ಮುಂಬೈ: ಎರಡು ಮಹಡಿಗಳಿರುವ, ಬೃಹದಾದ ಡಬಲ್ ಡೆಕ್ಕರ್ ಬಸ್​ಗಳ ಬಗ್ಗೆ ಸಿನಿಮಾಗಳಲ್ಲಿ ನೋಡಿರುತ್ತೀವಿ. ಅಂತಹಾ ಬಸ್​ಗಳಲ್ಲಿ ಒಮ್ಮೆಯಾದರೂ ಕೂರಬೇಕೆಂದು ಕನಸು ಕಂಡಿರುತ್ತೇವೆ. ಆದರೆ ನೀವಿನ್ನೂ ಡಬಲ್ ಡೆಕ್ಕರ್ ಬಸ್​ಗಳಲ್ಲಿ ಪ್ರಯಾಣಿಸಿದ್ದರೆ ಒಳ್ಳೆಯದು. ಯಾಕೆಂದರೆ ಇನ್ನಾವತ್ತೂ ಅದರಲ್ಲಿ ಪ್ರಯಾಣಿಸಲು ಅವಕಾಶ ಸಿಗುವುದೇ ಇಲ್ಲ.
ಪ್ರವಾಸಿಗರ ನೆಚ್ಚಿನ ತಾಣ ಮುಂಬೈನಲ್ಲಿ ಬೆರಳೆಣಿಕೆಯಷ್ಟು ಕೆಂಪು ಡಬಲ್ ಡೆಕ್ಕರ್ ಬಸ್​ಗಳು ಮಾತ್ರ ಉಳಿದುಕೊಂಡಿದ್ದವು. ಆದರೆ 86 ವರ್ಷಗಳ ಇತಿಹಾಸ ಇರುವ ಈ ಬಸ್​​ಗಳು ಸದ್ಯದಲ್ಲೇ ಪ್ರಯಾಣವನ್ನು ನಿಲ್ಲಿಸಲಿವೆ. ಒಂದು ಕಾಲದಲ್ಲಿ ಬಹಳ ಪ್ರಸಿದ್ಧವಾಗಿದ್ದ ಈ ಬಸ್​ಗಳು ಈಗ ನಿರ್ವಹಣೆಯ ಕೊರತೆಯಿಂದ ನಿಲ್ಲಲಿವೆ.
ಉಳಿದಿದ್ದ 7 ಡಬಲ್ ಡೆಕರ್ ಬಸ್​ಗಳು ರಸ್ತೆಗೆ ವಿದಾಯ ಹೇಳಲಿವೆ. ಸೆ.15ರಂದು 2 ಮತ್ತು ಅ.5 ರಂದು 5 ಬಸ್​ಗಳು ತಮ್ಮ ಪ್ರಯಾಣವನ್ನು ಅಂತ್ಯಗೊಳಿಸಲಿವೆ. ಶತಮಾನಗಳ ಇತಿಹಾಸವಿರುವ ಈ ಬಸ್​ಗಳನ್ನು ಸಂರಕ್ಷಿಸಿ, ಅನಿಕ್ ಡಿಪೋಟ್ ಮ್ಯೂಸಿಯಂನಲ್ಲಿ ಇಡಬೇಕು ಎಂದು ಪ್ರಯಾಣಿಕರು ಮುಂಬೈ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದರ ಕುರಿತು ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್​ಪೋರ್ಟ್​(BEST) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
1937ರ ಸುಮಾರಿಗೆ ಮುಂಬೈ ನಗರದಲ್ಲಿ ಈ ಬಸ್​ಗಳು ಪ್ರಯಾಣ ಪ್ರಾರಂಭಿಸಿ, ದೇಶದೆಲ್ಲಡೆ ಖ್ಯಾತಿ ಗಳಿಸಿದ್ದವು. 1990ರ ಹೊತ್ತಿಗೆ 900 ಡಬಲ್ ಡೆಕ್ಕರ್ ಬಸ್​ಗಳು ಪ್ರಯಾಣಿಕರಿಗೆ ನಗರದ ದರ್ಶನ ಮಾಡಿಸುತ್ತಿದ್ದವು. ಬಾಲಿವುಡ್ ಸಿನಿಮಾಗಳ ಮೂಲಕ ಪಗ್ರಯಾಣಿಕರ ಮನಸ್ಸನ್ನು ಇನ್ನಷ್ಟು ಗೆದ್ದವು. ಆದರೆ ಹೆಚ್ಚಾದ ನಿರ್ವಹಣಾ ವೆಚ್ಚದಿಂದ ಒಂದೊಂದೇ ಬಸ್​ಗಳು ಮೂಲೆ ಸೇರಿದವು.
ಆದರೆ ಡಬಲ್​ ಡೆಕ್ಕರ್ ಬಸ್​ಗಳ ಮೇಲಿನ ಪ್ರವಾಸಿಗರ ಪ್ರೀತಿ ಮಾತ್ರ ಒಂಚೂರೂ ಕಡಿಮೆಯಾಗಲಿಲ್ಲ. ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್​ಪೋರ್ಟ್​ 25 ಹೊಸ ವಿದ್ಯುತ್ ಚಾಲಿತ ಡಬಲ್ ಡೆಕ್ಕರ್ ಬಸ್​ಗಳನ್ನು ಪರ್ಯಾಯವಾಗಿ ಪರಿಚಯಿಸಿದರೂ ಜನ ಯಾಕೋ ನೆಚ್ಚಿಕೊಳ್ಳಲಿಲ್ಲ. ಇವುಗಳಿಗೆ ಎಸಿ ಸೌಲಭ್ಯವಿದ್ದರೂ, ಹಳೆಯ ಬಸ್​ಗಳಲ್ಲಿ ಕಿಟಿಕಿಯಿಂದ ಬೀಸುವ ಗಾಳಿಯೇ ಚೆಂದ ಎನ್ನುತ್ತಿದ್ದಾರೆ ಪ್ರಯಾಣಿಕರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eight =
Remember me
