ಮುಂಬೈ:ಕೆಲ ಕ್ಷೇತ್ರಗಳಲ್ಲಿ ಲಿಂಗ ಸಮಾನತೆ ಎಂಬ ಪರಿಕಲ್ಪನೆಯೇ ಇರುವುದಿಲ್ಲ. ಹೀಗೂ ಇರುತ್ತಾ ಎಂದೇ ಪ್ರಶ್ನೆ ಕೇಳುತ್ತಾರೆ. ಐರೋಪ್ಯ ದೇಶಗಳಲ್ಲಿ ದಶಕಗಳ ಹಿಂದೆಯೇ ಜಾರಿಯಾದ ಅಂಶವೊಂದು ಭಾರತದಲ್ಲೀಗ ಗಮನ ಸೆಳೆಯುತ್ತಿದೆ. ದೇಶದಲ್ಲೇ ಮೊದಲು ಎನಿಸಿದೆ.
ಮುಂಬೈನ ದಾದರ್​ನಲ್ಲಿರುವ ಸಂಚಾರ ನಿಯಂತ್ರಕ ದೀಪ ಹಾಗೂ ಬೋರ್ಡ್​ಗಳು ವಾಹನ ಸವಾರರ ಹಾಗೂ ಪಾದಚಾರಿಗಳ ಗಮನ ಸೆಳೆಯುತ್ತಿವೆ. ನೆಟ್ಟಿಗರಂತೂ ಫುಲ್​ ಫಿದಾ ಆಗಿದ್ದಾರೆ. ಮುಂಬೈ ಪಾಲಿಕೆ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ;ಜಗತ್ತಿನ ಮೊದಲ ಕರೊನಾ ಲಸಿಕೆ ರಷ್ಯಾದಲ್ಲಿ ಸಿದ್ಧ; ಅಕ್ಟೋಬರ್​ನಲ್ಲಿ ಎಲ್ಲರಿಗೂ ಲಭ್ಯ; ಸ್ಪುಟ್ನಿಕ್​ ಯಶಸ್ಸಿಗೆ ಹೋಲಿಕೆ
ಇಲ್ಲಿನ ಸಿಗ್ನಲ್​ ಲೈಟ್​ಗಳಲ್ಲಿ ಮಹಿಳೆಯರನ್ನು ಪ್ರತಿನಿಧಿಸುವ ಚಿತ್ರಗಳನ್ನು ಬಳಸಲಾಗುತ್ತಿದೆ. ಸಂಚಾರ ಸೂಚನಾ ಫಲಕಗಳಲ್ಲೂ ಮಹಿಳೆಯರ ಚಿತ್ರ ಬಳಕೆಯಾಗುತ್ತಿದೆ. ಇಂಥದ್ದೊಂದು ಕ್ರಮ ದೇಶದಲ್ಲೇ ಮೊದಲು ಎನ್ನಲಾಗಿದೆ.
ಮಹಾರಾಷ್ಟ್ರ ಸಚಿವ ಹಾಗೂ ಸಿಎಂ ಉದ್ಧವ್​ ಠಾಕ್ರೆ ಪುತ್ರ ಆದಿತ್ಯ ಈ ಚಿತ್ರಗಳನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ದಾದರ್​ ಮೂಲಕ ಹಾದು ಹೋಗಿದ್ದರೆ ನಿಮ್ಮನ್ನು ಹೆಮ್ಮೆ ಪಡುವಂತೆ ಮಾಡುತ್ತದೆ. ಮುಂಬೈ ಪಾಲಿಕೆ ಸರಳ ಉಪಾಯದೊಂದಿಗೆ ಲಿಂಗ ಸಮಾನತೆ ಸಾಧಿಸುತ್ತಿದೆ. ಟ್ರಾಫಿಕ್​ ಸಿಗ್ನಲ್​ ಲೈಟ್​ಗಳಲ್ಲೂ ಮಹಿಳೆಯರಿದ್ದಾರೆ…! ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ;ಆಗಸ್ಟ್​ ಅಂತ್ಯಕ್ಕೆ ಕರೊನಾ ನಿಗ್ರಹಿಸುತ್ತಾ ಮುಂಬೈ; ಶೇ.76ಕ್ಕೆ ಏರಿದ ಚೇತರಿಕೆ; 20 ಸಾವಿರಕ್ಕಿಳಿದ ಸಕ್ರಿಯ ಪ್ರಕರಣ
ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂಥ ಸರಳ ವಿಚಾರಗಳಿಂದ ದೊಡ್ಡ ಬದಲಾವನೆಗಳು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
If you’ve passed by Dadar, you’d see something that will make you feel proud.@mybmcWardGNis ensuring gender equality with a simple idea- the signals now have women too!pic.twitter.com/8X0vJR8hvQ
— Aaditya Thackeray (@AUThackeray)August 1, 2020

this isn't funny anymore I'd like to cry now
— 🫐🦇🫐 (@ceoofartbots)August 2, 2020

https://twitter.com/Pavan_Bhat/status/1289828146544402437?s=20
ಆರಂಭವಾಗಿದೆ ಕರೊನಾದ ಅಂತ್ಯಕಾಲ; ದೆಹಲಿ ಮುಂಚೂಣಿಯಲ್ಲಿ; ಏನಿದು ಆರ್​-ವ್ಯಾಲ್ಯೂ ಲೆಕ್ಕಾಚಾರ…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
