ಉತ್ತರಪ್ರದೇಶ:ಪ್ರಾಣಿಗಳು ದುಬಾರಿ ಬೆಲೆಗೆ ಮಾರಾಟವಾಗುವುದನ್ನು ನಾವು ಕೇಳಿದ್ದೇವೆ. ಪ್ರಾಣಿ ಪ್ರಿಯರು ಎಷ್ಟೇ ದುಬಾರಿ ಬೆಲೆಯಾದರು ಕೊಟ್ಟು ಕೊಂಡುಕೊಳ್ಳುವ ಜನರಿದ್ದಾರೆ.  ಬರೋಬ್ಬರಿ 16 ಕ್ವಿಂಟಾಲ್ ತೂಗುವ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತಂತೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.
ಉತ್ತರ ಪ್ರದೇಶದ ಮುಜಾಫರನಗರದಲ್ಲಿ ರಾಷ್ಟ್ರೀಯ ಪ್ರಾಣಿ ಪ್ರದರ್ಶನ ನಡೆದಿತ್ತು. ಹರ್ಯಾಣ, ಪಂಜಾಬ್, ರಾಜಸ್ಥಾನ, ಉತ್ತರಾಖಂಡದಿಂದ ಈ ಪ್ರಾಣಿ ಪ್ರದರ್ಶನಕ್ಕೆ ಜನರು ಆಗಮಿಸಿದ್ದರು. ಏಪ್ರಿಲ್ 6 ಹಾಗೂ 7 ರಂದು ಎರಡು ದಿನಗಳ ಕಾಲ ಪ್ರಾಣಿಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ನಡೆಯಿತು.
ಇದನ್ನೂ ಓದಿ:ಈ ಕುಟುಂಬದಲ್ಲಿ ಬರೀ ಗಂಡು ಮಕ್ಕಳೇ ಜನನ..136 ವರ್ಷಗಳ ಬಳಿಕ ಹೆಣ್ಣು ಮಗುವಿನ ಆಗಮನ!
ಎಮ್ಮೆಗಳು ಸಾಮಾನ್ಯವಾಗಿ 25-30 ಸಾವಿರ ರೂ. ಬೆಲೆ ಬಾಳುತ್ತದೆ. ಆದರೆ ಈ ಎಮ್ಮೆ ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತದೆ. ದಷ್ಟಪುಷ್ಟವಾಗಿದ್ದು, ಬರೋಬ್ಬರಿ 16 ಕ್ವಿಂಟಾಲ್ ತೂಗುವ ಈ ಎಮ್ಮೆ ಇದಾಗಿದೆ. ರಾಷ್ಟ್ರೀಯ ಪ್ರಾಣಿ ಪ್ರದರ್ಶನದಲ್ಲಿ ಹಲವು ಪ್ರಾಣಿಗಳು ಗಮನಸೆಳೆದವು ಅದರಲ್ಲಿ ಈ ಎಮ್ಮೆ. ಪಾಣಿಪತ್​ನ ದಿಡ್ವಾಡಿ ಗ್ರಾಮದ ನರೇಂದ್ರ ಸಿಂಗ್ ಅವರು ಸಾಕಿರುವ ಎಮ್ಮೆ ಘೋಲುವನ್ನು ನೋಡಲು ಪ್ರಾಣಿಪ್ರಿಯರ ದಂಡೇ ನೆರೆದಿತ್ತು.
ದೇಶಾದ್ಯಂತ ಸುಮಾರು 1200 ಜಾನುವಾರುಗಳು ಮತ್ತು 50 ಸಾವಿರ ರೈತರು ಆಗಮಿಸಿದ್ದರು. 150 ಮಳಿಗೆಗಳಲ್ಲಿ ರೈತರಿಗೆ ಪಶುಸಂಗೋಪನೆ ಹಾಗೂ ಕೃಷಿಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ನೀಡಲಾಯಿತು. ಈ ಪೈಕಿ 75 ಮಳಿಗೆಗಳಲ್ಲಿ ಕೃಷಿ ಯಂತ್ರೋಪಕರಣಗಳು, ಡ್ರೋನ್, ಸಸ್ಯಗಳ ಕುರಿತು ಮಾಹಿತಿ ನೀಡಲಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 11 =
Remember me
