ಮುಂಬೈ:ನಾವು ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳು ನಕಲು ಮಾಡಿ ಉತ್ತೀರ್ಣರಾಗುವುದನ್ನು ಮತ್ತು ಡಿಬಾರ್​ ಆಗಿರುವುದನ್ನು ನೋಡಿರುತ್ತೇವೆ, ಕೇಳಿರುತ್ತೇವೆ.
ಇದೀಗ ಇದೇ ರೀತಿಯ ಘಟನೆಯೊಂದು ಮುಂಬೈನಲ್ಲಿ ನಡೆದಿದ್ದು ಸಿನಿಮೀಯ ಶೈಲಿಯಲ್ಲಿ ನಕಲು ಮಾಡಲು ಮುಂದಾದ ನಾಲ್ವರು ಪರೀಕ್ಷಾರ್ಥಿಗಳು ಪೊಲೀಸರ ಅತಿಥಿಯಾಗಿದ್ದಾರೆ.
ಸಂಜಯ್​ ದತ್​ ನಟಿಸಿದ್ದ ಸೂಪರ್ ಹಿಟ್​ ಚಲನಚಿತ್ರ ಮುನ್ನಾಭಾಯಿ MBBS ಸಿನಿಮಾದಲ್ಲಿ ನಾಯಕ ಇಯರ್​ ಪೋನ್ಸ್ ಬಳಸಿ ನಕಲು ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ.
ಅದೇ ರೀತಿ ಮಹಾರಾಷ್ಟ್ರದಲ್ಲಿ ಸರ್ಕಾರ ನಡೆಸಿದ ಪೊಲೀಸ್​ ನೇಮಕಾತಿ ಪರೀಕ್ಷೆಯಲ್ಲಿ ನಾಲ್ವರು ಯುವಕರು ಟೆಕ್ನಾಲಜಿ ಬಳಸಿ ಆರಕ್ಷಕರ ಅತಿಥಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಪೊಲೀಸ್​ ಆಗಬೇಕೆಂಬ ಹಂಬಲದಲ್ಲಿ ನಾಲ್ವರು ಯುವಕರು ವೈರ್​ಲೆಸ್​ ಗಿಜ್ಮೋಸ್​ ಬಳಸಿ ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವುದು ಕಂಡು ಬಂದಿದೆ.
ಅನುಮಾನಗೊಂಡ ಅಧಿಕಾರಿಗಳು ನಾಲ್ವರು ಪರೀಕ್ಷಾರ್ಥಿಗಳನ್ನು ಪರಿಶೀಲನೆ ಮಾಡಿದಾಗ ಪೆನ್​ನಲ್ಲಿ ಸಿಮ್​ ಹಾಗೂ ಅಭ್ಯರ್ಥಿಗಳು ಬ್ಲೂಟೂತ್​ ಇಯರ್​ಬಡ್​ಗಳನ್ನು ಹಾಕಿಕೊಂಡಿರುವುದು ಕಂಡು ಬಂದಿದೆ.
ಪರೀಕ್ಷಾ ಕೇಂದ್ರ ಹೊರಗಡೆ ಅಪರಿಚಿತ ವ್ಯಕ್ತಿ ಓರ್ವ ಇವರಿಗೆ ಪ್ರಶ್ನೆ ಪತ್ರದಲ್ಲಿರುವ ಉತ್ತರಗಳನ್ನು ಅಭ್ಯರ್ಥಿಗಳಿಗೆ ಭೋದಿಸುತ್ತಿದ್ದ. ಪೊಲೀಸರು ಇಕ್ಕಳದ ಸಹಾಯದೊಂದಿಗೆ ಬಂಧಿತ ಆರೋಪಿಗಳ ಕಿವಿಯಿಂದ ಇಯರ್​ಬಡ್ಸ್​ಗಳನ್ನು ಹೊರ​ ತೆಗೆದಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರೀಕ್ಷಾರ್ಥಿಗಳಿಗೆ ಉತ್ತರ ಭೋದಿಸುತ್ತಿದ್ದ ಆರೋಪಿಗಾಗಿ ಬಲೆ ಬೀಸಿದ್ದು ಇದರ ಹಿಂದೆ ದೊಡ್ಡ ಗ್ಯಾಂಗ್​ನ ಕೈವಾಡ ಇರಬಹುದು ಎಂದು ಶಂಕಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + fourteen =
Remember me
