ಉತ್ತರಪ್ರದೇಶ:ಮುಜಾಫರ್‌ನಗರದ ಶಾಲಾ ಶಿಕ್ಷಕಿಯೊಬ್ಬರು ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಇತರ ವಿದ್ಯಾರ್ಥಿಗಳಿಗೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗಿತ್ತು.
ಇದೀಗ ಮುಸ್ಲಿಂ ವಿದ್ಯಾರ್ಥಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಿದ್ದ ನದೀಮ್ ಹೇಳಿಕೆ ಮುನ್ನೆಲೆಗೆ ಬಂದಿದೆ. ಅದರಲ್ಲಿ ಧರ್ಮದ ಬಗ್ಗೆ ಟೀಚರ್ ಯಾವುದೇ ಟೀಕೆ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಆದರೆ “ಮುಸ್ಲಿಂ ಮಹಿಳೆಯರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸುವುದಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಅಂತರ್ಜಾಲದಲ್ಲಿ ತಪ್ಪು ಅರ್ಥ ನೀಡಿ ವೈರಲ್ ಮಾಡಲಾಗಿದೆ” ಎಂದು ನದೀಮ್ ತಿಳಿಸಿದ್ದಾರೆ.
ಘಟನೆಯ ವಿವರಮನ್ಸೂರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖುಬ್ಬಾಪುರ ಗ್ರಾಮದ ಖಾಸಗಿ ಶಾಲೆಯೊಂದರ ವಿಡಿಯೋ ಶುಕ್ರವಾರ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅದರಲ್ಲಿ ಶಿಕ್ಷಕರು ಎದುರಿನ ಕುರ್ಚಿಯ ಮೇಲೆ ಕುಳಿತಿದ್ದು, ವಿದ್ಯಾರ್ಥಿಯೊಬ್ಬನಿಗೆ ಇತರ ವಿದ್ಯಾರ್ಥಿಗಳು ಕಪಾಳಮೋಕ್ಷ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ಮುಸ್ಲಿಂ ಮಕ್ಕಳ ಶೈಕ್ಷಣಿಕ ಮಟ್ಟದ ಬಗ್ಗೆ ಶಿಕ್ಷಕರು ಮಾತನಾಡಿದ್ದು, ಇದನ್ನು ಆಕ್ಷೇಪಾರ್ಹ ಎಂದು ಬಣ್ಣಿಸಲಾಗಿದೆ. ಅಷ್ಟೇ ಅಲ್ಲ, ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಧರ್ಮಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ವಿಡಿಯೋ ಮಾಡಿರುವುದು ವಿದ್ಯಾರ್ಥಿಯ ಚಿಕ್ಕಪ್ಪವಿಡಿಯೋ ಮಾಡಿರುವ ನದೀಂ ಕೂಡ ಖುಬ್ಬಾಪುರ ನಿವಾಸಿ. ನದೀಮ್ ನನ್ನು ಕೂಡ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಅವರ ಹೇಳಿಕೆಯ ವಿಡಿಯೋ ಕೂಡ ಅಂತರ್ಜಾಲ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅದರಲ್ಲಿ ನದೀಂ ತಾನು ಯಾವುದೋ ಕೆಲಸದ ನಿಮಿತ್ತ ಶಾಲೆಗೆ ಹೋಗಿದ್ದೆ, ಆಗ ತನ್ನ ಸೋದರಸಂಬಂಧಿ ಎಹ್ತೇಷಾಮ್ ಗೆ ಬೇರೆ ವಿದ್ಯಾರ್ಥಿಗಳು ಕಪಾಳಮೋಕ್ಷ ಮಾಡುತ್ತಿದ್ದು, ಶಿಕ್ಷಕಿ ಮುಸ್ಲಿಂ ಮಹಿಳೆಯರು ತಮ್ಮ ತಾಯಿಯ ಮನೆಗೆ ಹೋಗುತ್ತಾರೆ, ಮಕ್ಕಳನ್ನು ನೋಡಿಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದರು. ಇದರಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ ಎಂದರು. ತನ್ನ ವೀಡಿಯೊವನ್ನು ಅಂತರ್ಜಾಲ ಮಾಧ್ಯಮಗಳಲ್ಲಿ ತಪ್ಪು ಅರ್ಥವನ್ನು ತೆಗೆದುಕೊಂಡು ಪ್ರಸಾರ ಮಾಡಲಾಗಿದೆ ಎಂದು ನದೀಮ್ ಹೇಳುತ್ತಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿವಿದ್ಯಾರ್ಥಿಯನ್ನು ಥಳಿಸಿದ ಪ್ರಕರಣವು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಭಾರತ ಸೇರಿದಂತೆ ಗಲ್ಫ್ ರಾಷ್ಟ್ರಗಳ ಅಂತರ್ಜಾಲ ಮಾಧ್ಯಮಗಳಲ್ಲೂ ಎಕ್ಸ್ ಸಾಮಾಜಿಕ ಮಾಧ್ಯದಲ್ಲಿ ಹಂಚಿಕೊಳ್ಳಲಾಗಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, ಅಖಿಲ ಭಾರತ ಇತ್ತೆಹಾದುಲ್ ಮುಸ್ಲಿಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಸಂಸದ ರಾಹುಲ್ ಗಾಂಧಿ, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಮತ್ತು ಗಲ್ಫ್ ರಾಷ್ಟ್ರಗಳ ಅಲ್ ಜಜೀರಾ ಕೂಡ ಅಂತರ್ಜಾಲ ಮಾಧ್ಯಮದಲ್ಲಿ ಈ ವಿಷಯದ ಬಗ್ಗೆ ಟ್ವೀಟ್ ಮಾಡಿದ್ದಾರೆ.
#WATCH| UP: "My son is seven years old. This incident happened on 24th August. The teacher made the students beat my child again & again. My nephew made the video and had gone to school for some work…My seven-year-old child was tortured for an hour or two. He is scared…This…https://t.co/qQ7FaiPbzapic.twitter.com/zEelhTdK6G
— ANI (@ANI)August 26, 2023

ಪ್ರತಿ ಹಂತದಲ್ಲೂ ತನಿಖೆ ನಡೆಸುತ್ತಿರುವ ಪೊಲೀಸರುವಿಷಯ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿದ ನಂತರ ಪೊಲೀಸರು ಪ್ರತಿಯೊಂದು ಅಂಶವನ್ನು ತನಿಖೆ ನಡೆಸುತ್ತಿದ್ದಾರೆ. ವಿಡಿಯೋವನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ರವಿಶಂಕರ್ ಹೇಳಿದ್ದಾರೆ. ಈ ವೇಳೆ ನಿಯಮಾನುಸಾರ ಕ್ರಮ ಜರುಗಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು.
ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಒತ್ತಾಯಿಸಿದ ಶಿಕ್ಷಕಿಯ ವಿಡಿಯೋ ವೈರಲ್; ‘ಮಕ್ಕಳೇ ಭಾರತದ ಭವಿಷ್ಯ, ದ್ವೇಷಿಸಬೇಡಿ’ ಎಂದ ರಾಹುಲ್

Sign in to your account
Please enter an answer in digits:5 + 7 =
Remember me
