ಫಾರುಖಾಬಾದ್:ಕುಡುಕನೋರ್ವ ಸುಮಾರು 20 ಮಕ್ಕಳನ್ನು ಹಾಗೂ ಕೆಲವು ಮಹಿಳೆಯರನ್ನು ಮನೆಯೊಂದರಲ್ಲಿ ಒತ್ತೆಯಾಳಾಗಿಟ್ಟುಕೊಂಡ ವಿಚಿತ್ರ ಘಟನೆ ಉತ್ತರ ಪ್ರದೇಶದ ಫಾರುಖಾಬಾದ್​ನಲ್ಲಿ ನಡೆದಿದೆ.ಮೊಹಮ್ಮದಾಬಾದ್​ನ ಕಾರ್ಥಿಯಾ ಹಳ್ಳಿಯಲ್ಲಿ ಕುಡುಕನೋರ್ವ ಮನೆಯೊಳಗೆ ಮಕ್ಕಳನ್ನು, ಕೆಲವು ಮಹಿಳೆಯರನ್ನು ಕೂಡಿ ಹಾಕಿ, ತಾನೂ ಅಲ್ಲಿಯೇ ಇದ್ದಾನೆ. ಈತನೊಬ್ಬ ಕೊಲೆ ಪ್ರಕರಣದ ಆರೋಪಿ ಎನ್ನಲಾಗಿದೆ.
ಹಳ್ಳಿಯವರು ಕೆಲವರು ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗೆ ಹೋದರೆ ಅವರ ಮೇಲೆ ಗುಂಡು ಹಾರಿಸುತ್ತಿದ್ದಾನೆ. ಅದೇ ಹಳ್ಳಿಯವರಾದ ಸತೀಶ್​ ಚಂದ್ರ ದುಬೆ ಎಂಬುವರು ಕುಡುಕನನ್ನು ಕನ್ವಿನ್ಸ್​ ಮಾಡಿ, ಒತ್ತೆಯಾಳುಗಳನ್ನು ಬಿಡಿಸಲು ಹೋಗಿದ್ದರು. ಆದರೆ ಕುಡುಕ ಅವರೆಡೆಗೆ ಗುಂಡು ಹಾರಿಸಿದ್ದರಿಂದ ಪ್ರಯತ್ನ ವಿಫಲವಾಗಿದೆ. ಅಲ್ಲದೆ ಅವರ ಕಾಲಿಗೆ ಗಾಯವಾಗಿದೆ.
ನಾಲ್ಕು ತಾಸುಗಳಿಂದಲೂ ಮಕ್ಕಳು, ಮಹಿಳೆಯರು ಮನೆಯಲ್ಲಿಯೇ ಬಂಧಿತರಾಗಿದ್ದಾರೆ ಎಂದು ವರದಿಯಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು ತೆರಳಿದ್ದು ಮನೆಯನ್ನು ಸುತ್ತುವರಿಸಿದ್ದಾರೆ.
ಕುಡುಕ ಆರೋಪಿಯನ್ನು ಸುಭಾಷ್​ ಗೌತಮ್​ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿರುವ ಹಿರಿಯ ಪೊಲೀಸ್​ ಅಧಿಕಾರಿಗಳು ಆತನೊಂದಿಗೆ ಮಾತನಾಡಲು ಯತ್ನಿಸುತ್ತಿದ್ದಾರೆ. ಆದರೆ ಆತ ತಾನು ಯಾಕೆ ಮಕ್ಕಳನ್ನು, ಮಹಿಳೆಯರನ್ನು ಮನೆಯೊಳಗೆ ಬಂಧಿಸಿದ್ದೇನೆ ಎಂದು ಇನ್ನೂ ಹೇಳಿಲ್ಲ ಎನ್ನಲಾಗಿದೆ.
ಆದರೆ ಮನೆಯ ಬಳಿ ಯಾರು ಸುಳಿಯುವುದಕ್ಕೂ ಬಿಡುತ್ತಿಲ್ಲ. ಮನಸಿಗೆ ಬಂದಂತೆ ಗುಂಡು ಹಾರಿಸುತ್ತಿದ್ದಾನೆ. ಅವನ ಗುಂಡಿನ ದಾಳಿಗೆ ಮೂವರು ಪೊಲೀಸ್​ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.
ತನ್ನ ಮಗಳ ಹುಟ್ಟುಹಬ್ಬವಿದೆ ಬನ್ನಿ ಎಂದು ಹೇಳಿ ಈ ಎಲ್ಲ ಮಕ್ಕಳನ್ನೂ ಕುಡುಕ ಮನೆಗೆ ಕರೆದುಕೊಂಡು ಬಂದಿದ್ದ. ಹಾಗೇ ಕೆಲವು ಮಹಿಳೆಯರನ್ನೂ ಆಮಂತ್ರಿಸಿದ್ದ. ಎಂಎಲ್​ಎ ಮನೆಯ ಬಳಿ ಬರಬೇಕು ಎಂದು ಆಗ್ರಹಿಸಿದ್ದಾನೆ ಎನ್ನಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − three =
Remember me
