ಕೊಯಂಬತ್ತೂರು:18ನೇ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿದೆ. ಈ ಬಾರಿ ಬಿಜೆಪಿ 400 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ, ಈ ಬಾರಿ ಅಂದುಕೊಂಡಂತೆ ಬಿಜೆಪಿ ಮ್ಯಾಜಿಕ್​ ನಂಬರ್​ ಕ್ರಾಸ್​ ಮಾಡಿದ್ದು, ಸರ್ಕಾರ ರಚಿಸುವತ್ತ ದಾಪುಗಾಲಿಟ್ಟಿದೆ.
ಬಿಜೆಪಿಯ ಸ್ಟಾರ್ ಪ್ರಚಾರಕ ಹಾಗೂ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕೆ. ಅಣ್ಣಾಮಲೈ ಕೊಯಂಬತ್ತೂರು ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಆದರೆ, ಅದೃಷ್ಟ ಅವರ ಕೈಯನ್ನು ಅಷ್ಟಾಗಿ ಹಿಡಿದಿಲ್ಲ. ಡಿಎಂಕೆ ಅಭ್ಯರ್ಥಿ ಪಿ. ಗಣಪತಿ ರಾಜ್​ಕುಮಾರ್​ ಎದುರು 73,696 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಇತ್ತ ಅಣ್ಣಾಮಲೈ ಸೋಲು ಖಚಿತವಾಗುತ್ತಿದ್ದಂತೆ ಡಿಎಂಕೆ ನಾಯಕರು ಮಟನ್​ ಬಿರಿಯಾನಿ ಹಂಚಿ ಸಂಭ್ರಮಿಸಿದ್ದಾರೆ.
Celebrating the setback for TN BJP Chief@annamalai_kin#Coimbatore#TamilNadu,#DMKcadre parade a goat (hinting at#Annamalai) at their party HQ in#chennaiDMK had earlier said it would be "Goat Biriyani" in Coimbatore..(BJP State Prez is 2nd and trails by 24K votes)pic.twitter.com/Gc00Xsu3Qv
ಇದನ್ನೂ ಓದಿ:ಕಾಂಗ್ರೆಸ್​ ಅಭ್ಯರ್ಥಿ ಗೆಲುವಿನ ಸುದ್ದಿ ಕೇಳಿ ಮೂರ್ಛೆ ಹೋದ ಬಿಜೆಪಿ ಅಧ್ಯಕ್ಷ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಡಿಎಂಕೆ ಕಾರ್ಯಕರ್ತರು ಮೇಕೆಯ ಕೊರಳಲ್ಲಿ ಅಣ್ಣಾಮಲೈ ಫೋಟೋವನ್ನು ನೇತುಹಾಕಿ ಮೆರವಣಿಗೆ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಬಳಿಕ ಮಟನ್​ ಬಿರಿಯಾನಿ ಹಂಚಿ ಡಿಎಂಕೆ ನಾಯಕರು ಅಣ್ಣಾಮಲೈ ಸಿಂಘಂ ಅಲ್ಲಾ ಆಡು ಎಂದು ಲೇವಡಿ ಮಾಡುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ವಿಚಿತ್ರವೆಂದರೆ ಇಂದು (ಜೂನ್ 04) ಅಣ್ಣಾಮಲೈ ಅವರ ಜನ್ಮದಿನವೂ ಹೌದು. ಬಿಜೆಪಿಯಲ್ಲಿ ಈ ಬಾರಿ ಗೆಲ್ಲುವ ಕುದುರೆಯ ಪಟ್ಟಿಯಲ್ಲಿದ್ದ ಅಣ್ಣಾಮಲೈ ತಮ್ಮ ಹುಟ್ಟುಹಬ್ಬದಂದೇ ಸೋಲಿನ ರುಚಿ ನೋಡುವಂತಾಗಿದೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:seven − 2 =
Remember me
