ಇಂಧೋರ್​: ಇಲ್ಲೋರ್ವ ಮುಸ್ಲಿಂ ವ್ಯಕ್ತಿ 12 ವರ್ಷಗಳ ಹಿಂದೆ ಶ್ರೀಕೃಷ್ಣಜನ್ಮಾಷ್ಟಮಿಯಂದು ಮಾಡಿದ ಒಂದು ಕೆಲಸ ಇದೀಗ ಸುದ್ದಿಯಾಗಿದೆ. ಇದೊಂದು ಕೋಮು ಸೌಹಾರ್ದಯುತವಾದ ಕಾರ್ಯವಾಗಿದ್ದು, ಹೃದಯಸ್ಪರ್ಶಿಯೂ ಹೌದು…ಮಾದರಿಯೂ ಹೌದು.ಮಧ್ಯಪ್ರದೇಶದ ಅಝೀಜ್​ ಖಾನ್​ ಅವರಿಗೆ 12 ವರ್ಷದ ಮಗರ್ನೋ ಇದ್ದಾನೆ. ಅವರ ಹೆಸರು ಕೃಷ್ಣಾ ಎಂದು. ಈ ಬಗ್ಗೆ ಅಝೀಜ್ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
2008ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯಂದೇ ನನಗೆ ಮಗ ಹುಟ್ಟಿದ. ಹಾಗಾಗಿ ಅವನಿಗೆ ಕೃಷ್ಣ ಎಂದು ಹೆಸರಿಟ್ಟೆ. ಇದಕ್ಕೆ ಮೊದಮೊದಲು ನನ್ನ ಕುಟುಂಬದವರು ತೀವ್ರವಾಗಿ ವಿರೋಧಿಸಿದರು. ಆದರೆ ಬರಬರುತ್ತ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಅಝೀಜ್ ಖಾನ್​ ತಿಳಿಸಿದ್ದಾರೆ.ಇದನ್ನೂ ಓದಿ:ಈ ವೈದ್ಯೆ ಪಿಪಿಇ ಕಿಟ್​​ ತೆಗೆಯುತ್ತಿದ್ದಂತೆ ಹೊರಚೆಲ್ಲಿತು ಬಕೆಟ್​​​ನಷ್ಟು ನೀರು…! ಆದ್ರೆ ಇದು ‘ನೀರಲ್ಲ’
ಅಂದು ಆಗಸ್ಟ್​ 23. ನನಗೆ ಮಗ ಹುಟ್ಟಿದ. ಅವತ್ತು ಹಿಂದುಗಳು ಜನ್ಮಾಷ್ಟಮಿ ಸಂಭ್ರಮದಲ್ಲಿದ್ದರು. ನನಗೆ ಮಗು ಹುಟ್ಟಿದ ತಕ್ಷಣವೇ ನಾನು ಕೃಷ್ಣ ಎಂದು ಹೆಸರಿಟ್ಟುಬಿಟ್ಟೆ. ನನ್ನ ಅಮ್ಮ ಆ ಹೆಸರು ಬೇಡ, ಕಾಫಿರ್​ ಎಂದು ನಾಮಕರಣ ಮಾಡೋಣ ಎಂದರು. ಆದರೆ ತಂದೆಯಾಗಿ ನನಗೆ ಮಗನಿಗೆ ಯಾವುದೇ ಹೆಸರನ್ನಾದರೂ ಇಡುವ ಸಂಪೂರ್ಣ ಹಕ್ಕು ಇದೆ. ನಾನು ಕೃಷ್ಣ ಎಂಬ ಹೆಸರನ್ನು ಇವತ್ತಿನವರೆಗೆ ಬದಲಿಸಲಿಲ್ಲ ಎಂದು ಅಝೀಜ್​ ತಿಳಿಸಿದ್ದಾರೆ. (ಏಜೆನ್ಸೀಸ್​)
ರಷ್ಯಾ ಕರೊನಾ ಲಸಿಕೆ ಪಡೆದ ಪುಟಿನ್​ ಮಗಳು; ಆಕೆಯ ಆರೋಗ್ಯದಲ್ಲಾದ ಬದಲಾವಣೆ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 7 =
Remember me
