ಮುಂಬೈ:ನಾಯಿ ಬೊಗಳುತ್ತದೆ ಎಂದು ಅದನ್ನು ಸಾಕಿದ್ದ ಮಹಿಳೆಗೆ ಥಳಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಹೊಡೆತ ತಿಂದ ಮಹಿಳೆ ಕೆಲ ಸಮಯದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.
ಮುಂಬೈನ ಮನ್ಪಾಡಾದಲ್ಲಿ ನಾಗಮ್ಮ ಶೆಟ್ಟಿ ಹೆಸರಿನ 35 ವರ್ಷದ ಮಹಿಳೆ ವಾಸಿಸುತ್ತಿದ್ದಳು. ವಿಧವೆಯಾಗಿರುವ ಈಕೆ ತನ್ನ ಮಗಳೊಂದಿಗೆ ಜೀವನ ಸಾಗಿಸುತ್ತಿದ್ದ ಮನೆಯಲ್ಲಿ ಒಂದು ನಾಯಿಯನ್ನು ಸಾಕಿದ್ದಳು. ಈ ನಾಯಿ ಪದೇ ಪದೆ ಬೊಗಳುತ್ತಿದ್ದುದ್ದರಿಂದ ಅಕ್ಕ ಪಕ್ಕದ ಮನೆಯಲ್ಲಿರುವವರಿಗೆ ಕಿರಿಕಿರಿಯುಂಟಾಗಿದೆ. ಇಂದು ಮುಂಜಾನೆ ಅಕ್ಕಪಕ್ಕದ ಮನೆಯ ನಾಲ್ಕು ಮಹಿಳೆಯರು ನಾಯಿ ಬೊಗಳುವುದರ ವಿಚಾರವಾಗಿ ನಾಗಮ್ಮ ಶೆಟ್ಟಿಯ ಜತೆ ಜಗಳವಾಡಿದ್ದಾರೆ. ಜಗಳದಲ್ಲಿ ಕೈ ಕೈ ಮಿಲಾಯಿಸಿಕೊಂಡಿದ್ದು ಮಹಿಳೆಯರು ನಾಗಮ್ಮ ಶೆಟ್ಟಿಯ ಎದೆಯ ಮೇಲೆ ಬಲವಾಗಿ ಹೊಡೆದಿದ್ದಾರೆ.
ಘಟನೆಯಿಂದಾಗಿ ಮನನೊಂದ ನಾಗಮ್ಮ ಹತ್ತಿರದ ಪೊಲೀಸ್​ ಠಾಣೆಗೆ ಹೋಗಿ ಮಹಿಳೆಯರ ವಿರುದ್ಧ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಆಕೆಗೆ ಮೊದಲು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಆದರೆ ಆಸ್ಪತ್ರೆಗೆ ತೆರಳದೆ ಮನೆಗೆ ಬಂದ ನಾಗಮ್ಮನಿಗೆ ಸ್ವಲ್ಪ ಹೊತ್ತಿನಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದರೂ ಆಕೆಯನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
“ಸಂತ್ರಸ್ತೆಗೆ ಆಸ್ಪತ್ರೆಗೆ ತೆರಳುವಂತೆ ನಾವು ತಿಳಿಸಿದ್ದೆವು. ಆದರೆ ಆಕೆ ನೇರವಾಗಿ ಮನೆಗೆ ಹೋಗಿದ್ದಾಳೆ. ಮನೆಗೆ ತೆರಳಿದ ಸ್ವಲ್ಪ ಸಮಯದಲ್ಲಿಯೇ ಆಕೆಗೆ ಎದೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ದಾಖಲು ಮಾಡಿದ ನಂತರ ಆಕೆ ನಿಧನಳಾಗಿದ್ದಾಳೆ. ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಹೃದಯಾಘಾತದಿಂದ ಸಾವನ್ನಪ್ಪಿರುವುದು ಧೃಡವಾಗಿದೆ” ಎಂದು ಡಿಸಿಪಿ ವಿವೇಕ್​ ಪನ್ಸಾರೆ ತಿಳಿಸಿದ್ದಾರೆ.
ನಾಗಮ್ಮನ ಸಾವನ್ನು ಆಕಸ್ಮಿಕ ಸಾವು ಎಂದು ವರದಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + one =
Remember me
