ರಾಮನಗರ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಇಡೀ ಭೂಗತ ಜಗತ್ತಿನ ಡಾನ್ ಆಗಿ ಮೆರೆದ ಮುತ್ತಪ್ಪರೈಗೆ ಮರುಹುಟ್ಟು ನೀಡಿದ್ದು ಬಿಡದಿ. ಅದುವೇ ಅವರ ನಂತರದ ಬದುಕಿನ ಅಚ್ಚು ಮೆಚ್ಚಿನ ಸ್ಥಳವೂ ಆಗಿತ್ತು. ಭೂಗತಲೋಕದ ನಂಟಿನ ಕಾರಣಕ್ಕೆ ರೈ ವಿರುದ್ದ ಹಲವಾರು ಪ್ರಕರಣಗಳು ದಾಖಲಾಗಿದ್ದವು, ಇದರ ನಡುವೆ ವಿರೋಧಿಗಳಿಂದ ಅವರಿಗೆ ಪ್ರಾಣ ಬೆದರಿಕೆಯೂ ಇತ್ತು. ಹೀಗಾಗಿಯೇ ಬೆಂಗಳೂರು ಸುರಕ್ಷಿತವಲ್ಲ ಎಂದು ಬಿಡದಿಯನ್ನೇ ಆಯ್ಕೆ ಮಾಡಿಕೊಂಡರು ರೈ. ಬಿಡದಿಯಲ್ಲಿ ಲ್ಯಾಂಡ್ ಡೆವೆಲಪರ್ ಆಗಿ ಪ್ರವೇಶ ಪಡೆದ ಮುತ್ತಪ್ಪ ರೈ 2004ರಿಂದಲೂ ಬಿಡದಿಯಲ್ಲೇ ಸ್ವಂತ ಮನೆಯನ್ನು ಮಾಡಿಕೊಂಡು, ಇಲ್ಲಿಂದಲೇ ತಮ್ಮ ವ್ಯವಹಾರವನ್ನು ಮುಂದುವರಿಸಿದರು.
ಜಯ ಕರ್ನಾಟಕ ಹುಟ್ಟಿದ್ದು ಇಲ್ಲಿಂದಲೇ :ಬಿಡದಿಯಿಂದಲೇ ಬೆಂಗಳೂರಿನ ಸದಾಶಿವ ನಗರ, ಮೈಸೂರು ಮತ್ತು ಸಕಲೇಶಪುರದ ತಮ್ಮ ಮನೆಗಳಿಗೆ ಓಡಾಡುತ್ತಿದ್ದ ಮುತ್ತಪ್ಪ ರೈ ಅವರಿಗೆ ಕನ್ನಡ ನಾಡಿನ ಸೇವೆ ಮಾಡುವ ಹಂಬಲ ಹುಟ್ಟಿಕೊಂಡ ಕಾರಣ ನಾಡು ನುಡಿ ರಕ್ಷಣೆ ರಕ್ಷಣೆಗಾಗಿ ಜಯ ಕರ್ನಾಟಕ ಸಂಘಟನೆ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಬೇಕಾದ ರೂಪುರೇಷೆ ಸಿದ್ಧವಾಗಿದ್ದು ಕೂಡ ಬಿಡದಿಯ ನಿವಾಸದಲ್ಲಿಯೇ. ಸಂಘಟನೆ ಮೂಲಕವೇ ಕನ್ನಡ ಪರ ಹೋರಾಟ, ಸಮಾಜ ಸೇವೆ ಹಾಗೂ ಕೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಮುತ್ತಪ್ಪ ರೈ ಮಾಡುತ್ತಲೇ ಬಂದರು. ಇದರ ಜತೆಗೆ ಸಂಘಟನೆ ಮೂಲಕ ವೃಷಭಾವತಿ ನದಿ ಶುದ್ಧೀಕರಣ ಸಂಬಂಧ ಹೋರಾಟ ಹಮ್ಮಿಕೊಳ್ಳಲು ಮುತ್ತಪ್ಪ ರೈ ಕಾರಣೀಭೂತರಾಗಿದ್ದರು. ಹಲವಾರು ನಾಡು ನುಡಿ ಪರವಾದ ಹೋರಾಟಗಳ ಜತೆಗೆ, ಸಮಾಜ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು ಎನ್ನುವ ಬೃಹತ್ ಜಾಥಾವನ್ನು ಹಮ್ಮಿಕೊಳ್ಲುವ ಮೂಲಕ ಸರ್ಕಾರಕ್ಕೆ ತಮ್ಮ ಶಕ್ತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರು.
ಇದನ್ನೂ ಓದಿ:ನನಗೆ ಕ್ಯಾನ್ಸರ್ ಇದೆ.. ಸಾವಿನ ಹತ್ತಿರದಲ್ಲೇ ಇದ್ದೇನೆ…
ಮಡದಿ ಸಮಾಧಿ ಇಲ್ಲೇ ಇದೆ:ಮುತ್ತಪ್ಪ ರೈ ಅವರ ಪತ್ನಿ ರೇಖಾ ಅವರ ಸಮಾಧಿ ಬಿಡದಿಯಲ್ಲಿಯೇ ಇದೆ. ಅನಾರೋಗ್ಯಕ್ಕೆ ತುತ್ತಾಗಿದ್ದ ರೇಖಾ ಅವರು ಕಳೆದ 7 ವರ್ಷಗಳ ಹಿಂದೆ ತೀರಿಕೊಂಡರು. ಈ ವೇಳೆ ಇಲ್ಲಿಯೇ ಅವರ ಅಂತ್ಯ ಕ್ರಿಯೆಯೂ ನಡೆಯಿತು. ನಂತರ ಪ್ರತಿ ವರ್ಷ ಮುತ್ತಪ್ಪ ರೈ ಅವರು ಪುಣ್ಯ ಸ್ಮರಣೆ ಕಾರ್ಯವನ್ನು ಹಮ್ಮಿಕೊಂಡು ಬರುತ್ತಿದ್ದರು. ಕಳೆದ ಏ.28ರಂದು ಸಹ 7ನೇ ವರ್ಷದ ಪುಣ್ಯ ಸ್ಮರಣೆ ಹಮ್ಮಿಕೊಂಡಿದ್ದರು.
ಕೊನೆ ಪ್ರೆಸ್ ಮೀಟ್ ಇಲ್ಲಿಂದಲೇ:ಮುತ್ತಪ್ಪ ರೈ ಅನಾರೋಗ್ಯದ ವಿಚಾರವಾಗಿ 2020ರ ಜನವರಿ ಸುಮಾರಿಗೆ ಹಲವಾರು ಊಹಾಪೋಹಗಳು ಹಬ್ಬಿದ್ದವು. ಈ ವೇಳೆ ಬಿಡದಿಯ ತಮ್ಮ ಮನೆಯಲ್ಲಿ ನಡೆಸಿದ ಸುದ್ದಿ ಗೋಷ್ಟಿ ಅವರ ಜೀವನದ ಕೊನೆ ಸುದ್ದಿಗೋಷ್ಠಿ. ಸ್ವತಃ ತಮ್ಮ ಕ್ಯಾನ್ಸರ್ ಇರುವುದನ್ನು ಖಚಿತ ಪಡಿಸಿದ್ದ ಮುತ್ತಪ್ಪ ರೈ, ಜೀವನದಲ್ಲಿ ಆರೋಗ್ಯದಿಂದ ಇದ್ದರಷ್ಟೇ ಬದುಕು, ಹಣ ಎಲ್ಲವನ್ನೂ ತಂದುಕೊಡುವುದಿಲ್ಲ ಎಂದು ಭಾವಾನಾತ್ಮಕವಾಗಿ ಮಾತನಾಡಿದ್ದರು ಮತ್ತು ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಬೇಕು ಸರ್ಕಾರ ಸಹ ಈ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕು ಎನ್ನುವ ಮನವಿಯನ್ನು ಮಾಡಿದ್ದರು.
ಇದನ್ನೂ ಓದಿ:ಉದ್ಯಮಿಯ ಹತ್ಯೆಗೆ ಸ್ಕೆಚ್ ಹಾಕಿದ್ರಾ ‘ಸಮಾಜ ಸೇವಕ’ ಮುತ್ತಪ್ಪ ರೈ?
ಈಡೇರದ ಕನಸು:ಒಲಂಪಿಕ್ಸ್​ನಲ್ಲಿ ರಾಜ್ಯದ ಕ್ರೀಡಾಪಟುಗಳು ಚಿನ್ನದ ಪದಕಗಳಿಸುವಂತೆ ಮಾಡಬೇಕು ಎನ್ನುವ ಹಂಬಲ ಮುತ್ತಪ್ಪ ರೈ ಅವರದಾಗಿತ್ತು. ಈ ಕಾರಣಕ್ಕಾಗಿ ತಮಗೆ ಒಲಿದು ಬಂದ ರಾಜ್ಯ ಅಥ್ಲೆಟಿಕ್ಸ್ ಅಸೋಷಿಯೇಷನ್​ನ ಅಧ್ಯಕ್ಷ ಗಾಧಿಯನ್ನು ಒಪ್ಪಿಕೊಂಡಿದ್ದ ಅವರು, ಹಲವಾರು ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದರು. ಆದರೆ ಆರೋಗ್ಯ ಕೈ ಕೊಟ್ಟ ಹಿನ್ನೆಲೆಯಲ್ಲಿ ಅವರ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಈ ಹಿನ್ನೆಲೆಯಲ್ಲಿ ಇದದ ಜವಾಬ್ದಾರಿಯನ್ನು, ಹಾಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್​ನಾರಾಯಣ ಅವರಿಗೆ ಹಸ್ತಾಂತರಿಸುವ ಮಾತುಗಳನ್ನು ಆಡಿದ್ದರು.
ನೂತನ ಅಧ್ಯಕ್ಷರ ನೇಮಕ:ಜಯ ಕರ್ನಾಟಕ ಸಂಘಟನೆಗೆ ನೂತನ ಅಧ್ಯಕ್ಷರನ್ನಾಗಿ ಜಗದೀಶ್ ಅವರನ್ನು ನೇಮಕ ಮಾಡಲಾಗಿದ್ದು, ನಮ್ಮ ಸಂಘಟನೆಯನ್ನು ಮುಂದಿನ ದಿನಗಳಲ್ಲಿ ಈ ನಾಡಿನ ನೆಲ, ಜಲ, ಭಾಷೆ ಸಂರಕ್ಷಣೆ ವಿಚಾರದಲ್ಲಿ ಅವರು ಎಲ್ಲರನ್ನೂ ಒಗ್ಗೂಡಿಸಿ ವಿಶ್ವಾಸದೊಂದಿಗೆ ಕೆಲಸ ಮಾಡಿಕೊಂಡು ಹೋಗುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ರೈ ಹೇಳಿಕೊಂಡಿದ್ದರು.==
ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ವಿಧಿವಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + four =
Remember me
