ಮುಂಬೈ:ಅಕ್ರಮವಾಗಿ 200 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾದ ಆರೋಪಿ ಸುಕೇಶ್ ಚಂದ್ರಶೇಖರ್ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದು ಕೊಂಡೇ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರಿಗೆ ‘ಹ್ಯಾಪಿ ಈಸ್ಟರ್’ ಎಂದು ಶುಭಕೋರಿ ಪತ್ರ ಬರೆದಿದ್ದಾರೆ.
“ಮೈ ಬೇಬಿ ಮೈ ಬೊಮ್ಮಾ, ಜಾಕ್ವೆಲಿನ್, ಬೇಬಿ ಐ ವಿಶ್ ಯು ವೆರಿ ಹ್ಯಾಪಿ ಈಸ್ಟರ್. ಬೇಬಿ ನಾನು ನಿನಗೆ ಈಸ್ಟರ್ ಶುಭಾಶಯಗಳನ್ನು ಕೋರುತ್ತೇನೆ. ನಿಮ್ಮ ನೆಚ್ಚಿನ ಹಬ್ಬಗಳಲ್ಲಿ ಇದು ಒಂದಾಗಿದೆ ಮತ್ತು ಈಸ್ಟರ್ ಮೊಟ್ಟೆಗಳ ಮೇಲಿನ ನಿಮ್ಮ ಪ್ರೀತಿ. ನಿಮ್ಮೊಂದಿಗೆ ಇರುವುದನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈ ಗ್ರಹದಲ್ಲಿ ನಿನ್ನಷ್ಟು ಸುಂದರಿ ಯಾರೂ ಇಲ್ಲ. ನನ್ನ ಬನ್ನಿ ಮೊಲ, ನಾನು ನಿನ್ನನ್ನು ಪ್ರೀತಿಸುತ್ತೇನೆ’ ನೀನು ಮತ್ತು ನಾನು ಎಂದೆಂದಿಗೂ ಶಾಶ್ವತ, ನೀವೆಂದು ನನ್ನವರು’ ಎಂದು ಸುಕೇಶ್ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಗರ್ಭದಲ್ಲಿರುವಾಗಲೇ ಎರಡು ಶಿಶುಗಳಿಗೆ ತಗುಲಿದ ಕರೊನಾ!ಬೇಬಿ ನಾನು ನಿನ್ನ ಬಗ್ಗೆ ಯೋಚಿಸದ ಕ್ಷಣವಿಲ್ಲ ಮತ್ತು ಅದೇ ರೀತಿ ನಿನಗೂ ಆಗಿದೆ ಎಂದು ನನಗೆ ತಿಳಿದಿದೆ. ಮುಂದಿನ ಈಸ್ಟರ್ ನೀನು ನಿನ್ನ ಜೀವನದಲ್ಲಿ ಆಚರಿಸಿದ ಅತ್ಯುತ್ತಮ ಈಸ್ಟರ್ ಆಗಲಿದೆ. ನಾನು ಆ ರೀತಿಯಾಗುವಂತೆ ಮಾಡುತ್ತೇನೆ, ನನ್ನ ಬೊಂಬೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸುಕೇಶ್ ಅವರು ಜಾಕ್ವೆಲಿನ್ ಫರ್ನಾಂಡೀಸ್ ಮೇಲಿನ ಪ್ರೀತಿಯ ಬಗ್ಗೆ ನಿರಂತರವಾಗಿ ಪತ್ರಗಳನ್ನು ಬರೆಯುತ್ತಲೇ ಇದ್ದಾರೆ. ಈ ಹಿಂದೆ ಬರೆದಿದ್ದ ಪತ್ರಗಳು ಸಾಕಷ್ಟು ವೈರಲ್​​ ಆಗಿವೆ.
ಇದನ್ನೂ ಓದಿ:ಬಂಡೀಪುರದಲ್ಲಿ ಮೋದಿ: ಗಮನ ಸೆಳೆದ ಸಫಾರಿ ಫೋಟೋಗಳುಸುಕೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾಕ್ವೆಲಿನ್ ಫರ್ನಾಂಡಿಸ್ ಇದ್ದಾರೆ. ಕಳೆದ ವರ್ಷ, ಆಗಸ್ಟ್‌ನಲ್ಲಿ ಇಡಿ ದೆಹಲಿ ನ್ಯಾಯಾಲಯದಲ್ಲಿ ಚಂದ್ರಶೇಖರ್ ವಿರುದ್ಧ ಸಲ್ಲಿಸಿದ ಪೂರಕ ಆರೋಪಪಟ್ಟಿಯಲ್ಲಿ ಫೆರ್ನಾಂಡಿಸ್ ಅವರನ್ನು ಆರೋಪಿಯನ್ನಾಗಿ ಮಾಡಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − thirteen =
Remember me
