ಹೈದರಾಬಾದ್:ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಇದೀಗ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ದೇಶದಲ್ಲಿ ದ್ವೇಷ ಕೊನೆಗಾಣಿಸುವುದೇ ತಮ್ಮ ಪರಮ ಗುರಿ ಎಂದಿದ್ದಾರೆ.
ತೆಲಂಗಾಣದ ನಾಂಪಪಲ್ಲಿಯಲ್ಲಿ ಚುನಾವಣಾ ರ‍್ಯಾಲಿಯನ್ನಯದ್ಧೇಶಿಸಿ ಮಾತನಾಡಿದ ರಾಹುಲ್ ಗಾಂಧಿ ದೇಶದಲ್ಲಿ ದ್ವೇಷ ವ್ಯಾಪಕವಾಗಿ ಹರಡಲು ಆರ್​ಎಸ್​ಎಸ್​, ಮೋದಿ ಹಾಗೂ ಕೆಲ ಕಠಿಣವಾದಿಗಳು ಕಾರಣ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್​ ಪಕ್ಷ ದೇಶದಲ್ಲಿ ಭಾರತ್​ ಜೋಡೋ ಯಾತ್ರೆ ನಡೆಸಿದ ಸಂದರ್ಭದಲ್ಲಿ ನಫ್ರತ್​ ಕಾ ಬಜಾರ್​ನಲ್ಲಿ ಮೊಹಬ್ಬತ್​ ಕಿ ದುಕಾನ್​ ತೆರೆಯುವುದಾಗಿ ಘೋಷಿಸಿತ್ತು. ನಾನು ಮೋದಿ ವಿರುದ್ಧ ಹೋರಾಟ ಶುರು ಮಾಡಿದ ನಂತರ ದೇಶಾದ್ಯಂತ ನನ್ನ ವಿರುದ್ಧ 24 ಪ್ರಕರಣಗಳು ದಾಖಲಾದವು. ಕಾಲಕಾಲಕ್ಕೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯದಿಂದ ಸಮನ್ಸ್​ ಜಾರಿ ಮಾಡಲಾಗುತ್ತಿದೆ.
ಇದನ್ನೂ ಓದಿ:ಲಾಂಚ್​ಗೂ ಮುನ್ನವೇ ರೋಲ್​ ರಾಯ್ಸ್​ ಸ್ಪೆಕ್ಟರ್​ ಕಾರು ಖರೀದಿಸಿದ ಬಿಲ್ಡರ್; ಈ ಕಾರಣಕ್ಕೆ ಸ್ವ್ಯಾಗ್​ ಎಂದ ನೆಟ್ಟಿಗರು
ಮಾನನಷ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಸಂಸತ್​ ಸದಸ್ಯತ್ಯವನ್ನು ಅನರ್ಹಗೊಳಿಸಲಾಯಿತು, ನನ್ನ ಮನೆಯನ್ನು ಕಸಿದುಕೊಳ್ಳಲಾಯಿತು. ಆಧರೆ, ನಾನು ದೇಶದ ಕೋಟ್ಯಂತರ ಜನರ ಮನಸ್ಸಿನಲ್ಲಿ ನೆಲೆಸಿದ್ದೇನೆ. ನಾನು ಸೈದ್ಧಾಂತಿಕವಾಗಿ ಹೋರಾಡುತ್ತಿದ್ದು, ಇದರಲ್ಲಿ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ. ನನ್ನ ಪರಮ ಗುರಿ ನರೇಂದ್ರ ಮೋದಿ ಅವರನ್ನು ಸೋಲಿಸುವುದು ಎಂದಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಮೋದಿ ಸೋಲುವುದನ್ನು ಖಚಿತಪಡಿಸಬೇಕೆಂದರೆ ಮೊದಲಿಗೆ ನಾವು ತೆಲಂಗಾಣದಲ್ಲಿ ಬಿಆರ್​ಎಸ್​ ದುರಾಡಳಿತಕ್ಕೆ ಕೊನೆಗಾಣಿಸಬೇಕು. ಬಿಆರ್​ಎಸ್​, ಬಿಜೆಪಿ, ಎಐಎಂಐಎಂ ಪಕ್ಷಗಳು ಈಗಾಗಲೇ ಮೈತ್ರಿ ಮಾಡಿಕೊಂಡಿದ್ದು, ಸಂಸತ್ತಿನಲ್ಲಿ ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಬೆಂಬಲಿಸುತ್ತ ಬಂದಿವೆ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯ ಚುನಾವಣೆ ಮುಂದಬರು ಲೋಕಸಭೆ ಎಲೆಕ್ಷನ್​ಗೆ ಸೆಮಿಫಿನಾಲೆ ಎಂದೇ ಹೇಳಲಾಗಿದೆ. 119 ಸದಸ್ಯಬಲದ ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 8 =
Remember me
