ಬೊಕಾರೊ (ಜಾರ್ಖಂಡ್​), ಬಹರೈಚ್ (ಉತ್ತರ ಪ್ರದೇಶ) :ಲಾಕ್​ಡೌನ್​ ಹಿನ್ನೆಲೆಯಲ್ಲಿ, ಎಲ್ಲಾ ದೇವಾಲಯಗಳು, ಧಾರ್ಮಿಕ ಕ್ಷೇತ್ರಗಳನ್ನು ಮುಚ್ಚಲಾಗಿದೆ. ಇವುಗಳನ್ನು ತೆರೆದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟ, ಇದರಿಂದ ಕರೊನಾ ವೈರಸ್​ ಶೀಘ್ರದಲ್ಲಿ ಹರಡುತ್ತದೆ ಎನ್ನುವ ಕಾರಣಕ್ಕೆ, ಸರ್ಕಾರಗಳು ಈ ಕ್ರಮವನ್ನು ತೆಗೆದುಕೊಂಡಿದೆ.
ಆದರೆ ಸರ್ಕಾರಗಳು, ಪೊಲೀಸರು ಎಷ್ಟೇ ಸಾರಿ ಸಾರಿ ಹೇಳಿದರೂ, ಕೆಲವರು ಇದನ್ನು ಕಿವಿಯ ಮೆಲೆ ಹಾಕಿಕೊಳ್ಳುತ್ತಲೇ ಇಲ್ಲ. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಆದರೆ ಜಾರ್ಖಂಡ್​ನ ಬೊಕಾರೊ ಹಾಗೂ ಉತ್ತರ ಪ್ರದೇಶದ ಬಹರೈಚ್​ನಲ್ಲಿ ಜನರಿಗೆ ತಿಳಿ ಹೇಳಲು ಹೋದ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆದಿದೆ, ಇದರಲ್ಲಿ ಪೊಲೀಸರಿಗೆ ಗಂಭೀರ ಗಾಯಗಳಾಗಿವೆ.
ಇದನ್ನೂ ಓದಿ:ಮದುಮಗಳಂತೆ ಸಿಂಗರಿಸಿಕೊಂಡು 80 ಕಿ.ಮೀ ನಡೆದು ಬಂದ ಯುವತಿಯ ಕಂಡ ಗ್ರಾಮಸ್ಥರು ಶಾಕ್​!
ಬೊಕಾರೊದ ಮಸೀದಿಯೊಂದರಲ್ಲಿ ಸಾಮೂಹಿಕವಾಗಿ ನಮಾಜ್​ ಮಾಡುತ್ತಿದ್ದವರಿಗೆ ಬುದ್ಧಿ ಹೇಳಲು ಹೋದ ಪೊಲೀಸರ ಮೇಲೆ ಕಲ್ಲನ್ನು ಎಸೆಯಲಾಗಿದೆ ಎಂದು ವರದಿಯಾಗಿದೆ. ಯಾವುದೇ ರೀತಿಯ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಸಾಮೂಹಿಕ ನಮಾಜ್​ನಲ್ಲಿ ಇವರು ತೊಡಗಲಾಗಿತ್ತು. ಪೊಲೀಸರು ಹೀಗೆ ಮಾಡದಂತೆ ಹೇಳಲು ಹೋದಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜಾರ್ಖಂಡ್‌ನ ಬೊಕಾರೊ ಜಿಲ್ಲೆಯ ಪಿಂಡ್ರಾಜೋರಾ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪುರದಲ್ಲಿ 200 ಕ್ಕೂ ಹೆಚ್ಚು ಜನರು ಮಸೀದಿಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಕೆಲವು ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿವೆ. ಮಾಡಿದ್ದೂ ಅಲ್ಲದೆ, ಉದ್ರಿಕ್ತರ ಗುಂಪು ಪೊಲೀಸ್​ ವ್ಯಾನ್​ನ ಗಾಜು ಪುಡಿಪುಡಿ ಮಾಡಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳ ವಿರುದ್ಧ ಕೇಸು ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಫೇಸ್​ಬುಕ್​ನ ವಿಭಿನ್ನ ಪ್ರೇಮ್​ ಕಹಾನಿ! 62ರ ಅಜ್ಜಿಗೆ ಮಿಸ್​ ಆಗಿ ಸಿಕ್ಕ 26ರ ಯುವಕ, ಮುಂದೆ?
ಇನ್ನೊಂದು ಪ್ರಕರಣದಲ್ಲಿ ಉತ್ತರ ಪ್ರದೇಶದ ಬಹರೈಚ್​ನಲ್ಲಿ ನಮಾಜ್​ ಮಾಡಬೇಡಿ ಎಂದ ಪೊಲೀಸರ ಮೇಲೆ ಉದ್ರಿಕ್ತ ಗುಂಪು ಹಲ್ಲೆ ಮಾಡಿರುವ ವರದಿಯಾಗಿದೆ. ಇಲ್ಲಿಯೂ ಕಲ್ಲು ತೂರಾಟ ನಡೆದಿದ್ದು, ಇಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ರಾಮ್​ ಪ್ರವೇಶ್​ ಮತ್ತು ವಿನಯ್​ ಕುಮಾರ್​ ಎಂಬ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಹೋದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಅದೇ ರೀತಿ ಸಮಾಜವಾದಿ ಪಕ್ಷದ ಶಾಸಕ ಹಾಜಿ ಇಕ್ರಮ್​ ಖುರೇಷಿ ಲಾಕ್​ಡೌನ್​ ನಿಯಮ ಉಲ್ಲಂಘಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮೊರಾದಾಬಾದ್​ನಲ್ಲಿ ಆಹಾರ ವಿತರಣೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. “ಈ ಸಂದರ್ಭದಲ್ಲಿ ನಾವು ಪ್ರತಿವರ್ಷವೂ ಆಹಾರ ವಿತರಣೆ ಮಾಡುತ್ತೇವೆ. ಜನ ಸೇರಿದರೆ ನಾವೇನು ಮಾಡಲು ಆಗುತ್ತದೆ’ ಎಂಬ ಬೇಜವಾಬ್ದಾರಿಯ ಉತ್ತರವನ್ನು ನೀಡಿದ್ದಾರೆ. ಈ ಕುರಿತು ಎಎನ್​ಐ ಸುದ್ದಿ ಸಂಸ್ಥೆ ಟ್ವಟರ್​ನಲ್ಲಿ ತಿಳಿಸಿದೆ.(ಏಜೆನ್ಸೀಸ್​)
Moradabad:Social distancing norms flouted during food distribution organized by SP MLA Haji Ikram Qureshi on last Friday of Ramzan.He said,"We've been doing this for yrs.What can I do if crowd gathered?Why don't you ensure social distancing?I'm trying to control situation"(22.05)pic.twitter.com/UhDgskYtVV
— ANI UP/Uttarakhand (@ANINewsUP)May 22, 2020

ಹೀಗೂ ಆಗುವುದುಂಟು: ವಾಯುವಿಹಾರಕ್ಕೆ ಹೋದಾಗ ಲಕ್ಷಾಧಿಪತಿ, ಕಸದೊಂದಿಗೆ ಬಂದಾಗ ಕೋಟ್ಯಧಿಪತಿ..!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:9 + two =
Remember me
