ನವದೆಹಲಿ:ಜಮ್ಮುಕಾಶ್ಮೀರದ 87 ವರ್ಷದ ಮುಸ್ಲಿಂ ಮಹಿಳೆಯೋರ್ವರು ಹಜ್​ ಯಾತ್ರೆಗಾಗಿ ಕೂಡಿಟ್ಟುಕೊಂಡಿದ್ದ 5 ಲಕ್ಷ ರೂಪಾಯಿಯನ್ನು ಕರೊನಾ ವೈರಸ್​ ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾಗಿರುವ ಬಡವರು, ನಿರ್ಗತಿಕರ ಸಹಾಯಾರ್ಥ ನೀಡಿದ್ದಾರೆ.
ಕರೊನಾ ವೈರಸ್ ನಿಯಂತ್ರಣಕ್ಕಾಗಿ ಭಾರತವನ್ನು ಲಾಕ್​ ಡೌನ್​ ಮಾಡಿದ್ದರಿಂದ ಅದೆಷ್ಟೋ ಜನ ಬಡವರು, ಕೂಲಿ ಕಾರ್ಮಿಕರು, ದಿನಗೂಲಿ ಕೆಲಸಗಾರರು ಹೊಟ್ಟೆಗಿಲ್ಲದೆ ಸಂಕಷ್ಟಪಡುತ್ತಿದ್ದಾರೆ. ಜಮ್ಮುಕಾಶ್ಮೀರದಲ್ಲಿ ಇಂತಹ ಜನರ ಸಹಾಯಕ್ಕೆ ಆರ್​ಎಸ್​​ಎಸ್​ ಅಂಗಸಂಸ್ಥೆಯಾದ ಸೇವಾ ಭಾರತಿ ನಿಂತಿದೆ. ನಿರ್ಗತಿಕರಾದವರ ಹೊಟ್ಟೆ, ಬಟ್ಟೆ, ಆಶ್ರಯಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದೆ.
ಸೇವಾ ಭಾರತಿ ಸ್ವಯಂ ಸೇವಾ ಸಂಸ್ಥೆ ಬಡಜನರಿಗಾಗಿ ಸೇವೆ ಸಲ್ಲಿಸುತ್ತಿರುವುದನ್ನು ನೋಡಿ ಪ್ರಭಾವಿತರಾದ ಖಲೀದಾ ಬೇಗಂ ಎಂಬ ವೃದ್ಧ ಮಹಿಳೆ ತಾವು ಹಜ್​ ಯಾತ್ರೆಗಾಗಿ ಕೂಡಿಟ್ಟಿದ್ದ 5 ಲಕ್ಷ ರೂಪಾಯಿಯನ್ನು ಸಂಸ್ಥೆಗೆ ದೇಣಿಗೆಯಾಗಿ ನೀಡಿದ್ದಾರೆ. ಕಷ್ಟದಲ್ಲಿರುವವರ ಅಗತ್ಯ ಪೂರೈಕೆಗಾಗಿ ಬಳಸಿಕೊಳ್ಳಿ ಎಂದು ಹೇಳಿದ್ದಾರೆ.
ಖಲೀದಾ ಬೇಗಂ ಪ್ರತಿವರ್ಷವೂ ಹಜ್​ ಯಾತ್ರೆಗೆ ಹೋಗುತ್ತಿದ್ದರು. ಆದರೆ ಲಾಕ್​ಡೌನ್​ ಇರುವ ಕಾರಣ ಯಾತ್ರೆಯನ್ನು ಮುಂದೂಡಿದ್ದಾರೆ. ಅವರು ಮನಸು ಮಾಡಿದ್ದರೆ ಹಣವನ್ನು ಹಾಗೇ ಇಟ್ಟುಕೊಳ್ಳಬಹುದಿತ್ತು. ಆದರೆ ಹಾಗೆ ಮಾಡದೆ ಕರೊನಾ ಲಾಕ್​ಡೌನ್​ ಸಂತ್ರಸ್ತರ ಸೇವೆಗಾಗಿ ಸೇವಾಭಾರತಿಗೆ ನೀಡಿದ್ದಾರೆ.
ಖಲೀದಾ ಬೇಗಂ ಸೇವಾ ಭಾರತಿಗೆ ಹಣ ನೀಡಿದ ಬಗ್ಗೆ ಆರ್​ಎಸ್​ಎಸ್​ನ ಮಾಧ್ಯಮ ವಿಭಾಗ ಇಂದ್ರಪ್ರಸ್ಥ ವಿಶ್ವ ಸಂವಾದ ಕೇಂದ್ರದ ಮುಖ್ಯಸ್ಥ ಅರುಣ್​ ಆನಂದ್​ ತಿಳಿಸಿದ್ದಾರೆ.
ಖಲೀದಾ ಬೇಗಂ ಜೀ ಅವರು ಜಮ್ಮುಕಾಶ್ಮೀರದಲ್ಲಿ ಕಾನ್ವೆಂಟ್​ನಲ್ಲಿ ಶಿಕ್ಷಣ ಪಡೆದ ಕೆಲವೇ ಮಹಿಳೆಯರಲ್ಲಿ ಒಬ್ಬರು.1951ರಲ್ಲಿ ಆರ್​ಎಸ್​ಎಸ್​ನ ರಾಜಕೀಯ ಅಂಗವಾಗಿ ಸ್ಥಾಪನೆಗೊಂಡ ಭಾರತೀಯ ಜನಸಂಘದ ಜಮ್ಮು-ಕಾಶ್ಮೀರದ ಮೊದಲ ಅಧ್ಯಕ್ಷರಾಗಿದ್ದ ಕರ್ನಲ್​ ಪೀರ್​ ಮೊಹಮ್ಮದ್​ ಖಾನ್​ ಅವರ ಸೊಸೆ. ಖಲೀದಾ ಬೇಗಂ ಅವರ ಪುತ್ರ, ನಿವೃತ್ತ ಐಎಎಸ್​ ಅಧಿಕಾರಿ ಫಾರೂಖ್​ ಖಾನ್​ ಅವರು ಸದ್ಯ ಜಮ್ಮು ಕಾಶ್ಮೀರದ ಲೆಫ್ಟಿನಂಟ್ ಗವರ್ನರ್​ರ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅರುಣ್​ ಮಾಹಿತಿ ನೀಡಿದ್ದಾರೆ.
87 ವರ್ಷವಾದರೂ ಖಲೀದಾ ಬೇಗಂ ಜಮ್ಮುಕಾಶ್ಮೀರದಲ್ಲಿ ಮಹಿಳೆಯರ ರಕ್ಷಣೆ, ಸುಧಾರಣೆ, ದೀನದಲಿತರ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಲಾಕ್​ಡೌನ್​ ಘೋಷಣೆಯಾದಾಗಿನಿಂದಲೂ ಆರ್​ಎಸ್​ಎಸ್​, ಸೇವಾ ಭಾರತಿಯ ಸ್ವಯಂ ಸೇವಕರು ದೇಶಾದ್ಯಂತ ಬಡಜನರಿಗೆ ಆಹಾರ ಮತ್ತಿತರ ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ. ದೆಹಲಿಯ ಆನಂದ್​ ವಿಹಾರ್​ ಬಸ್​ಸ್ಟ್ಯಾಂಡ್​ನಲ್ಲಿ ಅಪಾರವಾಗಿ ಗುಂಪುಗೂಡಿದ್ದ ವಲಸೆ ಕಾರ್ಮಿಕರಿಗೆ ಊಟ ನೀಡಿದ್ದಾರೆ. ಅಲ್ಲದೆ, ಅವರಿಗೆ ಧೈರ್ಯವನ್ನೂ ತುಂಬಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
