ಮಾಸ್ಕೋ:ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮಾಸ್ಕೋದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಸಮಾರಂಭದಲ್ಲಿದ್ದ ಜನರಿಗೆ ನಾನು ಇಲ್ಲಿಗೆ ಒಬ್ಬಂಟಿಯಾಗಿ ಬಂದಿಲ್ಲ. ನನ್ನೊಂದಿಗೆ ಭಾರತದ ಮಣ್ಣಿನ ಪರಿಮಳವನ್ನು ಹಾಗೂ 140 ಕೋಟಿ ದೇಶವಾಸಿಗಳ ಪ್ರೀತಿಯನ್ನು ತಂದಿದ್ದೇನೆ ಎಂದು ಹೇಳಿ ಶುಭಾಶಯ ಕೋರಿದರು. ಭಾರತ ಮತ್ತು ರಷ್ಯಾ ನಡುವಿನ ಸಂಬಂಧವನ್ನು ಶ್ಲಾಘಿಸಿದರು.
ಇದನ್ನು ಓದಿ:ಭಾರತದ ಅಭಿವೃದ್ಧಿ ಕಂಡು ವಿಶ್ವವೇ ಅಚ್ಚರಿಗೊಂಡಿದೆ; ಪ್ರಧಾನಿ ಮೋದಿ
ರಷ್ಯಾ ಎಂಬ ಪದವನ್ನು ಕೇಳಿದ ತಕ್ಷಣ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಬರುವ ಮೊದಲ ಪದವೆಂದರೆ ಸಂತೋಷ ಮತ್ತು ದುಃಖದಲ್ಲಿ ಭಾರತದ ಒಡನಾಡಿ ಎಂಬುದು. ರಷ್ಯಾದಲ್ಲಿ ತಾಪಮಾನವು ಹೇಗೆ ಬದಲಾದರೂ ಉಭಯ ರಾಷ್ಟ್ರಗಳ ನಡುವಿನ ಸ್ನೇಹವು ಯಾವಾಗಲೂ ಪ್ಲಸ್ ಆಗಿರುತ್ತದೆ. ಪರಸ್ಪರ ನಂಬಿಕೆ ಮತ್ತು ಗೌರವದ ಆಧಾರದ ಮೇಲೆ ಈ ಸ್ನೇಹವನ್ನು ನಿರ್ಮಿಸಲಾಗಿದೆ.
ಜಾಗತಿಕ ಸಮೃದ್ಧಿಗೆ ಹೊಸ ಶಕ್ತಿ ನೀಡಲು ಭಾರತ ಮತ್ತು ರಷ್ಯಾ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿರುವುದಕ್ಕೆ ಸಂತೋಷವಾಗಿದೆ. ಇಲ್ಲಿ ಇರುವ ನೀವೆಲ್ಲರೂ ಭಾರತ ಮತ್ತು ರಷ್ಯಾ ನಡುವಿನ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದೀರಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ನೀವು ರಷ್ಯಾದ ಸಮಾಜಕ್ಕೆ ಕೊಡುಗೆ ನೀಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಎಲ್ಲಾ ಸಭೆಗಳು ನಂಬಿಕೆ ಮತ್ತು ಗೌರವವನ್ನು ಹೆಚ್ಚಿಸುತ್ತವೆ. ಭಾರತದ ವಿದ್ಯಾರ್ಥಿಗಳು ರಷ್ಯಾ ಮತ್ತು ಉಕ್ರೇನ್ ನಡುವೆ ಸಿಲುಕಿದ್ದಾಗ, ಅವರನ್ನು ಭಾರತಕ್ಕೆ ಮರಳಿ ಕರೆತರುವಲ್ಲಿ ಅಧ್ಯಕ್ಷ ಪುಟಿನ್ ನಮಗೆ ಸಹಾಯ ಮಾಡಿದರು. ಇದಕ್ಕಾಗಿ ರಷ್ಯಾದ ಜನರಿಗೆ ಮತ್ತು ನನ್ನ ಸ್ನೇಹಿತ ಪುಟಿನ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಭಾರತ-ರಷ್ಯಾ ಸ್ನೇಹಕ್ಕಾಗಿ ನನ್ನ ಸ್ನೇಹಿತ ಪುಟಿನ್ ಅವರ ನಾಯಕತ್ವವನ್ನು ವಿಶೇಷವಾಗಿ ಪ್ರಶಂಸಿಸುತ್ತೇನೆ. ಎರಡು ದಶಕಗಳಿಗೂ ಹೆಚ್ಚು ಕಾಲ ಈ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಅವರು ಮಹತ್ತರ ಕೆಲಸ ಮಾಡಿದ್ದಾರೆ. ಕಳೆದ 10 ವರ್ಷಗಳಲ್ಲಿ ನಾನು ಆರನೇ ಬಾರಿಗೆ ರಷ್ಯಾಕ್ಕೆ ಬಂದಿದ್ದೇನೆ ಮತ್ತು ಈ ವರ್ಷಗಳಲ್ಲಿ ನಾವು 17 ಬಾರಿ ಭೇಟಿಯಾಗಿದ್ದೇವೆ ಎಂದರು.
ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸಲು ಮತ್ತಷ್ಟು ಪ್ರಯತ್ನ ಮಾಡಲಾಗುತ್ತದೆ. ಇದಕ್ಕಾಗಿ ರಷ್ಯಾದಲ್ಲಿ ಎರಡು ಹೊಸ ಭಾರತೀಯ ದೂತಾವಾಸಗಳನ್ನು ತೆರೆಯಲಾಗುವುದು. ಇದರಿಂದ ಎರಡು ರಾಷ್ಟ್ರಗಳ ನಡುವಿನ ಪ್ರಯಾಣ ಮತ್ತು ವ್ಯಾಪಾರ ಸುಗಮಗೊಳ್ಳುತ್ತದೆ. ಒಂದು ಹೊಸ ಕಾನ್ಸುಲೇಟ್ ಅನ್ನು ಕಜಾನ್‌ನಲ್ಲಿ ತೆರೆಯಲಾಗುವುದು ಮತ್ತು ಇನ್ನೊಂದು ಯೆಕಟೆರಿನ್‌ಬರ್ಗ್‌ನಲ್ಲಿದೆ ಎಂದು ಹೇಳಿದರು. (ಏಜೆನ್ಸೀಸ್​​)
‘ಸ್ವದೇಶ್​​’ಗೆ ಮೊದಲ ಆಯ್ಕೆ ಶಾರೂಖ್​ ಅಲ್ಲ.. ಹೃತಿಕ್​ ​​! ಸ್ಕ್ರಿಪ್ಟ್​​​ ಓದಿ ಸಿನಿಮಾ ತಿರಸ್ಕರಿಸಿದ್ದೇಕೆ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + three =
Remember me
