ಮುಂಬೈ:ಮುಂಬೈನ ಮಲಾಡ್​ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 12ಕ್ಕೂ ಹೆಚ್ಚು ಫಿಲಂ ಸ್ಟುಡಿಯೋಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(NGT) ಆದೇಶದ ಮೇರೆಗೆ ಶುಕ್ರವಾರ ನೆಲಸಮ ಮಾಡಲಾಗಿದೆ.
ಈ ಹಿಂದೆ ಇದ್ದ ಮಹಾ ವಿಕಾಸ್​ ಅಘಾಡಿ ನೇತೃತ್ವದ ಸರ್ಕಾರದ ಆಶ್ರಯದಲ್ಲಿ ಈ ಫಿಲಂ ಸ್ಟುಡಿಯೋಗಳನ್ನು ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿ ಕಟ್ಟಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.
ಇದನ್ನೂ ಓದಿ:ಗದಗದಲ್ಲಿ ಸಿಡಿಲು ಬಡಿದು ಇಬ್ಬರು ಮೃತ್ಯು; ರೋಣದಲ್ಲಿ ಬಿತ್ತು ಆಲಿಕಲ್ಲು ಮಳೆ
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಕಿರೀಟ್​ ಸೋಮಯ್ಯ ಇಲ್ಲಿ ಸ್ಟುಡಿಯೋಗಳನ್ನು ಅಕ್ರಮ ದಾಖಲೆಗಳನ್ನು ಬಳಸಿ ನಿರ್ಮಿಸಲಾಗಿತ್ತು. ಇದರ ಬಗ್ಗೆ ಬಿಎಂಸಿ ಕಮಿಷನರ್​ ಇಕ್ಬಾಲ್​ ಚಹಲ್​ ಅವರಿಗೆ ತಿಳಿದಿದ್ದರೂ ಸಹ ಯಾವುಧೇ ಕ್ರಮವನ್ನು ಜರುಗಿಸಲಿಲ್ಲ.
ಅಕ್ರಮವನ್ನು ಪ್ರಶ್ನಿಸಿ ನಾವು ನ್ಯಾಯಾಲಯದ ಮೊರೆ ಹೋದೆವು ಮತ್ತು ಈ ವಿಚಾರವಾಗಿ ಸರ್ಕಾರ ಈ ಕೂಡಲ್ಲೇ ತನಿಖೆಗೆ ಆದೇಶಿಸಬೇಕು ಎಂದು ನಾನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರನ್ನು ಕೋರುತ್ತೇನೆ ಎಂದು ಕಿರೀಟ್​ ಸೋಮಯ್ಯ ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + 19 =
Remember me
