ಮುಂಬೈ:ಆಘಾತಕಾರಿ ಘಟನೆಯೊಂದರಲ್ಲಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿಲ್ಲ ಎಂಬ ಕಾರಣಕ್ಕೆ 25 ವರ್ಷದ ಯುವತಿಯನ್ನು ಬರ್ಬರವಾಗಿ ಇರಿದು ಹತ್ಯೆ ಮಾಡಿರುವ ಘಟನೆ ಮಂಬೈನ ಘಾಟ್ಕೋಪುರ-ಮನ್​ಖುರ್ದ್​ ಪ್ರದೇಶದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಹತ್ಯೆಗೈದ ನಾಲ್ವರನ್ನು ವಶಕ್ಕೆ ಪಡೆದಿದ್ದು, ಮೃತಳ ಸಹೋದರಿ ನೀಡಿದ ದೂರಿನ ಮೇರೆಗೆ ಡಿಯೋನಾರ್​ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಮುಂಬೈನ ಘಾಟ್ಕೋಪುರ-ಮನ್​ಖುರ್ದ್​ ಪ್ರದೇಶದಲ್ಲಿ ವಾಸಿಸುವ ಕೃಷ್ಣ ಪವಾರ್​ ಎಂಬುವವರ ಸಹೋದರ ಮಂಗಳವಾರ ನಿಧನರಾಗಿದ್ದಾರೆ. ನೆರೆ ಮನೆಯಲ್ಲಿ ವಾಸಿಸುತ್ತಿದ್ದ ಅಂಜಲಿ ಭೋಸಲೆ ಹಾಗೂ ಕುಟುಂಬಸ್ಥರು ಕಾರಣಾಂತರಗಳಿಂದ ಅಂತ್ಯೆಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ.
ಇದನ್ನೂ ಓದಿ:VIDEO| ವೀಲಿಂಗ್​ ಮಾಡುವಾಗ ಕೆಳಗೆ ಬಿದ್ದ ಜೋಡಿ; ಪೊಲೀಸರು ಮಾಡಿದ ಜನಜಾಗೃತಿಗೆ ನೆಟ್ಟಿಗರು ಫಿದಾ
ಇದರಿಂದ ತೀವ್ರವಾಗಿ ಕುಪಿತಗೊಂಡಿದ್ದ, ಕೃಷ್ಣ ಪವಾರ್​ ತನ್ನ ಸಹೋದರನ ಅಂತ್ಯೆಕ್ರಿಯೆ ಮುಗಿದ ಬಳಿಕ ಅಂಜಲಿ ಭೋಸಲೆ ಮನೆಗೆ ನುಗ್ಗಿ ಮೊದಲಿಗೆ ದಾಂಧಲೆ ನಡೆಸಿದ್ದಾನೆ. ಈ ವೇಳೆ ಮನೆಯಲ್ಲಿದ್ದವರು ಹೊರಗಗೆ ಹೋಗುವಂತೆ ಹೇಳಿದಾಗ ಆರೋಪಿಯೂ ಏಕಾಏಕಿ ಅಂಜಲಿ ಅವರ ತಾಯಿಯ ಮೇಲೆ ಹರಿತಾವದ ಆಯುಧದಿಂದ ದಾಳಿ ಮಾಡಿದ್ದಾನೆ.
ಈ ವೇಳೆ ತನ್ನ ತಾಯಿ ರಕ್ಷಣೆಗೆ ಬಂದ 25 ವರ್ಷದ ಸಹೋದರಿಯನ್ನು ಆರೋಪಿಯೂ ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದಾನೆ. ತೀವ್ರ ರಕ್ತ ಸ್ರಾವದಿಂದ ಯುವತಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಘಟನೆಯಲ್ಲಿ ಆಕೆಯ ತಾಯಿ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೃತಳ ಸಹೋದರಿ ಅಂಜಲಿ ಭೋಸಲೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಲಾಗಿದೆ. ಆರೋಪಿಗಳ ವಿರುದ್ಧ ಭಾರತ ದಂಡ ಸಂಹಿತೆ(IPC Section) 302(ಕೊಲೆ, 307(ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಯೋನಾರ್​ ಪೊಲೀಸ್​ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 4 =
Remember me
