ರಿಯಾದ್:ಮಣ್ಣು ರಕ್ಷಣೆ ಸಲುವಾಗಿ ಈಶ ಫೌಂಡೇಷನ್​ನ ಸದ್ಗುರು ಹಮ್ಮಿಕೊಂಡಿರುವ ಅಭಿಯಾನಕ್ಕೆ ದಿ ಮುಸ್ಲಿಂ ವರ್ಲ್ಡ್ ಲೀಗ್​ ಬೆಂಬಲ ವ್ಯಕ್ತಪಡಿಸಿದೆ. ಮಣ್ಣು ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 100 ದಿನಗಳ ಒಳಗೆ 27 ರಾಷ್ಟ್ರಗಳಲ್ಲಿ ಏಕಾಂಗಿಯಾಗಿ ಬೈಕ್​ನಲ್ಲಿ 30 ಸಾವಿರ ಕಿಲೋಮೀಟರ್ ಸಂಚರಿಸುವ ಗುರಿ ಇರಿಸಿಕೊಂಡಿರುವ ಸದ್ಗುರು, ಸದ್ಯ ರಿಯಾದ್​ಗೆ ತಲುಪಿದ್ದಾರೆ.
ಅಲ್ಲಿ ಅವರನ್ನು ದಿ ಮುಸ್ಲಿಂ ವರ್ಲ್ಡ್​ ಲೀಗ್​ ಸೆಕ್ರೆಟರಿ ಜನರಲ್ ಡಾ. ಅಲ್​ ಇಸ್ಸಾ ಬರಮಾಡಿಕೊಂಡಿದ್ದಾರೆ. ನಿಮ್ಮನ್ನು ನಾವು ಈಗಾಗಲೇ ಬಹಳ ಪ್ರೀತಿಸಿದ್ದೇವೆ. ನಿಮ್ಮನ್ನು ಕಾಣುವ ಮೊದಲೇ ಹೆಚ್ಚು ಪ್ರೀತಿಸಿದೆವು. ನಿಮ್ಮನ್ನು ನೋಡಿದ ನಂತರವಂತೂ ಇನ್ನಷ್ಟು ಪ್ರೀತಿಸಿದ್ದೇವೆ ಎಂದು ತಿಳಿಸಿರುವ ಅವರು, ಮಣ್ಣು ರಕ್ಷಣೆ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ಜಗತ್ತನ್ನು ಮಣ್ಣಿನ ಬೆಂಬಲಕ್ಕಾಗಿ ಪ್ರೇರೇಪಿಸಲು ನಾವು ನಿಮ್ಮನ್ನು ಕೋರುತ್ತೇವೆ, ನನ್ನನ್ನು ಬೆಂಬಲಿಸಬೇಡಿ, ಮಣ್ಣಿನ ಬಗ್ಗೆ ಮಾತನಾಡಿ, ಮಣ್ಣನ್ನು ಬೆಂಬಲಿಸಿ ಎಂದು ಸೆಕ್ರೆಟರಿ ಜನರಲ್ ಅವರಲ್ಲಿ ಸದ್ಗುರು ಮನವಿ ಮಾಡಿದರು. ಎಷ್ಟೋ ರೀತಿಗಳಲ್ಲಿ ನಾವು ಸಂತತಿ, ರಾಷ್ಟ್ರೀಯತೆ, ಧರ್ಮ, ಜಾತಿ ಮತ್ತು ಪಂಥಗಳಲ್ಲಿ ವ್ಯತ್ಯಾಸ ಕಂಡುಕೊಂಡಿದ್ದೇವೆ. ನಮ್ಮೆಲ್ಲರಿಗೂ ಸಮನಾಗಿರುವ ಅಂಶಗಳನ್ನು ಕಂಡುಕೊಳ್ಳುವುದು ಈಗ ಬಹಳ ಮುಖ್ಯವಾಗಿದೆ ಎಂದು ಸದ್ಗುರು ಹೇಳಿದರು. ಮುಸ್ಲಿಂ ವರ್ಲ್ಡ್ ಲೀಗ್ ಕಡೆಯಿಂದ ನಿಮ್ಮ ಧ್ಯೇಯಕ್ಕಾಗಿ ಸಾಧ್ಯವಿರುವ ಎಲ್ಲ ರೀತಿಯಿಂದಲೂ ಸಂಪೂರ್ಣ ಸಹಾಯ ಮಾಡುತ್ತೇವೆ ಎಂದು ಡಾ.ಅಲ್ ಇಸ್ಸಾ ಭರವಸೆ ನೀಡಿದರು.
ತಮ್ಮ ಪ್ರವಾಸದ 53ನೆಯ ದಿನದಂದು ಸೌದಿ ಅರೇಬಿಯಾದಲ್ಲಿ ಭಾರತೀಯ ದೂತಾವಾಸದವರು ಮಣ್ಣು ಉಳಿಸಿ ಸಮಾರಂಭವೊಂದನ್ನು ನಡೆಸಿಕೊಟ್ಟರು. ಅದರಲ್ಲಿ Charge d ‘Affaires ಎನ್.ರಾಮ್ ಪ್ರಸಾದ್ ಉಪಸ್ಥಿತರಿದ್ದರು. ಸೌದಿ ಅರೇಬಿಯಾದ ಪರಿಸರ ಮಂತ್ರಿ ಡಾ.ಮೊಹಮ್ಮದ್ ಬಿನ್ ಅಬ್ದುಲ್ ಕರೀಂ ಅಲ್-ಇಸ್ಸಾ ಅವರು ಮಣ್ಣು ಉಳಿಸಿ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಶೇ. 54ರಷ್ಟು ಆಹಾರವನ್ನು ತಾವೇ ಉತ್ಪಾದಿಸಿ ಮರುಭೂಮಿಯನ್ನು ಫಲವತ್ತಾಗಿಸಿದ ಸೌದಿ ಅರೇಬಿಯಾವನ್ನು ಸದ್ಗುರು ಪ್ರಶಂಸಿಸಿದರು. ಬೇರೆ ದೇಶಗಳು ಫಲವತ್ತಾದ ಭೂಮಿ ಹೊಂದಿದ್ದೂ ಅದನ್ನು ಸಕ್ರಿಯವಾಗಿ ಮರುಭೂಮಿ ಮಾಡುತ್ತಿರುವಾಗ, ಮರುಭೂಮಿ ಸಾಮ್ರಾಜ್ಯವು ಒಳ್ಳೆಯ ಮಾದರಿಯನ್ನು ಇಟ್ಟಿದೆ ಎಂದರು.

ಬೆಳಗಿನ ಜಾವದ ಆಜಾನ್‌ಗೆ ಲೌಡ್‌ಸ್ಪೀಕರ್ ಬಳಸದಿರಲು ಮುಸ್ಲಿಂ ಮುಖಂಡರ ನಿರ್ಧಾರ

‘ಸಿಎಂ ಆಗಿ ಆ ಕೆಲ್ಸ ಮಾಡೋಕಾಗಲ್ಲ, ಅದ್ಕೆ ಕಾರ್ಯಕರ್ತ ಆಗಿರ್ಬೇಕು..’ ಅಂತ ರಾಜೀನಾಮೆ ಕೊಟ್ಟ ಮುಖ್ಯಮಂತ್ರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
