ಶ್ರೀನಗರ:ದೇವಸ್ಥಾನಕ್ಕೆ ತಮ್ಮ ಜಮೀನನ್ನು ದಾನ ಮಾಡುವ ಮೂಲಕ ಇಬ್ಬರು ಮುಸ್ಲಿಂ ಸಹೋದರರು ಧಾರ್ಮಿಕ ಸಾಮರಸ್ಯದ ಸಂದೇಶವನ್ನು ಸಾರಿದ್ದಾರೆ. 500 ವರ್ಷ ಪುರಾತನ ದೇವಸ್ಥಾಕ್ಕೆ ರಸ್ತೆ ಮಾಡಲು ಈ ಇಬ್ಬರು ಮುಸ್ಲಿಮರು ತಮ್ಮ ಜಮೀನನ್ನು ದಾನ ಮಾಡಿದ್ದು, ದೇವಾಲಯದ ಬಗ್ಗೆ ತಮ್ಮಗಿರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯ ನಿವಾಸಿಗಳಾದ ಗುಲಾಂ ರಸೂಲ್ ಮತ್ತು ಗುಲಾಂ ಮೊಹಮ್ಮದ್ ತಮ್ಮ ನಾಲ್ಕು ಕಾನಲ್ ಜಮೀನನ್ನು ದಾನ ಮಾಡುವ ಮೂಲಕ ದೇವಾಲಯದ ಬಗ್ಗೆ ತಮ್ಮಗಿರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ರಿಯಾಸಿ ಜಿಲ್ಲೆಯ ಕಾನ್ಸಿ ಪಟ್ಟಾ ಗ್ರಾಮದ ಗುಪ್ತ ಕಾಶಿಯಲ್ಲಿರುವ ಗೌರಿ ಶಂಕರ ದೇವಸ್ಥಾನಕ್ಕೆ 1200 ಮೀಟರ್ ಹಾಗೂ 10 ಅಡಿ ಅಗಲದಲ್ಲಿ ರಸ್ತೆ ನಿರ್ಮಾಣವಾಗಲಿದೆ.
ಇದನ್ನೂ ಓದಿ:ಬಾಲಿವುಡ್​ನ ಸ್ಟಾರ್​ ನಟರ ಚಿತ್ರ ಹಣ ಗಳಿಸದಿರಲು ಕಾರಣವೇನು?; ಖ್ಯಾತ ನಟ ನೀಡಿದ ವಿವರಣೆ ಹೀಗಿದೆ
ಈ ಕುರಿತು ಮಾತನಾಡಿರುವ ಗುಲಾಂ ರಸೂಲ್, ರಸ್ತೆ ಸಮಸ್ಯೆಯನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಬಿರುಕು ಮೂಡಿಸಲು ಕೆಲವರು ಯತ್ನಿಸಿದ್ದಾರೆ. ದೇವಸ್ಥಾನಕ್ಕೆ ಸರಿಯಾದ ರಸ್ತೆ ಇಲ್ಲ, ಇದರ ಜತೆಗೆ ಈ ಬಗ್ಗೆ ಸಮಾಜದಲ್ಲಿ ದ್ವೇಷ ಹರಡುವ ಕೆಲಸವಾಗುತ್ತಿದೆ. ದೇವಾಲಯಕ್ಕೆ ನಮ್ಮ ಜಾಗದಿಂದಲ್ಲೇ ಸಾಗಬೇಕಿದೆ ಹೀಗಾಗಿ ರಸ್ತೆ ಮಾಡುವುದಕ್ಕೆ ಜಮೀನನ್ನು ದಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅಧಿಕಾರಿಯೊಬ್ಬರು, ಈಗಾಗಲೇ ದೇವಾಲಯದ ಜೀರ್ಣೋದ್ಧಾರದ ಸಿದ್ಧತೆಗಳು ನಡೆಯುತ್ತಿದೆ. ಹೀಗಾಗಿ ಈ ಸಮಯದಲ್ಲಿ ದೇವಾಲಯಕ್ಕೆ ರಸ್ತೆ ಇಲ್ಲವೆಂದು ಆಗಬಾರದು. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗೆ ಗುಲಾಂ ರಸೂಲ್ ಮತ್ತು ಗುಲಾಂ ಮೊಹಮ್ಮದ್ ಅವರು ತಮ್ಮ ಭೂಮಿಯನ್ನು ದಾನ ಮಾಡಿದ್ದಾರೆ. ಭೂಮಿಯ ಎಲ್ಲ ದಾಖಲೆಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 1 =
Remember me
