ಮುಂಬೈ:ಚಿಕನ್​ ತಂದೂರಿ ಬಿಲ್​ ಸೆಟಲ್​ ಮಾಡುವ ವಿಚಾರವಾಗಿ ಶುರುವಾದ ಗಲಾಟೆ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾರಾಷ್ಟ್ರದ ಮುಲುಂಡ್​ನಲ್ಲಿ​ ನಡೆದಿದೆ.
ಮೃತರನ್ನು ಅಕ್ಷಯ್​ ವಾರ್ವೇಕರ್ (30)​ ಎಂದು ಗುರುತಿಸಲಾಗಿದ್ದು, ಇವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಘಟನೆ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಇಮ್ರಾನ್​ ಮಹಮೂದ್​ ಖಾನ್​ (27), ಸಲೀಂ ಮಹಮೂದ್ ಖಾನ್ (29), ಫಾರೂಕ್ ಗಫರ್ ಬಗ್ವಾನ್ (38), ನೌಶದ್​ ಅಲಿ ಬಗ್ವಾನ್​ (35), ಅಬ್ದುಲ್​ ಬಗ್ವಾನ್ (40) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಸಂಪೂರ್ಣ ಆಘಾತಕಾರಿ; ಕೆಕೆಆರ್​ ಆಟಗಾರನ ನಡೆಗೆ ಸುನೀಲ್​ ಗಾವಸ್ಕರ್ ಕೆಂಡ
ಈ ಕುರಿತು ಪ್ರೆತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಅಕ್ಷಯ್​ ಹಾಗೂ ಆತನ ಸ್ನೇಹಿತ ಆಕಾಶ್​ ಸಾಬ್ಲೆ ಥಾಣೆಯ ಕಿಸಾನ್​ ನಗರದಲ್ಲಿರುವ ಇಮ್ರಾನ್​ ಮಾಲೀಕತ್ವದ ಚಿಕನ್​ ಅಂಗಡಿಗೆ ತೆರಳಿದ್ದಾರೆ. ಚಿಕನ್​ ತಂದೂರಿ ಖರೀದಿಸಿ ಬಳಿಕ ಬಿಲ್​ ವಿಚಾರವಾಗಿ ಇಬ್ಬರು ಅಂಗಡಿಯವರ ಜೊತೆ ಜಗಳವಾಡಿದ್ದಾರೆ. ಬಳಿಕ ವೈಶಾಲಿನಗರದಲ್ಲಿರುವ ಇಮ್ರಾನ್​ ಸಹೋದರ ಸಲೀಂ ಅಂಗಡಿ ಬಳಿ ತೆರಳಿ ಅಲ್ಲಿಯೂ ಕೂಡ ಇದೇ ವಿಚಾರವಾಗಿ ಜಗಳವಾಡಿದ್ದಾರೆ. ಕೂಡಲೇ ಸ್ಥಳೀಯರು ಮಧ್ಯಪ್ರವೇಶಿಸಿ ಜಗಳವನ್ನು ಬಿಡಿಸಿ ಕಳಿಸಿದ್ದಾರೆ.
ರಾತ್ರಿ 9:30ರ ಸುಮಾರಿಗೆ ಇವರಿಬ್ಬರು ಇಮ್ರಾನ್ ಹಾಗೂ ಸಲೀಂ ಅಂಗಡಿ ಬಳಿ ಕಾಣಿಸಿಕೊಂಡಿದ್ದು, ಇದರಿಂದ ಕುಪಿತಗೊಂಡ ಆರೋಪಿಗಳು ಆಕಾಶ್​ ಹಾಗೂ ಅಕ್ಷಯ್​ ಮೇಲೆ ಚಾಕು ಹಾಗೂ ರಾಡ್​ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಅಕ್ಷಯ್​ ಮೃತಟಪಟ್ಟಿದ್ದಾನೆ. ಆಕಾಶ್​ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 3 =
Remember me
