ಕೊಚ್ಚಿ:ಸುಮಾರು ನಾಲ್ಕು ಕಿ.ಮೀ ವರೆಗೂ ಉದ್ದೇಶಪೂರ್ವಕವಾಗಿ ಕೇರಳ ರಾಜ್ಯದ ಕೆಎಸ್​ಆರ್​ಟಿಸಿ ಬಸ್​ಗೆ ದಾರಿ ಕೊಡದೆ ಕೀಟಲೆ ಮಾಡಿದ ಬೈಕ್​ ಸವಾರನ ವಿರುದ್ಧ ಕಿಡಿಕಾರಿರುವ ಮೋಟಾರು ವಾಹನ ಇಲಾಖೆ ಭಾರಿ ದಂಡ ವಿಧಿಸಿ ಶಾಕ್​ ನೀಡಿದೆ.
ಬೈಕ್​ ಸವಾರನ ಕೀಟಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಕಾನೂನು ಕ್ರಮ ಉಲ್ಲಂಘನೆ ಸಾಕ್ಷಿಯನ್ನಾಗಿ ಪರಿಗಣಿಸಿದೆ. ಈ ಘಟನೆ ಸೆಪ್ಟೆಂಬರ್​ 26 ರಂದು ಮಧ್ಯಾಹ್ನ 1.30ರ ಸುಮಾರಿಗೆ ನಡೆದಿದೆ.
ಕೆಎಸ್​ಆರ್​ಟಿಸಿ ಕಣ್ಣೂರಿನಿಂದ ಕಾಸರಗೋಡಿಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಪೆರುಂಬಾ ಮಾರ್ಗ ಮಧ್ಯೆ ಬಸ್​ ಮುಂದೆ ಬಂದ ಬೈಕ್​ ಸವಾರ ಮುಂದಿನ ನಾಲ್ಕು ಕಿ.ಮೀ ವರೆಗೂ ಓವರ್​ಟೇಕ್​ ಮಾಡಲು ಬಸ್​ಗೆ ಅವಕಾಶವನ್ನೇ ನೀಡಲಿಲ್ಲ. ಬಸ್ ಎಷ್ಟೇ​ ಹಾರ್ನ್​ ಮಾಡಿದರೂ, ಚಾಲಕ ಮತ್ತು ಕಂಡಕ್ಟರ್​ ಮನವಿ ಎಷ್ಟೇ ಮಾಡಿಕೊಂಡರೂ ದಾರಿ ಬಿಡದೆ ಅಡ್ಡಾದಿಡ್ಡಿ ಚಲಿಸುವ ಮೂಲಕ ಬಸ್​ನಲ್ಲಿದ್ದವರಿಗೆ ಕಿರಿಕಿರಿ ಉಂಟುಮಾಡಿದ.
ಇದನ್ನೂ ಓದಿ:ತನ್ನ ಪತಿಯೊಂದಿಗೆ ತಾಯಿಯ ಅಕ್ರಮ ಸಂಬಂಧ: ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​!
ಇದೇ ವೇಳೆ ಬಸ್​ನಲ್ಲಿದ್ದ ಪ್ರಯಾಣಿಕರೊಬ್ಬರು ಬೈಕ್​ ಸವಾರನ ಕುಚೇಷ್ಟೆಯನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು. ಇದನ್ನು ಗಮನಿಸಿದ ಮೋಟಾರು ವಾಹನ ಇಲಾಖೆ ತಕ್ಷಣ ಬೈಕ್​ ಸವಾರನ ವಿರುದ್ಧ ಕ್ರಮಕ್ಕೆ ಸೂಚಿಸಿತು. ಜಿಲ್ಲಾ ಸಾರಿಗೆ ಅಧಿಕಾರಿಗಳು ದೂರು ದಾಖಲಿಸಿದ ಬೆನ್ನಲ್ಲೇ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ಬೈಕ್​ ಸವಾರನ ಮನೆಯ ಬಾಗಿಲು ಬಡಿದರು.
ಅಪಾಯಕಾರಿ ಬೈಕ್​ ಸವಾರಿ ಮಾಡಿದ್ದಲ್ಲದೆ, ಇತರೆ ವಾಹನಕ್ಕೆ ತೊಂದರೆ ನೀಡಿದ್ದಕ್ಕೆ ಬೈಕ್​ ಸವಾರನಿಗೆ ಬರೋಬ್ಬರಿ 1,05,000 ದಂಡವನ್ನು ಅಧಿಕಾರಿಗಳು ವಿಧಿಸಿದ್ದಾರೆ.(ಏಜೆನ್ಸೀಸ್​)

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 − eleven =
Remember me
