ರಾಮನಗರ (ಬಿಡದಿ):ಜಯಕರ್ನಾಟಕ ಸಂಘಟನೆ ಸಂಸ್ಥಾಪಕ, ಭೂಗತ ಲೋಕದ ಮಾಜಿ ಡಾನ್​ ಮುತ್ತಪ್ಪ ರೈ ಅವರ ಅಂತ್ಯಕ್ರಿಯೆ ಬಿಡದಿಯ ಸ್ವಗೃಹದಲ್ಲಿ ಹಿಂದು ಸಂಪ್ರದಾಯದಂತೆ ಇಂದು(ಶುಕ್ರವಾರ) ಸಂಜೆ 4.45ಕ್ಕೆ ನೆರವೇರಿತು.
ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಸುಕಿನ 2 ಗಂಟೆ ಸುಮಾರಿನಲ್ಲಿ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮಧ್ಯಾಹ್ನ 2.18ಕ್ಕೆ ಬಿಡದಿ ಸ್ವಗೃಹಕ್ಕೆ ಪಾರ್ಥಿವ ಶರೀರ ತರಲಾಗಿತ್ತು.
ಮುತ್ತಪ್ಪ ರೈರ ನೆಚ್ಚಿನ ಸ್ಥಳ ಬಿಡದಿ ಸ್ವಗೃಹದ ಆವರಣದಲ್ಲೇ ಅವರ ಕಿರಿಯ ಪುತ್ರ ಎಂ.ರಿಕ್ಕಿ ರೈ ತಂದೆ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಮುತ್ತಪ್ಪ ರೈ ಸಹೋದರರು, ಓರ್ವ ಸಹೋದರಿ ಸೇರಿ ಹತ್ತಾರು ಮಂದಿಯಷ್ಟೇ ಉಪಸ್ಥಿತರಿದ್ದರು. ಹಿರಿಯ ಪುತ್ರ ಕೆನಾಡದಲ್ಲಿ ಇರುವ ಕಾರಣ ತಂದೆಯ ಅಂತಿಮ ಕಾರ್ಯದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿರಿಬಿಡದಿ ತಲುಪಿದ ಮುತ್ತಪ್ಪ ರೈ ಪಾರ್ಥಿವ ಶರೀರ, ದಾರಿಯುದ್ದಕ್ಕೂ ಪುಷ್ಪನಮನ
ನೆಚ್ಚಿನ ಸ್ಥಳದಲ್ಲೇ ಲೀನವಾದರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಇಡೀ ಭೂಗತ ಜಗತ್ತಿನ ಡಾನ್ ಆಗಿ ಮೆರೆದಿದ್ದ ಮುತ್ತಪ್ಪ ರೈಗೆ ನಂತರದ ಬದುಕಿನ ಅಚ್ಚು ಮೆಚ್ಚಿನ ಸ್ಥಳ ಬಿಡದಿಯಾಗಿತ್ತು. ಲ್ಯಾಂಡ್ ಡೆವೆಲಪರ್ ಆಗಿ ಬಿಡದಿಗೆ ಎಂಟ್ರಿಯಾದ ಮುತ್ತಪ್ಪ ರೈ 2004ರಿಂದ ಸ್ವಂತ ಮನೆ ಮಾಡಿಕೊಂಡು, ಇಲ್ಲಿಂದಲೇ ತಮ್ಮ ವ್ಯವಹಾರ ಮುಂದುವರಿಸಿದ್ದರು.
ಜಯ ಕರ್ನಾಟಕ ಸಂಘಟನೆ ಹುಟ್ಟಿಗೆ ರೂಪುರೇಷೆ ಸಿದ್ಧವಾಗಿದ್ದು ಕೂಡ ಬಿಡದಿಯ ನಿವಾಸದಲ್ಲೇ. ಮುತ್ತಪ್ಪ ರೈ ಪತ್ನಿ ರೇಖಾ ಅವರ ಸಮಾಧಿ ಕೂಡ ಇಲ್ಲೇ ಇದೆ. ಅನಾರೋಗ್ಯದಿಂದ ರೇಖಾ 7 ವರ್ಷದ ಹಿಂದೆ ಮೃತಪಟ್ಟಿದ್ದರು.
ಇದನ್ನೂ ಓದಿರಿVIDEO| ಪತ್ನಿಯ ನೆನೆದು ಕಣ್ಣೀರಿಟ್ಟಿದ್ರು ಮುತ್ತಪ್ಪ ರೈ…!
ಮುತ್ತಪ್ಪ ರೈ ಅನಾರೋಗ್ಯದ ವಿಚಾರವಾಗಿ 2020ರ ಆರಂಭದಲ್ಲಿ ಹಲವು ಊಹಾಪೋಹ ಹಬ್ಬಿತ್ತು. ಈ ವೇಳೆ ಬಿಡದಿಯ ತಮ್ಮ ಮನೆಯಲ್ಲಿ ನಡೆಸಿದ ಸುದ್ದಿಗೋಷ್ಠಿ ಕೂಡ ಅವರ ಜೀವನದ ಕೊನೇ ಪ್ರೆಸ್​ಮೀಟ್​. ‘ಆರೋಗ್ಯ ಇದ್ದರಷ್ಟೇ ಬದುಕು, ಹಣ ಎಲ್ಲವನ್ನೂ ತಂದುಕೊಡುವುದಿಲ್ಲ. ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಇದೇ ವೇಳೆ ಭಾವಾನಾತ್ಮಕವಾಗಿ ಮಾತನಾಡಿದ್ದರು. ಈಗ ಅವರ ಅಂತಿಮ ಯಾತ್ರೆಯನ್ನೂ ಬಿಡದಿಯಲ್ಲೇ ಮುಗಿಸಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ.
ಕರೊನಾ ಲಾಕ್​ಡೌನ್ ಇರುವ ಕಾರಣ ಅಂತಿಮ ವಿಧಿವಿಧಾನ ಕಾರ್ಯದಲ್ಲಿ ಪಾಲ್ಗೊಳ್ಳಲು 25 ಜನರಿಗಷ್ಟೇ ಅವಕಾಶ ಮಾಡಿಕೊಟ್ಟಿದ್ದ ಪೊಲೀಸ್ ಇಲಾಖೆ, ಬಿಡದಿ ಬಳಿಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿತ್ತು. ಬೆಳಗ್ಗೆ 11.20ರಲ್ಲಿ ಮುತ್ತಪ್ಪ ರೈ ಪಾರ್ಥಿವ ಶರೀರ ಹೊತ್ತು ಹೊತ್ತು ಬೆಂಗಳೂರಿಂದ ಬಿಡದಿಗೆ ಹೊರಟ ವಾಹನಕ್ಕೆ ದಾರಿಯುದ್ದಕ್ಕೂ ಅಲ್ಲಲ್ಲಿ ನಿಂತಿದ್ದ ಅವರ ಅಭಿಮಾನಿಗಳು ಹೂ ಸುರಿದು ನಮಿಸುವ ಮೂಲಕ ಬೀಳ್ಕೊಟ್ಟಿದ್ದರು.
ಇದನ್ನೂ ನೋಡಿ
https://www.facebook.com/VVani4U/videos/3802413083165878/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − seven =
Remember me
