ಪುತ್ತೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಸುಕಿನಲ್ಲಿ ಕೊನೆಯುಸಿರೆಳೆದ ಮಾಜಿ ಭೂಗತ ದೊರೆ, ಉದ್ಯಮಿ, ಸಮಾಜ ಸೇವಕ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಎನ್.ಮುತ್ತಪ್ಪ ರೈ(68) ಪುತ್ತೂರಿನವರು. ಅವರು ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ನೆಟ್ಟಾಳ ನಾರಾಯಣ ರೈ- ದೇರ್ಲ ಸುಶೀಲಾ ರೈ ಪುತ್ರರಾಗಿ 1952ರಲ್ಲಿ ಜನಿಸಿದರು.
ಇದನ್ನೂ ಓದಿ:ನನಗೆ ಕ್ಯಾನ್ಸರ್ ಇದೆ.. ಸಾವಿನ ಹತ್ತಿರದಲ್ಲೇ ಇದ್ದೇನೆ…
ಹಲವು ವರ್ಷಗಳಿಂದ ಬೆಂಗಳೂರಿನ ಬಿಡದಿಯಲ್ಲಿ ನೆಲೆಸಿದ್ದರು. ಎರಡು ವರ್ಷಗಳ ಹಿಂದೆ ಲಿವರ್ ಕ್ಯಾನ್ಸರ್ ಇರುವುದು ದೃಢಪಟ್ಟ ಬಳಿಕ ದೆಹಲಿ, ಚೆನ್ನೈ, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಶೇ.90ರಷ್ಟು ಗುಣಮುಖರಾಗಿದ್ದು, ಬಳಿಕ ಮಿದುಳಿಗೂ ರೋಗ ಹರಡಿತ್ತು. ಇದನ್ನು ಜನವರಿಯಲ್ಲಿ ಸ್ವತಃ ಅವರೇ ಖಚಿತಪಡಿಸಿದ್ದರು. ಅವರ ಪತ್ನಿ ರೇಖಾ ರೈ 2013ರಲ್ಲಿ ಅನಾರೋಗ್ಯದಿಂದ ಸಿಂಗಾಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ರಾಕಿ ಮತ್ತು ರಿಕ್ಕಿ ಎಂಬ ಇಬ್ಬರು  ಮಕ್ಕಳನ್ನು ಅವರು ಅಗಲಿದ್ದಾರೆ. 2016ರಲ್ಲಿ ಸಕಲೇಶಪುರ ಮೂಲದ ಅನುರಾಧಾ ಅವರನ್ನು ಮುತ್ತಪ್ಪ ರೈ ವಿವಾಹವಾಗಿದ್ದರು.
ದೈವಭಕ್ತಿ, ಕಂಬಳ ಪ್ರೇಮಿ:ಊರಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ರೈ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಭಕ್ತರಾಗಿದ್ದು, 2010ರಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮರಥ ಸಮರ್ಪಿಸಿದ್ದರು. ಕಳೆದ ವರ್ಷ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇನ್ನೋರ್ವ ಉದ್ಯಮಿ ಅಜಿತ್ ರೈ ಜತೆ ಸೇರಿ 2.5 ಕೋಟಿ ರೂ. ವೆಚ್ಚದ ಬ್ರಹ್ಮರಥ ನೀಡಿದ್ದರು. ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಅವರ ಸಾರಥ್ಯದಲ್ಲೇ ನಡೆಯುತ್ತಿತ್ತು.
ಇದನ್ನೂ ಓದಿ:ಉದ್ಯಮಿಯ ಹತ್ಯೆಗೆ ಸ್ಕೆಚ್ ಹಾಕಿದ್ರಾ ‘ಸಮಾಜ ಸೇವಕ’ ಮುತ್ತಪ್ಪ ರೈ?
ಸಮಾಜ ಸೇವೆ:ಭೂಗತ ಲೋಕದಿಂದ ವಿಮುಖರಾದ ಮುತ್ತಪ್ಪ ರೈ ‘ಜಯ ಕರ್ನಾಟಕ’ ಎಂಬ ರಾಜಕೀಯೇತರ ಸಾಮಾಜಿಕ ಸಂಘಟನೆ ಸ್ಥಾಪಿಸಿ ಅದರ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ವರ್ಷದ ಹಿಂದಷ್ಟೇ ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದು, ಅನಾರೋಗ್ಯದ ಬಳಿಕ ರಾಜೀನಾಮೆ ಪ್ರಕಟಿಸಿದ್ದರು.——-
ಭೂಗತ ಲೋಕದ ಮಾಜಿ ಡಾನ್​​ಗೆ ಮರುಜನ್ಮ ನೀಡಿದ ಬಿಡದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 1 =
Remember me
