ಕೊಲ್ಕತ್ತ:ಇಸ್ಲಾಂ ಧರ್ಮದಲ್ಲಿ ಪ್ರಮುಖವಾಗಿ ಆಚರಿಸುವ ಬಕ್ರಿದ್​ ಹಬ್ಬವು ತ್ಯಾಗ, ಬಲಿದಾನಕ್ಕೆ ಹೆಸರುವಾಸಿಯಾಗಿದ್ದು, ವ್ಯಕ್ತಿ ಪೂಜೆಗೆ ಅಷ್ಟಾಗಿ ಪ್ರಾಮುಖ್ಯತೆ ನೀಡುವುದಿಲ್ಲ. ಈದ್​ ಹಬ್ಬದಂದು ಮುಸ್ಲಿಂ ಬಾಲಕಿಯನ್ನು ದುರ್ಗಾ ದೇವಿಯ ರೀತಿ ಅಲಂಕರಿಸಿ, ಪೂಜಿಸಿ ಭಾವೈಕ್ಯತೆ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಘಟನೆಯೂ ಪಶ್ಚಿಮ ಬಂಗಾಳದರ ಕೊಲ್ಕತ್ತಾದಲ್ಲಿ ನಡೆದಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಖುತಿ ಪೂಜೆಯ ಅಂಗವಾಗಿ ರಿಮಿಶಾ ಎಂಬ ಬಾಲಕಿಗೆ ದುರ್ಗಾ ದೇವಿಯ ರೀತಿ ಅಲಂಕಾರ ಮಾಡಲಾಗಿದ್ದು, ಈದ್​-ಅಲ್-ಅಧಾ ಹಬ್ಬದ ದಿನದಂದು ನೆರವೇರಿಸಲಾಗಿದೆ. ಕೊಲ್ಕತ್ತಾದ ದುರ್ಗಾ ದೇವಿ ಪೂಜಾ ಸಮಿತಿಯೂ ಕಾರ್ಯಕ್ರಮವನ್ನು ಆಯೋಜಿಸಿತ್ತು.
ವಿಡಿಯೋದಲ್ಲಿ ಕಂಡು ಬಂದಿರುವ ಹಾಗೆ ಬಾಲಕಿ ರಿಮಿಶಾ ಹಾಗೂ ಆಕೆಯ ತಾಯಿ ಸಂಜಿದಾ ಪೂಜೆಯಲ್ಲಿ ಭಾಗಿಯಾಗಿರುವುದು ಕಂಡು ಬರುತ್ತದೆ. ಕೊಲ್ಕತ್ತಾದ ಸಿಂಥಿ ಸರ್ಕಸ್​ ಮೈದಾನದ ಬಳಿ ಇರುವ ಕಾಶೀಶ್ವರ ಶಿವನ ದೇವಾಲಯದಲ್ಲಿ ನಡೆದಿದೆ. ಖುತಿ ಪೂಜೆಯು ಸಾಮಾನ್ಯವಾಗಿ ರಥಯಾತ್ರಯ ಸಂದರ್ಭದಲ್ಲಿ ನಡೆಯುತ್ತದೆ. ಆದರೆ, ಈದ್​ ದಿನದಂದು ಪೂಜೆ ನೆರವೇರಿಸಿರುವುದು ಎಲ್ಲರಲ್ಲೂ ಆಶ್ವರ್ಯ ಮೂಡಿಸಿದೆ.
ಇದನ್ನೂ ಓದಿ:ಜುಲೈ 13-14ರಂದು ಬೆಂಗಳೂರಿನಲ್ಲಿ ವಿಪಕ್ಷಗಳ ಎರಡನೇ ಸಭೆ; ಮಲ್ಲಿಕಾರ್ಜುನ ಖರ್ಗೆ ನೇತೃತ್ವ: ಶರದ್​ ಪವಾರ್​
ಈ ಕುರಿತು ಪ್ರತಿಕ್ರಿಯಿಸಿರುವ ಬಾರಾನಗರ ಸ್ನೇಹ ಕೂಟದ ಸದಸ್ಯರು ಕೋಮು ಸೌಹಾರ್ದತೆಯ ಸಂದೇಶವನ್ನು ಸಾರಲು ಈದ್​ ದಿನದಂದು ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ರಾಮನವಮಿ ಹಾಗೂ ಹನುಮ ಜಯಂತಿ ಕಾರ್ಯಕ್ರಮದ ವೇಳೆ ಉಂಟಾದ ಘರ್ಷಣೆಗಳಿಂದಾಗಿ ನಮಗೆ ತೀವ್ರ ಬೇಸರವನ್ನುಂಟು ಮಾಡಿತ್ತು.
ನಾವು ಚಿಕ್ಕಂದಿನಿಂದ ಹಿಮದೂ -ಮುಸ್ಲಿಂ ಒಂದೇ ಎಂದು ಓದಿಕೊಂಡು ಬಂದಿದ್ದೇವೆ. ಎರಡು ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡಲು ಹಲವು ಬಾರಿ ಯತ್ನಿಸಲಾಗಿದೆ. ಆದ್ದರಿಮದ ನಾವು ಈದ್​ ಹಬ್ಬದ ದಿನದಂದು ಖುತಿ ಪೂಜೆಯನ್ನು ಹಮ್ಮಿಕೊಂಡು ಭಾವೈಕ್ಯತೆಯ ಸಂದೇಶವನ್ನು ಸಾರಿದ್ದೇವೆ ಎಂದು ಬಾರಾನಗರ ಸ್ನೇಹ ಕೂಟದ ಅಧ್ಯಕ್ಷ ಅಜಯ್​ ಘೋಶ್​ ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 6 =
Remember me
