ಸಿಂಧ್‌:ಸುಮಾರು 90 ಪ್ರತಿಶತದಷ್ಟು ಹಿಂದೂ ಜನಸಂಖ್ಯೆ ಇರುವ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ.
ಇತ್ತೀಚೆಗಷ್ಟೇ 14 ವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಿ, ಆಕೆಗೆ ಕೊಡಬಾರದ ಕಿರುಕುಳ ಕೊಟ್ಟು, ಅತ್ಯಾಚಾರ ಮಾಡಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿರುವ ಘಟನೆ ನಡೆದಿತ್ತು. ಅದರ ಬೆನ್ನಲ್ಲೇ ಇದೀಗ ಭೀಕರ ಘಟನೆಯಲ್ಲಿ, ಹಿಂದೂ ಯುವಕನ ಗಂಟಲನ್ನು ಸೀಳಿ ಆತನ ಮೃತ ದೇಹವನ್ನು ಸಿಂಧ್-ಪಾಕಿಸ್ತಾನದ ಹಲಾ, ಮಿಟಾರಿ ಎಂಬಲ್ಲಿ ಇರುವ ನದಿಯಲ್ಲಿ ಎಸೆಯಲಾಗಿದೆ.
ಪಾಕಿಸ್ತಾನದ ಕಾರ್ಯಕರ್ತ ರಹತ್ ಆಸ್ಟಿನ್ ಈ ಸುದ್ದಿಯನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳಾಗಿ ಹುಟ್ಟುವ ದೌರ್ಭಾಗ್ಯ ಯಾರಿಗೂ ಬೇಡ ಎಂದು ಅವರು ಬರೆದುಕೊಂಡಿದ್ದಾರೆ.
WARNING: GRAPHIC CONTENT: A Hindu Youth Mohan Bagari's dead body found in river in Hala, Mitiari,Sindh-Pakistan. His throat was slit by a sharp tool. His family was starving already & now they are worry about his funral. Its a curse to be born as a Non-Muslim in Pakistan. 14-6-20pic.twitter.com/cf3vxvPm1p
— Persecution Report PK (@pk_persecution)July 15, 2020

ಪಾಕಿಸ್ತಾನದ ಸಿಂಧ್‌ನ ಮಿಟಾರಿ ಜಿಲ್ಲೆಯ ತಾಲ್ಲೂಕಾಗಿರುವ ಹಲಾ ನಗರದ ನದಿಯಿಂದ ಮೋಹನ್ ಬಗರಿ ಎಂಬ ಹಿಂದೂ ಯುವಕನ ಮೃತ ದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಬರೆದಿದ್ದಾರೆ. ತೀಕ್ಷ್ಮವಾದ ಆಯುಧದಿಂದ ಯುವಕರ ಗಂಟಲು ಸೀಳಲ್ಪಟ್ಟಿದೆ ಎಂದು ವರದಿಗಳು ಹೇಳಿವೆ. ಮೊದಲೇ ಕಡುಬಡತನದಿಂದ ಕಂಗೆಟ್ಟಿರುವ ಕುಟುಂಬವೀಗ ಯುವಕನ ಅಂತ್ಯಕ್ರಿಯೆ ನಡೆಸಲೂ ಭಯಪಡುವಂಥ ಪರಿಸ್ಥಿತಿ ಬಂದಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಪಾಕಿಸ್ತಾನದ ಭಯೋತ್ಪಾದಕ ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಈ ರೀತಿ ದಬ್ಬಾಳಿಕೆ ನಡೆಯುತ್ತಿರುವುದು ಸಾಮಾನ್ಯವಾಗಿದೆ. ಇಂತಹ ಘಟನೆಗಳು ನಿಯಮಿತವಾಗಿ ವರದಿಯಾಗುತ್ತಿದ್ದರೂ, ಇಮ್ರಾನ್ ಖಾನ್ ಸರ್ಕಾರವು ಹಿಂದೂಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ, ಅಷ್ಟೇ ಅಲ್ಲದೇ ತಪ್ಪಿತಸ್ಥರಿಗೆ ಶಿಕ್ಷೆಯೂ ಆಗುತ್ತಿಲ್ಲ.
ಈ ಹಿಂದೇ ಇದೇ ಪ್ರಾಂತ್ಯದ ಬಾದಿನ್ ಜಿಲ್ಲೆಯ ವ್ಯಾಪ್ತಿಗೆ ಬರುವ ಗೋಲಾರ್ಚಿ ಜಿಲ್ಲೆಯಲ್ಲಿ 102 ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗಿದೆ. ಸ್ಥಳೀಯ ದೇವಾಲಯವೊಂದರಲ್ಲಿ ಇರಿಸಲಾಗಿರುವ ಹಿಂದೂ ದೇವರುಗಳ ಎಲ್ಲಾ ವಿಗ್ರಹಗಳನ್ನು ನಾಶಪಡಿಸಲಾಗಿದೆ ಮತ್ತು ಆವರಣವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ವರದಿಯಾಗಿದೆ.
ಎಂಟಿಆರ್‌ನ 30 ಸಿಬ್ಬಂದಿಗೆ ಕರೊನಾ- ಮುಖ್ಯ ಘಟಕ ಸೀಲ್‌ಡೌನ್‌!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen + three =
Remember me
