ಮುಂಬೈ:ಈ ಆಧುನಿಕ ಜೀವನದಲ್ಲಿ ಎಲ್ಲವು ಆನ್​ಲೈನ್​ಮಯವಾಗಿದೆ. ಏನೇ ಖರೀದಿ ಮಾಡಬೇಕೆಂದರೂ ಜನರು ಆನ್​ಲೈನ್ ಮೊರೆ ಹೋಗುತ್ತಿದ್ದಾರೆ. ಮನೆಯಲ್ಲಿ ಅಡುಗೆ ಮಾಡುವುದು ಸಹ ಕೆಲವರಿಗೆ ವಿರಳವಾಗಿಬಿಟ್ಟಿದೆ. ಏಕೆಂದರೆ, ಆಹಾರವೂ ಕೂಡ ಇದೀಗ ಸುಲಭವಾಗಿ ಮನೆ ಬಾಗಿಲಿಗಿ ಬರುತ್ತಿದೆ. ಆದರೆ, ಈ ಆನ್​ಲೈನ್​ ಆಹಾರಗಳನ್ನು ತಿನ್ನುವಾಗ ತುಂಬಾ ಎಚ್ಚರಿಕೆಯನ್ನು ವಹಿಸಬೇಕು. ಇಲ್ಲವಾದಲ್ಲಿ ಏನಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ ಕೋನ್​ ಐಸ್​ಕ್ರೀಮ್​ನಲ್ಲಿ ಮಾನವನ ಬೆರಳನ್ನು ನೋಡಿ ಮಹಿಳೆಯೊಬ್ಬಳು ಶಾಕ್​ ಆಗಿರುವ ಘಟನೆ ಮುಂಬೈನ ಮಲಾಡ್​ ಏರಿಯಾದಲ್ಲಿ ನಡೆದಿದೆ. ಆಘಾತಕ್ಕೊಳಗಾದ ಮಹಿಳೆ ಮಲಾಡ್ ಪೊಲೀಸರನ್ನು ಸಂಪರ್ಕಿಸಿದ್ದು, ಐಸ್ ಕ್ರೀಮ್ ತಯಾರಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರು ದಾಖಲಿಸಿದ ಬಳಿಕ ಪೊಲೀಸರು, ಬೆರಳು ಯಾರದ್ದು? ಐಸ್​ಕ್ರೀಮ್​ ಕೋನ್​ನಲ್ಲಿ ಹೇಗೆ ಬಂತು? ಎಂದು ತಿಳಿದುಕೊಳ್ಳಲು ಐಸ್ ಕ್ರೀಮ್ ಕೋನ್ ಮತ್ತು ಮಾನವ ಬೆರಳಿನ ಅಂಗವನ್ನು ವಿಧಿವಿಜ್ಞಾನ ತನಿಖೆಗೆ ಕಳುಹಿಸಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.
Maharashtra | A woman found a piece of human finger inside an ice cream cone that was ordered online in the Malad area of ​​Mumbai. After which the woman reached Malad police station. Malad police registered a case against the Yummo ice cream company and sent the ice cream for…
— ANI (@ANI)June 13, 2024

ಈ ಬಗ್ಗೆ ಮಾತನಾಡಿರುವ ಮಲಾಡ್​ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಐಸ್ ಕ್ರೀಮ್​ನಲ್ಲಿ ಪತ್ತೆಯಾದ ಮಾನವ ಅಂಗವನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದಿದ್ದಾರೆ.(ಏಜೆನ್ಸೀಸ್​)
ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಔಟಾದಾಗ ನೀವಿದನ್ನು ಗಮನಿಸಿದ್ರಾ? ಲೈವ್​ನಲ್ಲೂ ಈ ದೃಶ್ಯವನ್ನು ತೋರಿಸಿಲ್ಲ!

ನಟ ದರ್ಶನ್​ನಿಂದ ಚಿಕಿತ್ಸೆಗೆ ಸಿಗದ ಸಹಾಯ: ಹಲವು ವರ್ಷಗಳಿಂದ ಹಾಸಿಗೆ ಹಿಡಿದಿರುವ ಫಾರ್ಮ್​ಹೌಸ್ ಕೆಲಸಗಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
