆಲಿಜೆನ್ಸ್ ಯುನಿಟ್​ನ ಪೊಲೀಸರು ಚಾರ್ಜ್​ಶೀಟ್ ಸಿದ್ಧಪಡಿಸಿದ್ದು, ಮ್ಯಾಜಿಸ್ಟ್ರೇಟ್ ಕೋರ್ಟ್​ನಲ್ಲಿ ಸಲ್ಲಿಸಿದ್ದಾರೆ.
ಫೇಕ್ ಟಿಆರ್​ಪಿ ಹಗರಣಕ್ಕೆ ಸಂಬಂಧಿಸಿ ಮುಂಬೈ ಅಪರಾಧ ವಿಭಾಗದ ಪೊಲೀಸರು ಒಟ್ಟು 12 ಜನರನ್ನು ಬಂಧಿಸಿದ್ದಾರೆ. ಕೆಲವೊಂದು ಟಿವಿ ಚಾನೆಲ್​ಗಳು ಟಿಆರ್​ಪಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಪ್ರಕಟಿಸುತ್ತಿರುವ ಬಗ್ಗೆ ಕಳೆದ ತಿಂಗಳು ಬ್ರಾಡ್​ಕಾಸ್ಟ್​ ಆಡಿಯೆನ್ಸ್ ರೀಸರ್ಚ್​ ಕೌನ್ಸಿಲ್ (ಬಿಎಆರ್​ಸಿ) ಹನ್ಸಾ ರೀಸರ್ಚ್ ಗ್ರೂಪ್​ ಮೂಲಕ ದೂರು ದಾಖಲಿಸಿತ್ತು. ಆಗ ಫೇಕ್ ಟಿಆರ್​ಪಿ ಹಗರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಟಿಆರ್​ಪಿ ತಾತ್ಕಾಲಿಕ ಸ್ಥಗಿತಗೊಳಿಸಿದ ರೇಟಿಂಗ್ಸ್​ ಮಂಡಳಿ
ಹನ್ಸಾ ರೀಸರ್ಚ್​ ಗ್ರೂಪ್​ ವೀಕ್ಷಕರ ಡೇಟಾ ಸಂಗ್ರಹದ ಹೊಣೆಗಾರಿಕೆ ಹೊತ್ತುಕೊಂಡಿದ್ದು, ಆಯ್ದ ವೀಕ್ಷಕರ ಮನೆಗಳಲ್ಲಿ ಬೇರೋಮೀಟರ್​ಗಳನ್ನು ಅಳವಡಿಸುವ ಕೆಲಸ ಮಾಡುತ್ತದೆ. ಹೀಗಾಗಿ ದೂರು ದಾಖಲಿಸಲು ಬಿಎಆರ್​ಸಿ ಹನ್ಸಾಗೆ ಸೂಚಿಸಿತ್ತು. ಚಾನೆಲ್​ಗಳ ಜಾಹೀರಾತು ಆದಾಯಕ್ಕೆ ಟಿಆರ್​ಪಿ ಪ್ರಮುಖ ಮಾನದಂಡವಾಗಿದೆ. (ಏಜೆನ್ಸೀಸ್)
ಐಎಸ್​ಐ ಕಂಟ್ರೋಲ್​ಗೆ ನ್ಯಾಷನಲ್​ ಇಂಟೆಲಿಜೆನ್ಸ್ ಕೋಆರ್ಡಿನೇಷನ್​ ಕಮಿಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 16 =
Remember me
