ಪಂಜಾಬ್:ದೇಹದ ಮೇಲೆ ಕೂದಲು ಬೆಳೆಯುವುದು ಸಹಜವಾಗಿದೆ.  ಇಲ್ಲೊಬ್ಬಾತ ಹೆಂಡ್ತಿಯ ಮುಖದ ಮೇಲೆ ಕೂದಲು ನೋಡಿ ಆಕೆಗೆ ಡಿವೋರ್ಸ್ ಕೊಟ್ಟುಬಿಟ್ಟಿದ್ದಾನೆ. ನಂತರ ಪಂಜಾಬ್​ ಮಹಿಳೆ ಗಡ್ಡ, ಕೂದಲು ಬಿಟ್ಟುಕೊಂಡು ಪುರುಷನಾಗಿ ಬದಲಾಗಿದ್ದಾರೆ.
ಮನ್‌ದೀಪ್‌ ಎಂಬ ಮಹಿಳೆ ಕೂದಲು ಬಿಟ್ಟುಕೊಂಡು ಪುರುಷನಾಗಿ ಬದಲಾಗಿದ್ದಾರೆ. ಅವರು ಮುಖದ ಮೇಲಿನ ಕೂದಲನ್ನು ಹಾಗೆಯೇ ಬಿಟ್ಟುಕೊಳ್ಳುವ ನಿರ್ಧಾರ ಮಾಡಿದ ಬಳಿಕ ಹತ್ತಕ್ಕೂ ಹೆಚ್ಚು ವರ್ಷ ಜತೆಯಾಗಿದ್ದ ಪತಿ ದೂರವಾಗಿದ್ದಾನೆ.
ಇದನ್ನೂ ಓದಿ:ಅದ್ಧೂರಿ ಮದುವೆ; ರಾತ್ರಿ ಇಡೀ 28 ಕಿ.ಮೀ​ ನಡೆದು ಮಂಟಪಕ್ಕೆ ಬಂದ ವರ!
ಮದುವೆಗೂ ಮುನ್ನ ಮುಖದಲ್ಲಿ ಕೂದಲಿರಲಿಲ್ಲ. ನಂತರ ನನ್ನ ಮುಖದ ಮೇಲೆ ಕೂದಲು ಹೇಗೆ ಬಂದಿತು ಮತ್ತು ಜೀವನವು ಹೇಗೆ ಸಂಪೂರ್ಣವಾಗಿ ಬದಲಾಯಿತು ಎಂಬುದನ್ನು ಮನ್‌ದೀಪ್ ವಿವರಿಸಿದ್ದಾರೆ. ಮುಖದ ಮೇಲಿನ ಕೂದಲು ನೋಡಿದ ಪತಿ ವಿಚ್ಛೇದನಕ್ಕೆ ಒತ್ತಾಯಿಸಲು ಪ್ರಾರಂಭಿಸಿದರು. ನಾನು ಖಿನ್ನತೆಗೆ ಒಳಗಾಗುವ ರೀತಿಯಲ್ಲಿ ಗಂಡನ ವರ್ತನೆ ಬದಲಾಯಿತು. ಮಾನಸಿಕ ಆರೋಗ್ಯಕ್ಕಾಗಿ ಗುರುದ್ವಾರಕ್ಕೆ ಹೋಗಲು ಪ್ರಾರಂಭಿಸಿದೆ. ನಂತರ ಕೂದಲನ್ನು ಕ್ಷೌರ ಮಾಡಲು ನಿರಾಕರಿಸಿದರು.
ಇದನ್ನೂ ಓದಿ:ಪಿತ್ರಾರ್ಜಿತ ಆಸ್ತಿಯಲ್ಲಿ ಮುಸ್ಲಿಂ ಮಹಿಳೆಗೆ ಸಮಾನ ಪಾಲಿಲ್ಲ!; ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮಹಿಳೆ!
ಕೂದಲನ್ನ, ಗಡ್ಡವನ್ನು ಹಾಗೆಯೇ ಬಿಟ್ಟಿದ್ದಾರೆ. ಹೊಸ ಮೋಟಾರ್ ಬೈಕ್‌ನ್ನು ಓಡಿಸುತ್ತಾರೆ. ಜನರು ಸಹ ಅವರನ್ನು ಪುರುಷ ಎಂದು ಅಂದುಕೊಳ್ಳಲು ಆರಂಭಿಸಿದ್ದಾರೆ. ಮನ್ ದೀಪ್‌ ಪಂಜಾಬ್‌ನಲ್ಲಿ ತನ್ನ ಸಹೋದರರೊಂದಿಗೆ ಕೆಲಸ ಮಾಡುತ್ತಾ ಕೃಷಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಹೀಗೆ ಮುಖದ ಕೂದಲನ್ನು ಒಪ್ಪಿಕೊಂಡಿರುವುದು ಮನ್‌ದೀಪ್ ಮಾತ್ರವಲ್ಲ, ಈ ಹಿಂದೆ ಹರ್ನಮ್‌ ಕೌರ್ ಎಂಬವರು ತಮ್ಮ 11 ನೇ ವಯಸ್ಸಿನಲ್ಲಿ ಬೆಳೆಯಲು ಪ್ರಾರಂಭಿಸಿದ ಮುಖದ ಕೂದಲನ್ನು ಹಾಗೆ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ.
ಏಷ್ಯಾದಲ್ಲೇ ಮೊದಲು; ಎರಡೂ ತೋಳುಗಳ ಯಶಸ್ವಿ ಶಸ್ತ್ರಚಿಕಿತ್ಸೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
