ನವದೆಹಲಿ:ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಕ್ರಿಕೆಟ್ ಲೋಕದಲ್ಲಿ ಅಜಾತಶತ್ರು ಎಂದೇ ಖ್ಯಾತರಾಗಿದ್ದಾರೆ. ಧೋನಿಯನ್ನು ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಟೀಕೆ ಮಾಡಿದ್ದಾರೆ. ಈ ಕುರಿತಾದ ಸುದ್ದಿ ಎಲ್ಲಡೆ ವೈರಲ್​ ಆಗುತ್ತಿದ್ದಂತೆ ಈಗ ಯುವರಾಜ್​ ಸಿಂಗ್​​ ತಂದೆ ಕುರಿತಾಗಿ ಮಾತನಾಡಿರುವ ಹಳೆ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.
ಯೋಗರಾಜ್​​ ಸಿಂಗ್​ ಭಾರತದ ಮಾಜಿ ಕ್ರಿಕೆಟಿಗ, ನಟ ಕೂಡ ಹೌದು. ಇವರು ಸಂದರ್ಶನವೊಂದರಲ್ಲಿ ಮಾತನಾಡಿ, ಯುವರಾಜ್​ ಸಿಂಗ್​​ನ ವೃತ್ತಿ ಜೀವನ ಕೊನೆಗೊಳ್ಳಲು ಧೋನಿ ಕಾರಣ. ಯುವಿ ಇನ್ನೂ 4-5 ವರ್ಷ ಆಡಬಹುದಿತ್ತು ಎಂದು ಮಹೇಂದ್ರ ಸಿಂಗ್​ ಧೋನಿ ಬಗ್ಗೆ ಗಂಭೀರ ಆರೋಪ ಮಾಡಿದ್ದರು.
Yuvraj Singh – "My father has mental issues". 👀#MSDhoni#YuvrajSinghpic.twitter.com/tgxiXHKAhyhttps://t.co/f6GnO65Id2
— Sports with naveen (@sportswnaveen)September 2, 2024

ಅವರೊಬ್ಬ ಮಹಾನ್ ಕ್ರಿಕೆಟಿಗ ಆದರೆ ನನ್ನ ಮಗನಿಗೆ ಆತ ಮಾಡಿದ್ದು ಈಗ ಬೆಳಕಿಗೆ ಬರುತ್ತಿದೆ. ಅವನು ಎಂದಿಗೂ ಕ್ಷಮಿಸುವುದಿಲ್ಲ. ನನ್ನ ಜೀವನದಲ್ಲಿ ನಾನು ಎರಡು ಕೆಲಸಗಳನ್ನು ಮಾಡಿಲ್ಲ – ಮೊದಲನೆಯದಾಗಿ, ನನಗೆ ಅನ್ಯಾಯ ಮಾಡಿದವರನ್ನು ನಾನು ಎಂದಿಗೂ ಕ್ಷಮಿಸಿಲ್ಲ. ಎರಡನೆಯದಾಗಿ, ತಪ್ಪು ಮಾಡಿದವರು ನನ್ನ ಕುಟುಂಬದ ಸದಸ್ಯರಾಗಲಿ ಅಥವಾ ನನ್ನ ಮಕ್ಕಳಾಗಲಿ ನಾನು ಯಾರನ್ನೂ ಕ್ಷಮಿಸುವುದಿಲ್ಲ ಎಂದಿದ್ದರು.
ಕಪಿಲ್​ ದೇವ್​ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದರು. ಈ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೀಗ ಇದರ ಬೆನ್ನಲ್ಲೇ ಯುವರಾಜ್​ ಸಿಂಗ್​ ತನ್ನ ತಂದೆಯ ಬಗ್ಗೆ ಮಾತನಾಡಿದ ಸಂಗತಿ ಇದೀಗ ವೈರಲ್​ ಆಗಿದೆ.
9 ತಿಂಗಳ ಹಿಂದೆ ಪಾಡ್​​ಕಾಸ್ಟ್​ವೊಂದರಲ್ಲಿ ಮಾತನಾಡಿದ ಯುವರಾಜ್​ ಸಿಂಗ್​​​, ‘ನಮ್ಮ ತಂದೆಗೆ ಮಾನಸಿಕ ಸಮಸ್ಯೆಯಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಅವರು ಮಾತ್ರ ಇದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಇದು ಅವರು ಗಮನಹರಿಸಬೇಕಾದ ವಿಷಯವಾಗಿದೆ. ಆದರೆ ಅವರು ಅದನ್ನು ಗಂಭೀರವಾಗಿ ಒಪ್ಪಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × three =
Remember me
