ಮುಂಬೈ:ದೇಶಾದ್ಯಂತ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಮುಂಬೈ ಪೊಲೀಸರು ಕೂಡ ಕೋವಿಡ್​-19 ಹಾವಳಿಗೆ ತತ್ತರಿಸಿಹೋಗಿದ್ದಾರೆ. ಅದರಲ್ಲೂ ಒಂದೇ ದಿನದಲ್ಲಿ ಸೋಂಕಿಗೆ ಒಳಗಾಗಿರುವ ಪೊಲೀಸರ ಸಂಖ್ಯೆ ಉಳಿದ ಪೊಲೀಸರನ್ನು ಆತಂಕಕ್ಕೆ ಈಡಾಗಿಸಿದ್ದರೂ ಅಚ್ಚರಿಯೇನಿಲ್ಲ.
ಇತ್ತೀಚಿನ 24 ಗಂಟೆಗಳ ಅವಧಿಯಲ್ಲಿ ಮುಂಬೈ ಪೊಲೀಸರ ಪೈಕಿ 253 ಮಂದಿ ಸೋಂಕಿಗೆ ಒಳಗಾಗಿದ್ದರೆ, ಐವರು ಕೋವಿಡ್​-19ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಮುಂಬೈ ಪೊಲೀಸರಲ್ಲಿ ಒಟ್ಟು 21,827 ಮಂದಿ ಸೋಂಕಿಗೆ ಒಳಗಾದಂತಾಗಿದ್ದು, ಆ ಪೈಕಿ 18,158 ಮಂದಿ ಗುಣವಾಗಿದ್ದಾರೆ. ಅಲ್ಲದೆ ಇದುವರೆಗೆ ಕರೊನಾ ಸೋಂಕಿಗೆ ಬಲಿಯಾದ ಮುಂಬೈ ಪೊಲೀಸರ ಸಂಖ್ಯೆ 234ಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಮುಂಬೈ ಪೊಲೀಸರು ಕರೊನಾ ನಿಯಮ ಉಲ್ಲಂಘಿಸಿದ 2,67,044 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದು, 895 ಜನರನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ಪ್ರಕರಣದಲ್ಲಿ 360 ಕೇಸ್​ಗಳನ್ನು ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 1 =
Remember me
