ನವದೆಹಲಿ:ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳ ತನ್ನ ಪ್ರಿಯಕರನ ಜತೆಗೂಡಿ ಪತಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ಆತನ ಸಾವಿನ ಬಗ್ಗೆ ಅಕ್ಕಪಕ್ಕದವರು ಅನುಮಾನ ವ್ಯಕ್ತಪಡಿಸಿದಾಗ ಇದಕ್ಕೆ ಕರೊನಾ ಸೋಂಕು ಕಾರಣ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾಳೆ.
ದೆಹಲಿಯ ಅಶೋಕ್​ ವಿಹಾರದಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿದ್​ದ ಶರತ್​ ದಾಸ್​ (46) ಕೊಲೆಯಾದವನು. ಅನಿತಾ (30) ಮತ್ತು ಆಕೆಯ ಪ್ರಿಯಕರ ಸಂಜಯ್​ ಕೊಲೆ ಮಾಡಿದವರು. ಏಪ್ರಿಲ್​ 30ರ ರಾತ್ರಿವರೆಗೂ ಆರೋಗ್ಯವಾಗಿದ್ದ ಶರತ್​ ದಾಸ್​, ರಾತ್ರಿ ವೇಳೆಗೆ ಕರೊನಾ ಸೋಂಕು ತಗುಲಿ ಮೃತಪಟ್ಟಿರುವುದಾಗಿ ಅನಿತಾ ಹೇಳಿಕೆಯನ್ನು ನಂಬಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ಕೊಟ್ಟಾಗ ಕೊಲೆ ರಹಸ್ಯ ಬಹಿರಂಗವಾಗಿದೆ.
ಇದನ್ನೂ ಓದಿ:ಐಫೋನ್ ಗಿಫ್ಟ್ ಆಮಿಷ: ಆನ್​ಲೈನ್ ಲಿಂಕ್ ಕಳುಹಿಸಿ ಇಬ್ಬರ ಬ್ಯಾಂಕ್ ಖಾತೆಗೆ ಕನ್ನ
ಅನಿತಾ ಕೆಲವು ವರ್ಷಗಳಿಂದ ಸಂಜಯ್​ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ತಿಳಿದಿದ್ದ ಶರತ್​ ಆಕೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಅನಿತಾ ಆತನನ್ನು ಹತ್ಯೆ ಮಾಡಲು ನಿರ್ಧರಿಸಿದಳು. ಇದಕ್ಕಾಗಿ ತನ್ನ ಪ್ರಿಯಕರ ಸಂಜಯ್​ನ ನೆರವು ಪಡೆದುಕೊಂಡಿದ್ದಳು ಎನ್ನಲಾಗಿದೆ.
ಏಪ್ರಿಲ್​ 30ರ ರಾತ್ರಿ ಎಂದಿನಂತೆ ಊಟ ಮಾಡಿ ಶರತ್​ ನಿದ್ದೆಗೆ ಜಾರಿದ್ದ. ಈ ಸಂದರ್ಭವನ್ನು ಬಳಸಿಕೊಂಡ ಆಕೆ, ತನ್ನ ಪ್ರಿಯಕರನನ್ನು ಮನೆಗೆ ಕರೆಯಿಸಿಕೊಂಡಿದ್ದಳು. ಬಳಿಕ ಇಬ್ಬರು ಸೇರಿ ದಿಂಬು ಹಾಗೂ ಹೊದಿಕೆ ಸಹಾಯದಿಂದ ಶರತ್​ ಮುಖವನ್ನು ಅದುಮಿ ಸಾಯಿಸಿದ್ದರು.
ಇದನ್ನೂ ಓದಿ:ಉತ್ತರ ಪ್ರದೇಶದ ಮಸೀದಿಯಲ್ಲಿ ಅಡಗಿದ್ದ ಕರ್ನಾಟಕದ ತಬ್ಲಿಘಿಗಳ ಮೇಲೆ ಕೇಸ್!
ಮೇ 1ರ ಬೆಳಗ್ಗೆ ಎದ್ದಾಗ ಶರತ್​ ನಿಶ್ಚಲವಾಗಿ ಬಿದ್ದಿದ್ದ. ಬಹುಶಃ ಇದಕ್ಕೆ ಕೋವಿಡ್​ ಸೋಂಕು ಕಾರಣವಾಗಿರಬಹುದು ಎಂದು ಅನಿತಾ ನೆರೆಹೊರೆಯವರಿಗೆ ಹೇಳಿದ್ದಳು.
ಇದರಿಂದ ಹೆದರಿದ ನೆರೆಹೊರೆಯವರು ತಮ್ಮ ಪ್ರದೇಶದಲ್ಲಿ ಕರೊನಾ ಸೋಂಕಿನಿಂದ ಸಾವಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಶವಸಂಸ್ಕಾರಕ್ಕೆ ನೆಡದಿದ್ದ ಸಿದ್ಧತೆಯನ್ನು ಸ್ಥಗಿತಗೊಳಿಸಿ, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರವಾನಿಸಿದ್ದರು. ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು, ಉಸಿರುಗಟ್ಟಿಸಿ ಸಾಯಿಸಿರುವುದಾಗಿ ಮೇ 7ರಂದು ಮಾಹಿತಿ ನೀಡಿದ್ದರು. ತಕ್ಷಣವೇ ಅನಿತಾಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಳು ಎನ್ನಲಾಗಿದೆ.
ಹಳಿಗಳ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಹರಿದ ಗೂಡ್ಸ್​ ರೈಲು: 15 ಮಂದಿ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 11 =
Remember me
