ಮುಂಬೈ:ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸರ ಮನೋಬಲ ಹೆಚ್ಚಿಸಲು ಪೊಲೀಸ್ ಇಲಾಖೆಯು ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಾ ಬಂದಿದೆ. ಈ ರೀತಿಯಾಗಿ ಆಕರ್ಷಕವಾದ ಟ್ವೀಟ್​ಗಳನ್ನು ಮಾಡುವುದರಲ್ಲಿ ಮುಂಬೈ ಪೊಲೀಸರು ಎತ್ತಿದ ಕೈ ಎಂದೇ ಹೇಳಬೇಕು.
ಮುಂಬೈ ಪೊಲೀಸರ ಹೊಸ ಟ್ವೀಟ್ ಒಂದು ನೆಟ್ಟಿಗರ ಗಮನ ಸೆಳೆದಿದೆ. ಇತ್ತೀಚೆಗೆ ತಾವು ದರೋಡೆ ಯೋಜನೆಯಲ್ಲಿದ್ದ ಹಿಸ್ಟರಿ ಶೀಟರ್​​ನನ್ನು ಬಂಧಿಸಿದ ಫೋಟೋ ಹಾಕಿ “ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ, ಅದಕ್ಕೇ ಪೊಲೀಸರನ್ನು ಮಾಡಿದ್ದಾನೆ” ಎಂಬ ಮೀಮ್ ಬರೆದು ಮುಂಬೈ ಪೊಲೀಸರು ಪೋಸ್ಟ್ ಮಾಡಿದ್ದಾರೆ!
ಇದನ್ನೂ ಓದಿ:ಮಾಜಿ ಸಿಎಂ ಸಂಬಂಧಿಕರ ಕೊಲೆ ಪ್ರಕರಣ : ಇಬ್ಬರ ಬಂಧನ
“ದೇವರು ಕೂಡ ನನ್ನನ್ನು ಹಿಡಿಯಲು ಸಾಧ್ಯವಿಲ್ಲ, ಪೋಲೀಸರು ಏನು ಹಿಡಿಯುತ್ತಾರೆ” ಎಂದು 26 ವರ್ಷದ ಹಿಸ್ಟರಿ ಶೀಟರ್ ಒಬ್ಬ ಪೊಲೀಸ್ ಇನ್​ಫಾರ್ಮರ್​ಗೆ ಹೇಳಿದ್ದನಂತೆ! ಅವನು ಯೋಜಿಸಿದ್ದ ದರೋಡೆಯ ಮುನ್ನವೇ ಆತನನ್ನು ಬಂಧಿಸಿ ಅವನ ಮಾತಿಗೆ ಕ್ರಿಯೆಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ, ಮುಂಬೈನ ಆರೇ ಠಾಣೆ ಪೊಲೀಸರು. ಈ ರೀತಿಯಾಗಿ ಬಂಧಿಸಿ ಅವನ ದರೋಡೆಯ ಯೋಜನೆಯನ್ನು ವಿಫಲಗೊಳಿಸಿದ್ದರಿಂದ ಅವನಿಗೆ ದೇವರಲ್ಲಿ ಮತ್ತು ಪೊಲೀಸರ ಸಾಮರ್ಥ್ಯದಲ್ಲಿ ಮತ್ತೆ ವಿಶ್ವಾಸ ಮೂಡಿರಬಹುದು ಎಂದು ಟ್ವೀಟ್ ಮಾಡಿದ್ದಾರೆ.
“Even God cannot catch me, forget about cops” was the challenge this 26 y/o history sheeter conveyed to us through an informer.Arrested by Aarey police and his robbery plans foiled, we hope his faith in God and the capability of police has been reinstated.#MumbaiCaseFilespic.twitter.com/2Z5bBsX7oM— मुंबई पोलीस – Mumbai Police (@MumbaiPolice)February 6, 2021
“Even God cannot catch me, forget about cops” was the challenge this 26 y/o history sheeter conveyed to us through an informer.Arrested by Aarey police and his robbery plans foiled, we hope his faith in God and the capability of police has been reinstated.#MumbaiCaseFilespic.twitter.com/2Z5bBsX7oM

ಜೊತೆಗೆ ಬಂಧನದ ಸಮಯದ ಫೋಟೋವಿನೊಂದಿಗೆ ಸ್ವಲ್ಪ ಹೆಚ್ಚು ಆತ್ಮವಿಶ್ವಾಸದೊಂದಿಗೇ ಹಾಕಿರುವ ಮೀಮ್​ ಹಲವರ ಹುಬ್ಬೇರಿಸಿದೆ. ಈ ಮೀಮ್​ನಲ್ಲಿ “ಅವನು: ದೇವರೂ ನನ್ನನ್ನು ಹಿಡಿಯಲು ಸಾಧ್ಯವಿಲ್ಲ. ನಾವು: ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ, ಅದಕ್ಕೆ ಪೊಲೀಸರನ್ನು ಮಾಡಿದ್ದಾನೆ” ಎಂಬ ಕಾಮೆಂಟಿದೆ!(ಏಜೆನ್ಸೀಸ್)
ಜಲಸೇನೆಯ ಸೇಲರ್​ನನ್ನು ಜೀವಂತ ಸುಟ್ಟ ಅಪಹರಣಕಾರರು
VIDEO | ಡಾಕೂ ಗಬ್ಬರ್ ಸಿಂಗ್​ಗೆ ಶಿಕ್ಷೆಯಾಗಿದ್ದು ಯಾಕೆ ಗೊತ್ತಾ? ಉತ್ತರಪ್ರದೇಶ ಪೊಲೀಸರ ಅನ್ವೇಷಣೆ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fifteen =
Remember me
