ನವದೆಹಲಿ:ಜೈಲು ಎಂದರೆ ಸಾಮಾನ್ಯವಾಗಿ ನಮ್ಮಗೆಲ್ಲಾ ನೆನಪಾಗುವುದು ಶಿಕ್ಷೆಗೆ ಒಳಪಟ್ಟವರು, ಪೊಲೀಸರ ಲಾಠಿ ಏಟು ಹಾಗೂ ರುಚಿಯಿಲ್ಲ ಊಟ ಸೇರಿದಂತೆ ನಾವು ಅನೇಕ ವಿಚಾರಗಳನ್ನು ಸಿನಿಮಾ ಹಾಗೂ ಸೀರಿಯಲ್​ಗಳಲ್ಲಿ ನೋಡಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಜೈಲುಗಳಲ್ಲಿ ಕೈದಿಗಳು ಮೊಬೈಲ್​ ಫೋನ್​ ಬಳಸುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿರುತ್ತವೆ.ಅದಕ್ಕೆ ಪೂರಕವೆಂಬೆಂತೆ ನಟೋರಿಯಸ್​ ರೌಡಿ ಒಬ್ಬ ಸ್ವರ್ಗವೆಂದು ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.
ಕೊಲೆ ಪ್ರಕರಣ ಒಂದರಲ್ಲಿ ಜೈಲು ಸೇರಿರುವ ಆರೋಪಿ ಉತ್ತರಪ್ರದೇಶದ ಸಾಮಾಜಿಕ ಜಾಲತಾಣದಲ್ಲಿ ಲೈವ್​ ಸ್ಟ್ರೀಮ್ ಮಾಡಿದ್ದಲ್ಲದೆ, ಜೈಲನ್ನು ಸ್ವರ್ಗವೆಂದು ಹೇಳಿದ್ದಾನೆ. ನಾನು ಇಲ್ಲಿ ಎಂಜಾಯ್ ಮಾಡುತ್ತಿದ್ದೇನೆ, ಇದು ಸ್ವರ್ಗ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬಳಿಕ ಹೆಚ್ಚಿನ ತನಿಖೆಗೆ ಆದೇಶಿಸಲಾಗಿದ್ದು, ಈ ಆರೋಪಿಯನ್ನು ಪ್ರಸ್ತುತ ಬರೇಲಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
बरेली➡बरेली जेल प्रशासन पर फिर उठे बड़े सवाल➡जेल में बंद आरोपी का वीडियो वायरल➡PWD ठेकेदार हत्याकांड का आरोपी जेल में है बंद➡जेल में बंद आरोपी का लाइव वीडियो चैट वायरल➡2019 में हुआ था शाहजहांपुर में ठेकेदार राकेश हत्याकांड➡मेरठ का रहने वाला है जेल में बदं आरोपी…pic.twitter.com/LHXZmRA1ub
ಇದನ್ನೂ ಓದಿ:ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನಟನೆಯ ಅರಬ್ಬೀ ಚಿತ್ರದ ಟ್ರೈಲರ್ ರಿಲೀಸ್
2019 ರ ಡಿಸೆಂಬರ್ 2 ರಂದು ದೆಹಲಿಯ ಶಹಜಾನ್‌ಪುರದ ಸದರ್ ಬಜಾರ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಗುತ್ತಿಗೆದಾರ ರಾಕೇಶ್ ಯಾದವ್ (34) ಅವರನ್ನು ಹಾಡಹಗಲೇ ಗುಂಡಿಕ್ಕಿ ಕೊಂದ ಆರೋಪ ಆಸಿಫ್ಮೇ ಹಾಗೂ ರಾಹುಲ್​ ಚೌಧರಿ ಮೇಲಿದೆ. ಇಬ್ಬರೂ ಪ್ರಸ್ತುತ ಬರೇಲಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. ವಿಡಿಯೋ ವೈರಲ್​ ಆದ ಬಳಿಕ ರಾಕೇಶ್ ಯಾದವ್ ಅವರ ಸಹೋದರ ಬರೇಲಿ ಜಿಲ್ಲಾಧಿಕಾರಿ ಉಮೇಶ್ ಪ್ರತಾಪ್ ಸಿಂಗ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದರು.
ಆಸಿಫ್ ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ಪಡೆಯುತ್ತಿದ್ದಾನೆ ಎಂದು ದೂರುದಾರರು ಆರೋಪಿಸಿದ್ದು, ಇದಕ್ಕೆ ಸಹಕರಿಸುತ್ತಿರುವ ಅಧಿಕಾರಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕೆಂದು ಸಂತ್ರಸ್ತರ ಸಹೋದರ ಆಗ್ರಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
