ಮುಂಬೈ:ಆನ್​ಲೈನ್​ ತರಗತಿಗೆ ಹೆಚ್ಚಿನ ಗಮನ ನೀಡದ ಮಗಳ ಮೇಲೆ ತಾಯಿಯೊಬ್ಬಳು ಹಲ್ಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಆನ್​ಲೈನ್​ ತರಗತಿಯಲ್ಲಿ ಶಿಕ್ಷಕರು ಕೇಳಿದ ಪ್ರಶ್ನೆಗೆ ಮಗಳು ಉತ್ತರಿಸಲಿಲ್ಲ ಎಂಬ ಕಾರಣಕ್ಕೆ ಆಕೆಗೆ ಪೆನ್ಸಿಲ್​ನಿಂದ ಇರಿದು ಗಾಯಗೊಳಿಸಲಾಗಿದ್ದು, ತಾಯಿಯ ವಿರುದ್ಧ ಸಾಂತಕ್ರುಜ್​ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಈ ಘಟನೆ ಬುಧವಾರ ನಡೆದಿದೆ. ಆರನೇ ತರಗತಿ ವಿದ್ಯಾರ್ಥಿನಿ ಆನ್​ಲೈನ್​ ತರಗತಿಗೆ ಹಾಜರಾಗಿತ್ತು. ಈ ವೇಳೆ ಶಿಕ್ಷಕರು ಕೇಳಿದ ಪ್ರಶ್ನೆಗೆ ಆಕೆ ಉತ್ತರಿಸಲಿಲ್ಲ. ಇದು ತಾಯಿಯ ಕೋಪಕ್ಕೆ ಕಾರಣವಾಗಿದೆ. ತಕ್ಷಣವೇ ಪೆನ್ಸಿಲ್​ ತೆಗೆದುಕೊಂಡು ಅನೇಕ ಬಾರಿ ಮಗಳಿಗೆ ಇರಿದಿದ್ದಾಳೆ. ಅಲ್ಲದೆ, ಮನಸಿಗೆ ಬಂದಂತೆ ಕಚ್ಚಿ ಗಾಯಗೊಳಿಸಿದ್ದಾಳೆ. ಇಡೀ ಘಟನೆಯನ್ನು ನೋಡಿದ ಸಂತ್ರಸ್ತೆಯ ಸಹೋದರಿ ಮಕ್ಕಳ ಸಹಾಯವಾಣಿಗೆ ನಂ. 1098ಗೆ ಕರೆ ಮಾಡಿ ಎಲ್ಲವನ್ನು ವಿರಿಸಿದ್ದಾಳೆ.
ಇದನ್ನೂ ಓದಿ:ಮನೆಗೆ ಮರಳಿದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ ದುಷ್ಟರು: ತಂದೆ ಕಣ್ಣೆದುರಲ್ಲೇ ನಡೆಯಿತು ದುರಂತ!
ಮಾಹಿತಿ ತಿಳಿದ ಎನ್​ಜಿಒದ ಇಬ್ಬರು ಪ್ರತಿನಿಧಿಗಳು ಸಂತ್ರಸ್ತೆಯ ಮನೆಗೆ ಭೇಟಿ ನೀಡಿ, ಘಟನೆ ಬಗ್ಗೆ ತಾಯಿಯ ವಿವರಣೆ ಕೇಳಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆಯನ್ನು ನೀಡದಿದ್ದಾಗ ಆಕೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ, ಈವರೆಗೂ ಆಕೆಯನ್ನು ಬಂಧಿಸಿಲ್ಲ.(ಏಜೆನ್ಸೀಸ್​)
‘ಕಾಂಗ್ರೆಸ್​ನ ಇನ್ನೂ 10 ಶಾಸಕರು ಬೆಜೆಪಿಗೆ ಬರಲು ಸಜ್ಜಾಗಿದ್ದಾರೆ!’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − three =
Remember me
