ಮುಂಬೈ:ಕರ್ತವ್ಯನಿರತ ಸಂಚಾರಿ ಪೊಲೀಸ್​ ಮೇಲೆ ಹಲ್ಲೆ ಮಾಡಿದ ಮಹಿಳೆಯನ್ನು ಬಂಧಿಸಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಎಲ್​ಟಿ ಮಾರ್ಗ್​ ಠಾಣಾ ಪೊಲೀಸರು ಶುಕ್ರವಾರ 29 ವರ್ಷದ ಸಂಗರಿಕಾ ತಿವಾರಿ ಎಂಬಾಕೆಯನ್ನು ಬಂಧಿಸಿದ್ದಾರೆ. ಕಾಲ್ಬದೇವಿಯಲ್ಲಿರುವ ಸುರ್ತಿ ಹೋಟೆಲ್​ ಬಳಿ ಕರ್ತವ್ಯದಲ್ಲಿದ ಸಂಚಾರಿ ಕಾನ್​​ಸ್ಟೇಬಲ್​ ಏಕನಾಥ್​ ಪಾರ್ತೆ ಎಂಬುವರ ಮೇಲೆ ಹಲ್ಲೆ ಮಾಡಿದ್ದಕ್ಕೆ ಬಂಧಿಸಲಾಗಿದೆ.
ಇದನ್ನೂ ಓದಿ:ಪತಿಯನ್ನೇ ಕೊಲೆ ಮಾಡಿಸಿದಳು, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುವ ಕಾರಣಕ್ಕೆ ಕೃತ್ಯ, ಎರಡು ಮಕ್ಕಳ ತಾಯಿ
ದೂರಿನ ಪ್ರಕಾರ ಬಂಧಿತ ತಿವಾರಿ 32 ವರ್ಷದ ಮೋಹ್ಸಿನ್​​ ಶೇಕ್​ ಎಂಬುವರ ಬೈಕಿನಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತು ಬರುತ್ತಿದ್ದರಂತೆ. ಈ ವೇಳೆ ಅವರನ್ನು ತಡೆದ ಪೇದೆ, ಹೆಲ್ಮೆಟ್​ ಧರಿಸಿಲ್ಲ ಎಂದು ದಂಡ ಹಾಕಿದ್ದಾರೆ. ಇದೇ ವಿಚಾರ ವಾಗ್ವಾದ ನಡೆದಿದೆ. ಗಲಾಟೆ ತಾರಕಕ್ಕೇರಿದಾಗ ತಿವಾರಿ ಪೇದೆ ಪಾರ್ತೆ ಅವರ ಯೂನಿಫಾರ್ಮ್​ಗೆ ಕೈಹಾಕಿ ಎಳೆದಾಡಿ ಹಲ್ಲೆ ಮಾಡಿದ್ದಾರೆ. ಪ್ರಕರಣ ಸಹ ಆರೋಪಿಯಾಗಿರುವ ಶೇಖ್​ ಘಟನೆಯನ್ನು ವಿಡಿಯೋ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಆದರೆ, ತಿವಾರಿ ಪ್ರಕಾರ ಸಂಚಾರಿ ಪೇದೆ ಕೆಟ್ಟ ಪದಗಳಿಂದ ನಿಂದಿಸಿದರು. ಹೀಗಾಗಿ ಹಲ್ಲೆ ಮಾಡಬೇಕಾಯಿತು ಎಂದು ಪ್ರತ್ಯಾರೋಪ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಜಗಳವನ್ನು ಬಿಡಿಸಿ, ತಿವಾರಿ ಮತ್ತು ಶೇಖ್​ನನ್ನು ಠಾಣೆಗೆ ಕರೆತಂದಿದ್ದಾರೆ.(ಏಜೆನ್ಸೀಸ್​)
ಆನ್​ಲೈನ್​ ತರಗತಿ ವೇಳೆ ಪ್ರಶ್ನೆಗೆ ಉತ್ತರಿಸದ ಮಗಳು: ಪೆನ್ಸಿಲ್​ನಿಂದ ಮನಬಂದಂತೆ ಚುಚ್ಚಿದ ತಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seven =
Remember me
