ಮುಂಬೈ:ರಿಯಾಲಿಟಿ ಶೋ ಬಿಗ್​ಬಾಸ್​ನ 17 ನೇ ಸೀಸನ್‌ನ ವಿಜೇತರು ಮುಂಬೈನಲ್ಲೆ ಒಂದೆಡೆ ಸೇರಿದ್ದರು. ಸ್ಪರ್ಧಿಗಳು ಕೇಕ್ ಕತ್ತರಿಸುವುದು ಸೇರಿದಂತೆ ಸಲ್ಮಾನ್​ ಖಾನ್​ ಹಾಡುಗಳಿಗೆ ಸ್ಟೆಪ್ಸ್​ ಹಾಕಿ ಜನಮನ ರಂಜಿಸಿದರು. ಇದರ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ.ಬಿಗ್ ಬಾಸ್ 17 ರ ಯಶಸ್ಸಿನ ಕಾರ್ಯಕ್ರಮದ ಹಲವಾರು ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.
ಇದನ್ನೂ ಓದಿ:ಏಪ್ರಿಲ್​ನಿಂದ ಫಾಸ್ಟ್​ ಟ್ಯಾಗ್ ಬಂದ್​..! ಕಾರಣ ಇದೇ ನೋಡಿ..
ಶುಕ್ರವಾರ ರಾತ್ರಿ ನಡೆದ ಬಿಗ್​ಬಾಸ್ 17ರ ಯಶಸ್ಸನ್ನು ಆಚರಿಸಲು ಎಲ್ಲ ಸ್ಪರ್ಧಿಗಳು ಒಟ್ಟುಗೂಡಿದರು. ಅಂಕಿತಾ ಲೋಖಂಡೆ, ವಿಕ್ಕಿ ಜೈನ್, ಮುನಾವರ್ ಫರೂಕಿ, ಮನ್ನಾರಾ ಚೋಪ್ರಾ, ಇಶಾ ಮಾಳವಿಯಾ, ಅಭಿಷೇಕ್ ಕುಮಾರ್, ಸಮರ್ಥ್ ಜುರೆಲ್, ನೀಲ್ ಭಟ್, ಐಶ್ವರ್ಯ ಶರ್ಮಾ ಮತ್ತು ಇತರ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಂಕಿತಾ, ವಿಕ್ಕಿ, ಮುನಾವರ್ ಮತ್ತು ಮನ್ನಾರಾ ನೃತ್ಯ ಮಾಡಿದ ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದವು. ಪಾಪರಾಜೋ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಅಂಕಿತಾ ಲೋಖಂಡೆ, ಮುನಾವರ್ ಫರೂಕಿ, ಇಶಾ ಮಾಳವಿಯಾ ಮತ್ತು ನೀಲ್ ಭಟ್ ಅವರು ಸುಖ್ವಿಂದರ್ ಸಿಂಗ್ ಅವರ ಬಂಧನ್ ಚಲಿ ಬೋಲೋ ಹಾಡಿಗೆ ಭರ್ಜರಿಯಾಗಿ ನೃತ್ಯ ಮಾಡುವುದನ್ನು ಕಾಣಬಹುದು.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಮತ್ತೊಂದು ವೀಡಿಯೊದಲ್ಲಿ, ಮುನಾವರ್ ಫರೂಕಿ ಅವರು ಅನಿಮಲ್ ಚಿತ್ರದ ಜಮಾಲ್ ಕುಡು ಹಾಡಿಗೆ ಹೆಜ್ಜೆ ಹಾಕಿದ್ದು, ನೆಟ್ಟಿಗರು ಇದಕ್ಕೆ ಫಿದಾ ಆಗಿದ್ದಾರೆ. ವಿಕ್ಕಿ ಜೈನ್ ಮೈ ಹೂನ್ ನಾ ಚಿತ್ರದ ತುಮ್ಸೆ ಮಿಲ್ಕೆ ದಿಲ್ ಕಾ ಜೋ ಹಾಲ್‌ಗೆ ಗ್ರೂಪ್​ ಡ್ಯಾನ್ಸ್​ ಮಾಡುವುದನ್ನು ಕಾಣಬಹುದು,
ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ಎಲ್ಲ ಸ್ಪರ್ಧಿಗಳು ಹೊರಗೆ ನೆರೆದಿದ್ದ ಜನರತ್ತ ಕೈ ಬೀಸಿದರು. ಸ್ಪರ್ಧಿಗಳನ್ನು ಕಂಡು ಜನರೂ ಮೆಚ್ಚುಗೆ ವ್ಯಕ್ತಪಡಿಸಿದರು. ಇದು ದಾರಿಹೋಕರ ಗಮನ ಸೆಳೆಯಿತು,
ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಮುನಾವರ್ ಕಾರ್ಯಕ್ರಮದ ರೆಡ್ ಕಾರ್ಪೆಟ್ ಬಳಿ ಆಗಮಿಸುತ್ತಿದ್ದಂತೆ ತಮ್ಮ ನೆಚ್ಚಿನ ಸ್ಪರ್ಧಿಯನ್ನು ನೋಡಲು ಉತ್ಸುಕರಾಗಿದ್ದ ಅವರ ಬೆಂಬಲಿಗರು ಕೈ ಬೀಸಿದರು. ಆಗ ಆತ ನಗುತ್ತಾ ಕೈ ಬೀಸಿದರು. ಅಭಿಮಾನಿಗಳು ಉತ್ಸಾಹದಿಂದ ಡೋಂಗ್ರಿ ಕಾ ಕಿಂಗ್ ಎಂದು ಜೈಕಾರ ಹಾಕಿದರು.
‘ಗ್ಲಾಮರ್ ಪಾತ್ರಗಳಲ್ಲಿ ನಟಿಸಲು ಆಸಕ್ತಿಯಿಲ್ಲ’: ಹೀಗಂದಿದ್ದೇಕೆ ಮೃಣಾಲ್ ಠಾಕೂರ್?
ರಣಜಿಯಲ್ಲಿ ಪೃಥ್ವಿ ಶಾ ಸದ್ದು.. ರಾಷ್ಟ್ರೀಯ ಕ್ರಿಕೆಟ್ ತಂಡ ಸೇರಲು ಹರಸಾಹಸ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 2 =
Remember me
