ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್​ಎಸ್​ಎಸ್​)ದ ಪರಿಹಾರ ಕಾರ್ಯಚಟುವಟಿಕೆ ಕುರಿತು ಮುಸ್ಲಿಂ ನಾಯಕರು ಮೆಚ್ಚುಗೆ ಸೂಚಿಸಿದ್ದಾರೆ. ಆರ್​​ಎಸ್​​ಎಸ್​ ಮುಸ್ಲಿಂ ವಿರೋಧಿ ಎಂದು ದೂಷಿಸುವುದು ಸರಿಯಲ್ಲ. ಅಂತಹ ಆರೋಪಗಳು ನಿರಾಧಾರವಾದುದು ಅಷ್ಟೇ ಅಲ್ಲ ಸತ್ಯಕ್ಕೆ ದೂರವಾದುದು. ಹೀಗೆಂದು ಆರೆಸ್ಸೆಸ್​ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ವಿದೇಶಿ ಮಾಧ್ಯಮ ಸಂಸ್ಥೆ ಪ್ರತಿನಿಧಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸುವಾಗ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:VIDEO: ಲಾಕ್​ಡೌನ್ ನಂತರ ಮುಂದೇನು?: ಆರೆಸ್ಸೆಸ್​ ನೀತಿ ನಿಲುವು ಹೀಗಿದೆ ನೋಡಿ…
ಕರೊನಾ ವೈರಸ್ ತಡೆಗಟ್ಟುವ ಸಲುವಾಗಿ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿದ ಆ ಕ್ಷಣದಿಂದಲೇ ಆರೆಸ್ಸೆಸ್​ ನಾಯಕರು ದೆಹಲಿಯ ಶಹೀನ್ ಭಾಗ್​ನಲ್ಲಿ ಮುಸ್ಲಿಂ ನಾಯಕರಷ್ಟೇ ಅಲ್ಲ ದೇಶದ ಎಲ್ಲ ರಾಜ್ಯಗಳ ಪ್ರಮುಖ ಮುಸ್ಲಿಂ ನಾಯಕರ ಜತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಎಲ್ಲ ಕಡೆಯಲ್ಲೂ ಆರೆಸ್ಸೆಸ್​ ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರೆಲ್ಲೂ ಈ ಪರಿಹಾರ ಕಾರ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ ಎಂದು ಹೊಸಬಾಳೆ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಕೇಂದ್ರ ಸ್ಥಾನವಾಗಿ ದೆಹಲಿಯ ಶಹೀನ್ ಭಾಗ್ ಗುರುತಿಸಿಕೊಂಡಿತ್ತು. ಅಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ತಬ್ಲಿಘಿ ಜಮಾತ್​ ಪ್ರಕರಣದ ನಂತರದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್​ ಅವರು ಕೊಟ್ಟ ಹೇಳಿಕೆಯ ಪ್ರತಿಧ್ವನಿಯಾಗಿ ಹೊಸಬಾಳೆಯವರ ಹೇಳಿಕೆ ಹೊರಹೊಮ್ಮಿದೆ.
ಇದನ್ನೂ ಓದಿ:ಭಾರಿ ಪ್ರಮಾಣದ ಲಿಕ್ಕರ್ ಮಿಸ್ಸಿಂಗ್​; ಪೊಲೀಸರ ಮೇಲೆಯೇ ಡೌಟ್​!
ಆರೆಸ್ಸೆಸ್​ ನಿಲುವಿನ ವಿಚಾರವಾಗಿ ಮುಸ್ಲಿಂ ಸಮುದಾಯ ಅನೇಕ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದಾರೆ.ತಬ್ಲಿಘಿ ಪ್ರಕರಣದಲ್ಲಿ ಭಾರತದ ಇಮೇಜ್ ಹಾಳು ಮಾಡುವ ಪ್ರಯತ್ನ ನಡೆದಿತ್ತು. ಅದನ್ನು ತಪ್ಪಿಸುವಂತೆ ಮಾಡಿದ್ದು ಭಾಗವತ್ ಅವರ ಪ್ರಯತ್ನ. ಆರ್​ಎಸ್​ಎಸ್​ ಒಂದು ಸಂಘಟನೆಯಾಗಿ ಮುಸ್ಲಿಂ ಸಮುದಾಯದ ನಾಯಕರ ಜತೆಗೆ ಸಂಪರ್ಕದಲ್ಲಿದೆ. ಅವರೂ ಈ ದೇಶದ ಸಾಮುದಾಯಿಕ ಭಾಗವೇ ಆಗಿದ್ದಾರೆ. ಆರೆಸ್ಸೆಸ್ ಕಾರ್ಯಕರ್ತರು ಕೇವಲ ಹಿಂದು ಸಮುದಾಯಕ್ಕಷ್ಟೇ ಪರಿಹಾರ ಕಾರ್ಯ ಮಾಡಿಲ್ಲ. ಇಡೀ ದೇಶದ ಜನರ ಹಿತವನ್ನು ಗಮನದಲ್ಲಿರಿಸಿಕೊಂಡು ಅವರು ಕೆಲಸ ಮಾಡಿದ್ದಾರೆ. ಅದರಲ್ಲಿ ಈ ಮುಸ್ಲಿಂ ಸಮುದಾಯವೂ ಸೇರಿಕೊಂಡಿದೆ. ಈ ಕೆಲಸದ ಬಗ್ಗೆ ಮುಸ್ಲಿಂ ಸಮುದಾಯದ ಅನೇಕ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಆರ್​ಎಸ್​ಎಸ್ ನಡೆಸುವ ಶಾಲೆಯಲ್ಲಿ ಮುಸ್ಲಿಂ ಮಕ್ಕಳೂ ಕಲಿಯುತ್ತಿದ್ದಾರೆ ಎಂಬುದನ್ನೂ ಹೊಸಬಾಳೆಯವರು ಸ್ಮರಿಸಿಕೊಂಡರು. (ಏಜೆನ್ಸೀಸ್)
ಎಚ್ಚರಿಕೆಯಿಂದ ಇರಿ – ಮೊಟ್ಟೆಗಳನ್ನು ನೋಡಿ ಬೆಚ್ಚಿ ಬಿದ್ದ ಜುವೆಲ್ಲರಿ ಶಾಪ್ ಮಾಲೀಕ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − ten =
Remember me
