ಅಹಮದಾಬಾದ್​​:ಧರ್ಮದ ಆಧಾರದ ಮೇಲೆ ತಾರತಮ್ಯದ ಗಂಭೀರ ಪ್ರಕರಣವೊಂದು ಗುಜರಾತ್​​​ನ ವಡೋದರಾದಲ್ಲಿ ಬೆಳಕಿಗೆ ಬಂದಿದೆ. ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ (ವಿಎಂಸಿ) ನಿರ್ಧಾರವನ್ನು ಸ್ಥಳೀಯ ನಾಗರಿಕರು ಟೀಕಿಸಿದ್ದು, ಹಿಂದೂಗಳ ಜಾಗದಲ್ಲಿ ಮುಸ್ಲಿಮರಿಗೆ ಮನೆ ಮಂಜೂರು ಮಾಡುವ ಮೂಲಕ ಇಲ್ಲಿನ ವಾತಾವರಣವನ್ನು ಹಾಳು ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೂ ಜೈ ಶ್ರೀರಾಮ್​ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.
ಇದನ್ನು ಓದಿ:ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್​ ಮುಂದುವರಿಕೆ ಸಾಧ್ಯವಿಲ್ಲ; ಎಂ.ಬಿ.ಪಾಟೀಲ್​​​
ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಶಾಖೆಯಲ್ಲಿ ಕೆಲಸ ಮಾಡುತ್ತಿರುವ 44 ವರ್ಷದ ಮುಸ್ಲಿಂ ಮಹಿಳೆಗೆ ಮುಖ್ಯಮಂತ್ರಿ ವಸತಿ ಯೋಜನೆಯಡಿ ಈ ಫ್ಲ್ಯಾಟ್ ಸಿಕ್ಕಿದೆ. ಅಂದಿನಿಂದ ಈ ವಿವಾದ ಲಿಖಿತ ರೂಪದಲ್ಲಿ ನಡೆಯುತ್ತಿತ್ತು. ಇದೀಗ ಸ್ಥಳೀಯ ನಾಗರಿಕರು ಇದರ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ.
ವಡೋದರದ ಹರ್ನಿ ಪ್ರದೇಶದಲ್ಲಿ ಮುಖ್ಯಮಂತ್ರಿ ಆವಾಸ್ ಯೋಜನೆ 2017ರ ಅಡಿಯಲ್ಲಿ ಕೆಲವು ಫ್ಲ್ಯಾಟ್​​​ಗಳನ್ನು ನಿರ್ಮಿಸಲಾಗಿದೆ. ಈ ಯೋಜನೆಯಲ್ಲಿ ಕಡಿಮೆ ಆದಾಯ ವರ್ಗದ ಜನರಿಗಾಗಿ 462 ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದೆ. ಮುಸ್ಲಿಂ ಮಹಿಳೆಗೆ ಫ್ಲ್ಯಾಟ್ ಮಂಜೂರು ಮಾಡಿದ ಸಂದರ್ಭದಲ್ಲಿ ಇತರೆ 33 ಮಂದಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ, ಇದರಲ್ಲಿ ಮುಸ್ಲಿಂ ಮಹಿಳೆ ಇದ್ದಲ್ಲಿ ತೊಂದರೆಯಾಗುತ್ತದೆ. ಇದರಿಂದ ಅನಗತ್ಯ ಗೊಂದಲ ಉಂಟಾಗಬಹುದು ಎಂದು ಹೇಳಿದ್ದರು. ಇದಾದ ಬಳಿಕ ಅಲ್ಲಿನ ನಿವಾಸಿಗಳು ಮುಖ್ಯಮಂತ್ರಿಗೆ ಪತ್ರ ಬರೆದು ಮುಸ್ಲಿಂ ಮಹಿಳೆಗೆ ನೀಡಿರುವ ಫ್ಲ್ಯಾಟ್ ಹಂಚಿಕೆ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ನಾಲ್ಕು ವರ್ಷಗಳ ಬಳಿಕ ಇಲ್ಲಿನ ನಿವಾಸಿಗಳು ಮತ್ತೊಮ್ಮೆ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಇದಾದ ಬಳಿಕ ಈ ವಿಷಯ ಮತ್ತೆ ಕಾವು ಪಡೆಯುತ್ತಿದೆ. ವಿಎಂಸಿ ಆಯುಕ್ತ ದಿಲೀಪ್ ರಾಣಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮತ್ತೊಂದೆಡೆ ಫ್ಲ್ಯಾಟ್ ಪಡೆದ ಮುಸ್ಲಿಂ ಮಹಿಳೆ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡುವಾಗ, ನಾನು ವಡೋದರಾದಲ್ಲಿ ಎಲ್ಲಾ ಧರ್ಮದ ಜನರು ವಾಸಿಸುವ ಪ್ರದೇಶದಲ್ಲಿ ವಾಸಿಸುತ್ತಿದ್ದೇನೆ. ನನ್ನ ಮಗ ಇಂಥಾ ವಾತಾವರಣದಲ್ಲಿ ಬೆಳೆಯಬೇಕೆಂದು ಯಾವಾಗಲೂ ಬಯಸುತ್ತೇನೆ. ಆದರೆ ಸುಮಾರು ಆರು ವರ್ಷಗಳಿಂದ ನನ್ನ ಕನಸುಗಳು ಭಗ್ನಗೊಂಡಿವೆ. ನನ್ನ ಮುಂದೆ ಸಂಘರ್ಷಕ್ಕೆ ಯಾವುದೇ ಪರಿಹಾರವಿಲ್ಲ. ನನ್ನ ಮಗ ಈಗ 12 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇವರು ಹೇಗೆ ತಾರತಮ್ಯ ಮಾಡುತ್ತಿದ್ದಾರೆಂಬ ವಿಷಯಗಳನ್ನು ಅರ್ಥಮಾಡಿಕೊಳ್ಳಬಲ್ಲನು. ಇದರಿಂದ ಮಗನಿಗೆ ಮಾನಸಿಕವಾಗಿ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​​)
ಅಧಿಕಾರ ವಹಿಸಿಕೊಳ್ಳುವ ಮುನ್ನ ಶ್ರೀರಾಮನನ್ನು ಸ್ಮರಿಸಿದ ಕೇಂದ್ರ ಸಚಿವ; ವೀಡಿಯೊ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
