ದಿಸ್ಪುರ್​:ರಾಜ್ಯದ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸುವುದು ನನಗೆ ದೊಡ್ಡ ಸಮಸ್ಯೆಯಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ಬುಧವಾರ (ಜುಲೈ 17) ಹೇಳಿದ್ದಾರೆ.
ಇದನ್ನು ಓದಿ:ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಪೋಸ್ಟ್ ಡಿಲೀಟ್​ ಮಾಡಿದ ಸಿಎಂ; ಸಚಿವರು ಕೊಟ್ಟ ಸ್ಪಷ್ಟನೆ ಏನು ಗೊತ್ತಾ?
ಈಶಾನ್ಯ ರಾಜ್ಯದ ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆಯ ಕುರಿತು ಮಾತನಾಡಿದ ಅವರು, ಅಸ್ಸಾಂನಲ್ಲಿ 1951ರಲ್ಲಿ ಶೇ.12ರಷ್ಟಿದೆ ಮುಸ್ಲಿಂ ಜನಸಂಖ್ಯೆಯು ಇಂದು ಶೇ.40 ರಷ್ಟು ತಲುಪಿದೆ. ಇದರಿಂದ ಅನೇಕ ಜಿಲ್ಲೆಗಳನ್ನು ಕಳೆದುಕೊಂಡಿದ್ದೇವೆ. ಇದು ನನಗೆ ರಾಜಕೀಯ ವಿಷಯವಲ್ಲ. ಇದು ನನಗೆ ಜೀವನ ಮತ್ತು ಸಾವಿನ ವಿಷಯವಾಗಿದೆ ಎಂದಿದ್ದಾರೆ.
#WATCH| Ranchi | Assam CM & BJP leader Himanta Biswa Sarma says, "…Changing demography is a big issue for me. In Assam, Muslim population has reached 40% today. In 1951, it was 12%. We have lost many districts. This is not a political issue for me. It is a matter of life and…pic.twitter.com/N11lpEGUfg
ಅಲ್ಲದೆ ಅಸ್ಸಾಂ, ತ್ರಿಪುರಾ ಮತ್ತು ಬಂಗಾಳದಲ್ಲಿ ಜನಸಂಖ್ಯಾ ಬದಲಾವಣೆಗಳು ವೇಗವಾಗಿ ಸಂಭವಿಸುತ್ತಿವೆ. ಅಸ್ಸಾಂನ 12 ರಿಂದ 14 ಜಿಲ್ಲೆಗಳಲ್ಲಿ ಹಿಂದೂ ಸಮುದಾಯವು ಅಲ್ಪಸಂಖ್ಯಾತರಾಗಿದ್ದಾರೆ ಎಂದಿದ್ದಾರೆ. ಈ ಹಿಂದೆಯೂ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಅಸ್ಸಾಂನ ಧುಬ್ರಿಯಲ್ಲಿ ಗೆಲ್ಲಲು ಕೇಸರಿ ಪಕ್ಷಕ್ಕೆ ಇಷ್ಟವಿಲ್ಲ ಎಂದು ಚುನಾವಣಾ ಪ್ರಚಾರದ ವೇಳೆ ಹೇಳಿದ್ದರು.
ಶರ್ಮಾ ಅವರು ಜುಲೈ 1ರಂದು ಯಾವುದೇ ಸಮುದಾಯವನ್ನು ಉಲ್ಲೇಖಿಸದೆ ನಿರ್ದಿಷ್ಟ ಧರ್ಮದ ಜನರ ಒಂದು ವರ್ಗದ ಅಪರಾಧ ಚಟುವಟಿಕೆಗಳು ಕಳವಳಕಾರಿ ವಿಷಯ ಎಂದು ಹೇಳಿದ್ದರು. ಬಳಿಕ ತಮ್ಮ ಹೇಳಿಕೆಗಳು ಯಾವುದೇ ಒಂದು ಧರ್ಮಕ್ಕೆ ಮಾತ್ರ ಅಪರಾಧ ಎಂದು ಸೂಚಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜೂನ್ 23ರಂದು, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸದೆ ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಹೇಳಿದ್ದರು. ಅಲ್ಲದೆ ಬಾಂಗ್ಲಾದೇಶ ಮೂಲದ ಅಲ್ಪಸಂಖ್ಯಾತ ಸಮುದಾಯ ಮಾತ್ರ ಅಸ್ಸಾಂನಲ್ಲಿ ಕೋಮುವಾದದಲ್ಲಿ ತೊಡಗಿದೆ ಎಂದು ಆರೋಪಿಸಿದ್ದರು.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − one =
Remember me
