ಉತ್ತರಾಖಂಡ:ಅಕ್ರಮ ಮದರಸಾ ಧ್ವಂಸಗೊಳಿಸಿದ ಹಿನ್ನೆಲೆ ಹಲ್ದ್ವಾನಿಯಲ್ಲಿ ತೀವ್ರ ಪ್ರತಿಭಟನೆ ಭುಗಿಲೆದ್ದು, ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ವಿಧ್ವಂಸಕತೆ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳಿಗೆ ಕಾರಣರಾದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದರು. ಘಟನೆ ಶಾಂತವಾದ ಬಳಿಕ ಹಲ್ದ್ವಾನಿ ಮುನ್ಸಿಪಲ್ ಕಾರ್ಪೊರೇಷನ್ ಈ ಹಿಂಸಾಚಾರಕ್ಕೆ ಕಾರಣನಾದ ಪ್ರಮುಖ ವ್ಯಕ್ತಿ ಅಬ್ದುಲ್ ಮಲಿಕ್ ವಿರುದ್ಧ ಒಟ್ಟು 2.44 ಕೋಟಿ ರೂ. ವಸೂಲಾತಿಗೆ ನೋಟಿಸ್ ನೀಡಿದ್ದು, ಗಲಭೆಯಲ್ಲಿ ಸರ್ಕಾರಿ ಆಸ್ತಿಗೆ ಉಂಟಾದ ಹಾನಿಯನ್ನು ಸರಿದೂಗಿಸಲು ಠೇವಣಿ ಇಡಬೇಕು ಎಂದು ತಿಳಿಸಿದೆ.
ಇದನ್ನೂ ಓದಿ:ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಭಾವಚಿತ್ರ ಅನಾವರಣಗೊಳಿಸಿದ ಸಿಎಂ
ವರದಿಯ ಪ್ರಕಾರ, ಮುನ್ಸಿಪಲ್ ಕಾರ್ಪೊರೇಶನ್ ತನ್ನ ಮೌಲ್ಯಮಾಪನದಲ್ಲಿ ಮಲಿಕ್​ 2.44 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾನೆ ಎಂಬುದನ್ನು ಪತ್ತೆಹಚ್ಚಿದೆ. 3 ದಿನಗಳೊಳಗೆ ಅಂದರೆ ಫೆಬ್ರವರಿ 15ರೊಳಗೆ ಮೊತ್ತವನ್ನು ಠೇವಣಿ ಮಾಡುವಂತೆ ಅಧಿಕಾರಿಗಳು ಹೇಳಿದ್ದಾರೆ,
‘ಮಲಿಕ್ ಕಾ ಬಗೀಚಾ’ದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡವನ್ನು ಕೆಡವಲು ತೆರಳಿದ್ದ ತಂಡದ ಮೇಲೆ ಮಲಿಕ್ ಬೆಂಬಲಿಗರು ದಾಳಿ ನಡೆಸಿ ನಗರಸಭೆಯ ಆಸ್ತಿಗಳಿಗೆ ಹಾನಿ ಮಾಡಿದ್ದಾರೆ ಎಂದು ಸ್ಥಳೀಯ ಸಂಸ್ಥೆ ನೋಟಿಸ್‌ನಲ್ಲಿ ಆರೋಪಿಸಿದೆ. ಇನ್ನು ಫೆಬ್ರವರಿ 8ರಂದು ಘಟನೆ ನಡೆದ ದಿನದಂದು ಮಲಿಕ್ ಹೆಸರಿನಲ್ಲಿ ದಾಖಲಾದ ಎಫ್‌ಐಆರ್ ಅನ್ನು ಕೂಡ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಪ್ರದೇಶದಲ್ಲಿ ದೆಹಲಿ ಚಲೋ ಪ್ರತಿಭಟನೆಗಾಗಿ ತೆರಳುತ್ತಿದ್ದ ಹುಬ್ಬಳ್ಳಿಯ ರೈತರ ಬಂಧನ
ನೋಟಿಸ್‌ನಲ್ಲಿ ಮಲಿಕ್​ಗೆ ಹಲ್ದ್ವಾನಿ ಮುನ್ಸಿಪಲ್ ಕಾರ್ಪೊರೇಶನ್ ತಿಳಿಸಿರುವಂತೆ, “ಪೊಲೀಸ್ ಮತ್ತು ಆಡಳಿತದ ತಂಡಗಳ ಮೇಲೆ ದಾಳಿ ಮಾಡುವ ಮೂಲಕ, ನಿಮ್ಮ ಬೆಂಬಲಿಗರು ಮುನ್ಸಿಪಲ್ ಕಾರ್ಪೊರೇಶನ್‌ನ ಆಸ್ತಿಗಳನ್ನು ಹಾನಿಗೊಳಿಸಿ, ಲೂಟಿ ಮಾಡಿದ್ದಾರೆ ಮತ್ತು ಸರ್ಕಾರಿ ಆಸ್ತಿಯನ್ನು ನಾಶಪಡಿಸಿದ್ದಾರೆ. ನಿಮ್ಮನ್ನು ಆರೋಪಿ ಎಂದು ಹೆಸರಿಸಲಾಗಿರುವ ಎಫ್‌ಐಆರ್‌ನಿಂದ ಮೇಲಿನ ಸತ್ಯವನ್ನು ದೃಢಪಡಿಸಲಾಗಿದೆ ಎಂದು ಹೇಳಿದೆ.
ಪ್ರಾಥಮಿಕ ಮೌಲ್ಯಮಾಪನದ ಪ್ರಕಾರ, ಯೋಜಿತ ರೀತಿಯಲ್ಲಿ ಘಟನೆಯನ್ನು ಉಂಟುಮಾಡುವ ಮೂಲಕ ನೀವು ಸುಮಾರು 2.44 ಕೋಟಿ ರೂಪಾಯಿಗಳ ನಷ್ಟವನ್ನು ಉಂಟುಮಾಡಿದ್ದೀರಿ. ಈ ಮೊತ್ತವನ್ನು ಫೆಬ್ರವರಿ 15ರೊಳಗೆ ಮುನ್ಸಿಪಲ್ ಕಾರ್ಪೊರೇಶನ್​ಗೆ ಕಟ್ಟಿಕೊಡಬೇಕು ಎಂದು ತಿಳಿಸಿದೆ,(ಏಜೆನ್ಸೀಸ್).
ಈ ನಟ ಯಾರೆಂದು ಗೊತ್ತಿಲ್ಲದಿದ್ದರೂ ಇವರ ಡೈಲಾಗ್ ಮಾತ್ರ ಪಕ್ಕಾ ನೆನಪಿರುತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fourteen =
Remember me
