ಅಯೋಧ್ಯೆ:ಹಿಂದೂ ಧರ್ಮಕ್ಕಿರುವ ಶಕ್ತಿಯೇ ಅಂಥದ್ದು. ಶುದ್ಧ ಭಕ್ತಿ, ಪ್ರೇಮದಿಂದ ಬರುವ ಯಾವುದೇ ಧರ್ಮೀಯರಿಗೂ ಹೃದಯದಲ್ಲಿ ಜಾಗಕೊಡುತ್ತದೆ. ಇದಕ್ಕೆ ಇಲ್ಲಿ ಮತ್ತೊಂದು ಉದಾಹರಣೆ ಇದೆ ನೋಡಿ..ಆಗಸ್ಟ್ 5 ರಂದು ನಡೆಯಲಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಛತ್ತೀಸಗಢದ ಹಳ್ಳಿಯ ಮುಸ್ಲಿಂ ವ್ಯಕ್ತಿಯೊಬ್ಬರು ಅಂದಾಜು 800 ಕಿ.ಮೀ ದೂರ ಪ್ರಯಾಣ ಕೈಗೊಳ್ಳಲಿದ್ದಾರೆ.ಅವರು ಶ್ರೀರಾಮ ದೇವರ ತಾಯಿ ಕೌಶಲ್ಯೆ ಜನಿಸಿದ ಚಂದ್ಕುರಿ ಗ್ರಾಮದ ಭಕ್ತ ಮೊಹಮ್ಮದ್ ಫೈಜ್ ಖಾನ್. ಅವರು ದೇವಸ್ಥಾನವೊಂದಕ್ಕೆ ಭೇಟಿ ನೀಡಲು ಇಷ್ಟು ದೂರ ಪ್ರಯಾಣಿಸುತ್ತಿರುವುದು ಇದೇ ಮೊದಲಲ್ಲ ಎಂದೂ ಹೇಳಿಕೊಂಡಿದ್ದಾರೆ.
ಇದನ್ನು ಓದಿ:ರೂಲ್ಸ್‌ ಅಂದ್ರೆ ಇದಪ್ಪಾ…ಮೇಕೆಯಾಯ್ತು ಅರೆಸ್ಟ್‌! ಏಕೆ ಗೊತ್ತಾ?
“ನಾನು ದೇವಾಲಯಗಳಿಗೆ ಹೋಗುತ್ತಿರುವುದು ಇದೇ ಮೊದಲಲ್ಲ. 15,000 ಕಿ.ಮೀ ನಡೆದು ವಿವಿಧ ದೇವಾಲಯಗಳಿಗೆ ಹೋಗಿದ್ದೇನೆ. ಮಠಗಳಲ್ಲಿ ಉಳಿದುಕೊಂಡಿದ್ದೇನೆ. ಈ ಕುರಿತು ಯಾರೂ ನನಗೆ ಒಮ್ಮೆಯೂ ವಿರೋಧ ವ್ಯಕ್ತಪಡಿಸಿಲ್ಲ ಎನ್ನುತ್ತಾರೆ.ಈ ಮುಸ್ಲಿಂ ಭಕ್ತ, ಭೂಮಿ ಪೂಜೆ ಕಾರ್ಯಕ್ರಮಕ್ಕಾಗಿ ಚಾಂದ್ಕುರಿಯಿಂದ ಮಣ್ಣನ್ನೂ ತರುತ್ತಿದ್ದಾರೆ.ಖಾನ್ ತಮ್ಮ ಪೂರ್ವಜರು ಹಿಂದೂಗಳು ಎಂದು ಹೇಳಿದ್ದಾರೆ. “ನಾನು ನನ್ನ ಹೆಸರು ಮತ್ತು ಧರ್ಮದಿಂದ ಮುಸ್ಲಿಂ, ಆದರೆ ನಾನು ಭಗವಾನ್ ಶ್ರೀ ರಾಮನ ಭಕ್ತ. ನಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಅವರ ಹೆಸರುಗಳು ರಾಮ್‌ಲಾಲ್ ಅಥವಾ ಶ್ಯಾಮ್‌ಲಾಲ್ ಎಂಬುದಾಗಿತ್ತು. ನಾವು ಚರ್ಚ್ ಅಥವಾ ಮಸೀದಿ.. ಎಲ್ಲಿಗೇ ಹೋದರೂ ಮೂಲತಃ ನಾವೆಲ್ಲರೂ ಹಿಂದೂಗಳು ಎಂದಿದ್ದಾರೆ ಶುದ್ಧ ಭಕ್ತಿಗೆ ಧರ್ಮದ ಹಂಗಿಲ್ಲ ಎನ್ನುವ ಅರ್ಥದಲ್ಲಿ.
ಇದನ್ನೂ ಓದಿ:60ರಲ್ಲಿ ಬದುಕು ಮುಗಿಸಿಕೊಂಡ ಕರೊನಾ ವಾರಿಯರ್: ಸೋಂಕಿಗೆ ಬಲಿಯಾಗಿ ಆತ್ಮಹತ್ಯೆಗೆ ಶರಣಾದ ಅಜ್ಜಿ
“ನಮ್ಮ ಪ್ರಮುಖ ಪೂರ್ವಜ ಭಗವಾನ್ ಶ್ರೀರಾಮನೇ. ಅಲ್ಲಮ ಇಕ್ಬಾಲ್ (ಪಾಕಿಸ್ತಾನದ ರಾಷ್ಟ್ರೀಯ ಕವಿ) ಇದನ್ನೇ ಒಂದು ರೀತಿಯಲ್ಲಿ ವಿವರಿಸಲು ಪ್ರಯತ್ನಿಸಿದ್ದರು, ಅವರು ‘ಪರಿಪೂರ್ಣ ದೃಷ್ಟಿ ಹೊಂದಿರುವವರು, ಭಗವಾನ್ ಶ್ರೀರಾಮನನ್ನೇ ಭಾರತದ ಅಧಿಪತಿ ಎಂದು ಪರಿಗಣಿಸುತ್ತಾರೆ’ ಎಂದು ಹೇಳಿದ್ದಾರೆ. ಇದೇ ಭಕ್ತಿಪೂರ್ವಕವಾಗಿ ನಾನು ಭಗವಾನ್ ಶ್ರೀರಾಮ ಮಂದಿರದ ಭೂಮಿ ಪೂಜೆಗೆ ಕೊಡುಗೆಯಾಗಿ ಸಮರ್ಪಿಸಲು ಚಾಂದ್ಕುರಿಯಲ್ಲಿರುವ ತಾಯಿ ಕೌಶಲ್ಯೆ ಜನ್ಮಸ್ಥಳದಿಂದ ಅಯೋಧ್ಯೆಗೆ ಮಣ್ಣನ್ನು ತೆಗೆದುಕೊಂಡು ಹೋಗುತ್ತೇನೆ ಎಂದಿದ್ದಾರೆ.
ಮತ್ತೆ ಬ್ಯಾನ್‌ ಆಯ್ತು 47 ಆ್ಯಪ್‌: ಸುಸ್ತಾದ ಚೀನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 15 =
Remember me
