ಮುಂಬೈ:ಇಂದು ಬಿಡುಗಡೆಗೊಂಡ, 1980ರ ಮತ್ತು 1990ರ ದಶಕಗಳ ಮುಂಬೈ ಅಪರಾಧ ಜಗತ್ತಿನ ಬಗ್ಗೆ ಹೆಣೆದಿರುವ “ಮುಂಬೈ ಸಗಾ” ಹಿಂದಿ ಚಲನಚಿತ್ರ, ನೆಟ್ಟಿಗರಲ್ಲಿ ಭಾರೀ ಸಂಚಲನ ಮೂಡಿಸಿದೆ. ಸಂಜಯ್ ಗುಪ್ತ ಅವರ ಈ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಜಾನ್ ಅಬ್ರಾಹಂ ಮತ್ತು ಇಮ್ರಾನ್ ಹಶ್ಮಿ ಅವರ ನಟನೆಯ ಬಗ್ಗೆ ಹಲವರು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ಚಿತ್ರದಲ್ಲಿರುವ ಆ್ಯಕ್ಷನ್ ಸೀನ್​ಗಳನ್ನೂ ಭರ್ಜರಿ ಡಯಲಾಗ್​ಬಾಜಿಯನ್ನು ಮೆಚ್ಚಿರುವ ಬಹುತೇಕ ನೆಟ್ಟಿಗರು ಈ ಚಿತ್ರವನ್ನು ಚಿತ್ರಮಂದಿರಕ್ಕೇ ಹೋಗಿ ಸವಿಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಪವರ್ ಪಾಕಡ್” ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು “ಮೈಂಡ್ ಬ್ಲೋಯಿಂಗ್, ಫಂಟಾಸ್ಟಿಕ್” ಎಂದು ಥಂಬ್ಸ್ ಅಪ್ ನೀಡಿದ್ದಾರೆ. ಕೆಲವರು ಮಾತ್ರ ಅಂದುಕೊಂಡ ಮಟ್ಟಕ್ಕೆ ಚಿತ್ರ ಮೂಡಿಬಂದಿಲ್ಲ ಎಂದು ನೆಗೆಟೀವ್ ರಿವ್ಯೂ ಕೊಟ್ಟಿದ್ದಾರೆ.
ಇದನ್ನೂ ಓದಿ:ನಟಿ ಪ್ರಿಯಾಂಕಾರ ಇತ್ತೀಚಿನ ಸಾಹಸ ಏನು ಗೊತ್ತೆ?!
ಅಂಡರ್​ವರ್ಲ್ಡ್ ವೈರತ್ವವನ್ನೇ ವಿಷಯವನ್ನಾಗಿಸಿಕೊಂಡು ತೆಗೆದಿರುವ ಈ ಚಿತ್ರದಲ್ಲಿ ಜಾನ್ ಅಬ್ರಾಹಂ ಅಮಾರ್ತ್ಯ ರಾವ್ ಎಂಬ ಮುಂಬೈ ಗ್ಯಾಂಗ್​ಸ್ಟರ್​ನ ಪಾತ್ರ ವಹಿಸಿದ್ದಾರೆ. ಇಮ್ರಾನ್ ಹಶ್ಮಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಚಿತ್ರದ ಉತ್ತರಾರ್ಧದಲ್ಲಿ ಎಂಟ್ರಿ ನೀಡುತ್ತಾರೆ ಎನ್ನಲಾಗಿದೆ. ನಟ ಅಬ್ರಾಹಂ ಟ್ವಿಟರ್​ನಲ್ಲಿ ಶೇರ್ ಮಾಡಿರುವ ಚಿತ್ರದ ಟ್ರೇಲರ್​ಗೆ ತಮ್ಮ ಡೈಲಾಗ್​ ಒಂದನ್ನೇ ಟಿಪ್ಪಣಿಯಾಗಿ ನೀಡಿದ್ದಾರೆ.
Bandook Toh Sirf Shauk Ke Liye Rakhta Hoon,Darrane Ke Liye Naam Hi Kaafi Hai – Amartya Rao!
Presenting the trailer of Saga of the year!https://t.co/4eMu9rG5Cy#MumbaiSagaTRAILER OUT NOW.film IN CINEMAS on 19th March, 2021.
— John Abraham (@TheJohnAbraham)February 26, 2021

ಚಿತ್ರದಲ್ಲಿ ಸುನಿಲ್ ಶೆಟ್ಟಿ, ಜಾಕಿ ಶ್ರಾಫ್, ಕಾಜಲ್ ಅಗರ್​ವಾಲ್, ಪ್ರತೀಕ್ ಬಬ್ಬರ್ ಮತ್ತು ಗುಲ್ಶನ್ ಗ್ರೋವರ್ ಕೂಡ ನಟಿಸಿದ್ದಾರೆ. ಈ ಚಿತ್ರವು 2020ರ ಜೂನ್ 19 ಕ್ಕೆ ಬಿಡುಗಡೆಗೆ ತಯಾರಾಗಿತ್ತಾದರೂ, ಕರೊನಾ ಹಿನ್ನೆಲೆಯಲ್ಲಿ ಇದೀಗ ತೆರೆ ಕಾಣುತ್ತಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಎರಡು ಮಕ್ಕಳ ತಂದೆಯನ್ನು ಮದುವೆಯಾದಳು, ತನ್ನದೇ ಮಗು ಹುಟ್ಟಿದಾಗ ಮೆಟರ್ನಿಟಿ ಲೀವ್ ಕೇಳಿದಳು… ಹೈಕೋರ್ಟ್ ಏನು ಹೇಳಿತು ನೋಡಿ…

ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !

ಅಯೋಧ್ಯೆಯಲ್ಲಿ ‘ರಾಮ ಸೇತು’ ಚಿತ್ರದ ಶುಭಾರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
